ಹಖಾನಿ ಜಾಲದೊಂದಿಗೆ ಪಾಕ್ ನಂಟು: ಆರೋಪ

ಸೋಮವಾರ, ಮೇ 27, 2019
33 °C

ಹಖಾನಿ ಜಾಲದೊಂದಿಗೆ ಪಾಕ್ ನಂಟು: ಆರೋಪ

Published:
Updated:

ಇಸ್ಲಾಮಾಬಾದ್/ವಾಷಿಂಗ್ಟನ್, (ಪಿಟಿಐ):  ಕಾಬೂಲ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೇಲೆ ಇತ್ತೀಚೆಗೆ ದಾಳಿ ಮಾಡಿದ ಹಖಾನಿ ಭಯೋತ್ಪಾದಕ ಸಂಘಟನೆಯ ಜತೆ ಪಾಕಿಸ್ತಾನ ಸರ್ಕಾರ ಸಂಪರ್ಕ ಹೊಂದಿರುವ ಬಗ್ಗೆ ಸಾಕ್ಷ್ಯಾಧಾರಗಳು ಇವೆ ಎಂದು ಪಾಕಿಸ್ತಾನದಲ್ಲಿಯ ಅಮೆರಿಕ ರಾಯಭಾರಿ ಕ್ಯಾಮರಾನ್ ಮುಂಟರ್ ತಿಳಿಸಿದ್ದಾರೆ.ರೇಡಿಯೊ ಪಾಕಿಸ್ತಾನಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, `ಪಾಕಿಸ್ತಾನದ ಜತೆಗೆ ನಮ್ಮ ದೇಶ ದ್ವಿಪಕ್ಷೀಯ ಸಂಬಂಧವನ್ನು ಮರು ಸ್ಥಾಪಿಸಬೇಕಾದರೆ ಹಖಾನಿ ಭಯೋತ್ಪಾದಕ ಸಂಘಟನೆಯ ಜತೆಗಿನ ಸಂಪರ್ಕತ್ಯಜಿಸಬೇಕು~ ಎಂದು ಸ್ಪಷ್ಟಪಡಿಸಿದ್ದಾರೆ.ಅಮೆರಿಕ ಮತ್ತು ಪಾಕಿಸ್ತಾನದ ಸಮಾನ ವೈರಿ ಯಾರು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಬೇಕು ಎಂದು ಅವರುತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry