ಸೋಮವಾರ, ಮೇ 10, 2021
21 °C

ಸ್ವ ಉದ್ಯೋಗಕ್ಕೆಮಾದರಿ ಬೇಕರಿ

-ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಹೆಚ್ಚು ಓದಲಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಕಾಲ ಇದಲ್ಲ. ಹಣ ಗಳಿಸಬೇಕೆಂದರೆ ಏನಾದರೂ ಉದ್ಯೋಗ ಮಾಡಲೇಬೇಕು.ಆದರೆ ಮಾಡುವ ಕೆಲಸದಿಂದ ಸಾಕಷ್ಟು ಆದಾಯವೂ ಬರಬೇಕು ಎನ್ನುವುದು ಇಂದಿನ ಯುವಜನರ ನಿರೀಕ್ಷೆ. ಇಂತಹ ಆದ್ಯತೆಯನ್ನು ಉದ್ದೇಶವಾಗಿ ಇಟ್ಟುಕೊಂಡು ಕೆಲವು ಸಂಸ್ಥೆಗಳು ಉದ್ಯೋಗ ಅವಲಂಬಿತ ಬೇಕರಿ ಉತ್ಪನ್ನ ತಯಾರಿಕೆಯ ತರಬೇತಿ ನೀಡುತ್ತಿವೆ.`ಕಳೆದ 10 ವರ್ಷಗಳಿಗೆ ಹೋಲಿಸಿದರೆ ಈಗ ಬೇಕರಿ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ. ನಗರ ಪ್ರದೇಶಗಳಲ್ಲಿ ಮಾಲ್‌ಗಳು ಹೆಚ್ಚುತ್ತಿರುವುದರಿಂದ ತಿಂಡಿ ತಿನಿಸು ತಯಾರಿಕಾ ಕ್ಷೇತ್ರವೂ ವಿಸ್ತರಿಸಿದೆ.ಮನೆಯಲ್ಲಿ ಸುಮ್ಮನೆ ಕುಳಿತು ಟಿ.ವಿ. ನೋಡುತ್ತಿರುವವರ ಕೈಯಲ್ಲೂ ತಿಂಡಿ ತಿನಿಸು ಇದ್ದೇ ಇರುತ್ತದೆ. ಇಂತಹ ಅವಕಾಶಗಳನ್ನು ಬಂಡವಾಳವಾಗಿ ಇಟ್ಟುಕೊಂಡು ಸ್ವ ಉದ್ಯೋಗವನ್ನು ಆರಂಭಿಸಬಹುದು' ಎನ್ನುವುದು ಬೆಂಗಳೂರಿನ ಇನ್ಸ್‌ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ ಸಂಸ್ಥೆಯ (ಐಬಿಸಿಎ) ನಿರ್ದೇಶಕ ಮನೀಶ್ ಗೌರ್ ಅವರ ಅಭಿಪ್ರಾಯ.`ಬೇಕಿಂಗ್ ಕೂಡ ಒಂದು ಕಲೆ. ಅಷ್ಟೇ ಅಲ್ಲ, ದೇಶದ ವಾರ್ಷಿಕ ಆದಾಯದ ಮೂರನೇ ಒಂದು ಭಾಗ ಬೇಕರಿ ಉತ್ಪನ್ನಗಳದ್ದೇ ಆಗಿದ್ದು, ಭಾರತದಲ್ಲಿ ಬ್ರೆಡ್ ಮತ್ತು ಬಿಸ್ಕತ್‌ನಿಂದಲೇ ಶೇ 82ರಷ್ಟು ಆದಾಯ ಇದೆಯಂತೆ. ಆದ್ದರಿಂದ ಭವಿಷ್ಯದಲ್ಲೂ ಬೇಕರಿ ಉತ್ಪನ್ನಗಳ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಅವಕಾಶವಿದೆ. ಅಂತಹ ಉದ್ಯೋಗಕ್ಕೆ ಈ ತರಬೇತಿ ಅತಿ ಅವಶ್ಯಕ' ಎನ್ನುತ್ತಾರೆ ಅವರು.ಅಗತ್ಯಕ್ಕೆ ತಕ್ಕ ಅವಕಾಶ

