ಶನಿವಾರ, ಸೆಪ್ಟೆಂಬರ್ 21, 2019
21 °C

ಹಕ್ಕುಚ್ಯುತಿ ನೋಟಿಸ್‌ವಾಪಸ್

Published:
Updated:

ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ತಂಡದ ಮೂವರು ಸದಸ್ಯರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ್ದ ಕಾಂಗ್ರೆಸ್‌ನ ಲೋಕಸಭಾ ಸದಸ್ಯ ಅದನ್ನು ಬುಧವಾರ ಹಿಂಪಡೆದಿದ್ದಾರೆ.ಹಜಾರೆ ತಂಡದ ಕಿರಣ್ ಬೇಡಿ, ಅರವಿಂದ ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಹಾಗೂ ಅಣ್ಣಾ ಅವರ ನಿರಶನವನ್ನು ಬೆಂಬಲಿಸಿದ ನಟ ಓಂ ಪುರಿ ಅವರು ಪ್ರಚಾರಗಿಟ್ಟಿಸಿಕೊಳ್ಳಲು ಸಂಸದರ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಪ್ರವೀಣ್ ಸಿಂಗ್ ಅರೋನ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದರು.ಈ ನೋಟಿಸ್ ಅನ್ನು ವಾಪಸು ಪಡೆಯುವುದಾಗಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಅರೋನ್ ಪತ್ರ ಬರೆದಿದ್ದಾರೆ.

 

Post Comments (+)