ಶನಿವಾರ, ಮೇ 8, 2021
26 °C

ಹಕ್ಕುಗಳನ್ನು ಪಡೆಯಲು ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: `ಹಕ್ಕುಗಳು ಯಾರೊಬ್ಬರ ಸ್ವತ್ತಲ್ಲ; ಶೋಷಿತರು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು~ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಕರೆ ನೀಡಿದರು.

ಪೀಣ್ಯದ ಆಶ್ರಯನಗರದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರ 121ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.`ಹೋರಾಟಗಳನ್ನು ಮುಂದಿನ ರಾಜಕಾರಣದ ದೃಷ್ಟಿ ಇಟ್ಟುಕೊಂಡು ಮಾಡಬಾರದು. ದಲಿತ ಸಮಾಜದ ಏಳಿಗೆಗಾಗಿ ಹೋರಾಟಗಳನ್ನು ರೂಪಿಸಿ. ನಿಮ್ಮ ಕೂಗು ಸಂಸತ್, ವಿಧಾನ ಸೌಧ ಮುಟ್ಟುವಂತಾಗಲಿ~ ಎಂದು ಅವರು ಹೇಳಿದರು.ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ನರಸಿಂಹಯ್ಯ, ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನಾ.ರಾಮು, ಮುಖಂಡರಾದ ದಾಸಪ್ಪ, ಗಂಗನರಸಣ್ಣ, ರಾಮಕೃಷ್ಣಯ್ಯ, ಲಿಂಗರಾಜು, ವೀರೇಶ್ ಬಳ್ಳಾರಿ, ಕೆ.ಬಾಲಕೃಷ್ಣ, ನಾಗರಾಜಣ್ಣ, ಪಿಳ್ಳಾರೆಡ್ಡಿ, ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷೆ ರತ್ನಮ್ಮ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.