13 ವರ್ಷಗಳಿಂದ ಬೇಕರಿ ಉತ್ಪನ್ನಗಳ ತರಬೇತಿ ನೀಡುತ್ತಾ ಬಂದಿರುವ ಸಂಸ್ಥೆಗೆ ಕೆಲ ವರ್ಷಗಳಿಂದೀಚೆ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಜನರ ಆಹಾರದ ಅಗತ್ಯ ದುಪ್ಪಟ್ಟಾಗಿರುವುದರಿಂದ ಅವಕಾಶಗಳೂ ಹೆಚ್ಚಾಗಿವೆ. ಅಲ್ಲದೆ ಹೆಚ್ಚು ಮಂದಿ ಅನಿವಾರ್ಯವಾಗಿ ಸಿದ್ಧ ಆಹಾರಗಳನ್ನೇ ಅವಲಂಬಿಸಿದ್ದಾರೆ.ಈ ಅನಿವಾರ್ಯತೆಯೇ ಉದ್ಯೋಗ ಅವಕಾಶಗಳಿಗೂ ಎಡೆ ಮಾಡಿಕೊಡುತ್ತಿದೆ. ಈ ತರಬೇತಿ ಸರ್ಕಾರದಿಂದಲೂ ಮಾನ್ಯತೆ ಪಡೆದಿರುವುದರಿಂದ ಬೇಗನೆ ಕೆಲಸ ಬಯಸುವ ಯುವಕ/ ಯುವತಿಯರಿಗೆ ತರಬೇತಿ ಅನುಕೂಲ ಎನಿಸಲಿದೆ. ಅದಲ್ಲದೆ, ಮನೆಯಲ್ಲೇ ಇದ್ದು ಸ್ವ ಉದ್ಯೋಗ ಆರಂಭಿಸ ಬಯಸುವವರಿಗೂ ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ.ತರಬೇತಿಯಲ್ಲಿ ಏನೇನಿದೆ?

ತರಬೇತಿಯಲ್ಲಿ ವಿವಿಧ ನಮೂನೆಗಳಿವೆ. ಒಂದು ತಿಂಗಳು, ಎರಡು ತಿಂಗಳ ಅವಧಿಯ ತರಬೇತಿಯ ಆಯ್ಕೆ ಇದೆ. ಹಲವು ಬಗೆಯ ಬೇಕರಿ ಉತ್ಪನ್ನಗಳನ್ನು ತಯಾರಿಸುವುದನ್ನು ಹೇಳಿಕೊಡಲಾಗುತ್ತದೆ.ಇದಕ್ಕೆಂದೇ ಏಳು ತರಬೇತುದಾರರಿದ್ದು, ಪ್ರತಿ ತಂಡದಲ್ಲೂ 20 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರಾಯೋಗಿಕ ಮತ್ತು ಪಠ್ಯಕ್ರಮದ ತರಬೇತಿ ಇರುವುದರಿಂದ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ವಿದ್ಯಾಭ್ಯಾಸ ಕಡ್ಡಾಯ.ಹಲವು ಬಗೆಯ ಆಹಾರ ಉತ್ಪನ್ನಗಳು ಮಾತ್ರವಲ್ಲದೆ, ದಿನೇ ದಿನೇ ಬದಲಾಗುತ್ತಿರುವ ತಿಂಡಿ ತಿನಿಸುಗಳ ಸ್ವರೂಪವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ನಿರ್ದಿಷ್ಟ ತರಬೇತಿ ಮುಗಿದ ನಂತರ ಅಲ್ಲಲ್ಲಿ ಉದ್ಯೋಗಾವಕಾಶವನ್ನೂ ನೀಡಲಾಗುತ್ತದೆ.ತರಬೇತಿಗೆ ಪ್ರಮಾಣಪತ್ರ ದೊರೆಯುವುದರಿಂದ ಸ್ವ ಉದ್ಯೋಗ ಆರಂಭಿಸಲು ಸರ್ಕಾರದಿಂದ ಸಾಲವನ್ನೂ ಪಡೆದುಕೊಳ್ಳಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.