ಹಟ್ಟಿ ಚಿನ್ನದ ಗಣಿ: ಉದ್ಘಾಟನೆಗೊಳ್ಳದ ಮಾರುಕಟ್ಟೆ
ಹಟ್ಟಿ ಚಿನ್ನದ ಗಣಿ: ಹಟ್ಟಿ ಗಣಿ ಕ್ಯಾಂಪಿನಲ್ಲಿ ಅಧಿಸೂಚಿತ ಪ್ರದೇಶ ಸಮಿತಿ ವತಿಯಿಂದ 9ಲಕ್ಷ ಖರ್ಚು ಮಾಡಿ ನಿರ್ಮಿಸಿದ ಮಾಂಸ ಮತ್ತು ಮೀನಿನ ಮಾರುಕಟ್ಟೆ ಕಟ್ಟಡ ಕಳೆದ 2 ವರ್ಷಗಳಿಂದ ಉದ್ಘಾಟನೆಗೊಳ್ಳದೆ ನಿರುಪಯುಕ್ತವಾಗಿದೆ.
2007ರಲ್ಲಿ ಚಿನ್ನದ ಗಣಿ ಕಾರ್ಮಿಕರು ವಾಸಿಸುವ ಕ್ಯಾಂಪಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಎಸ್ಎಫ್ಸಿ ಅನುದಾನದಲ್ಲಿ ಲಕ್ಷಗಟ್ಟಲೆ ಹಣ ಬಿಡುಗಡೆ ಮಾಡಿದೆ. ಅವುಗಲ್ಲಿ ಒಂದಾದ 9 ಲಕ್ಷದ ಮಾಂಸ ಮತ್ತು ಮೀನು ಮಾರುಕಟ್ಟೆ. ಆರಂಭದಲ್ಲಿ ಕಟ್ಟಡ ಕೆಲಸ ಭರದಿಂದ ನಡೆಯಿತು.
ನಂತರ ನಿಧಾನಗೊಂಡು ಬಳಿಕ ಸ್ಥಗಿತಗೊಂಡಿತ್ತು. ಹೀಗಾಗಿ ಈ ಕಾಮಗಾರಿ ಪೂರ್ಣಗೊಳ್ಳಲು 5 ವರ್ಷಗಳು ಹಿಡಿದವು. ಗುತ್ತಿಗೆದಾರರು ಹಾಗೂ ಅಧಿಸೂಚಿತ ಪ್ರದೇಶ ಸಮಿತಿಯ ಮುಖ್ಯಅಧಿಕಾರಿ ಅನುದಾನ ಬಿಡುಗಡೆಯಾಗಿಲ್ಲ. ಬಿಲ್ ಪಾಸ್ ಆಗಿಲ್ಲ.
ಹೀಗೆ ಬೇರೆ ಬೇರೆ ಕಾರಣಗಳು ಹೇಳಿ ಕಾಲ ಹರಣ ಮಾಡಿಕೊಂಡು ಬರುತ್ತಿದ್ದರು. 2012 ಡಿಸೆಂಬರ್ನಲ್ಲಿ ಉದ್ಘಾಟನೆ ಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.
ಈಗ ಈ ಭರವಸೆಕೂಡ ಹುಸಿಯಾಗಿದೆ. ಇದಕ್ಕೆ ಅಳವಡಿಸಿದ ಕಬ್ಬಿಣದ ಸಾಮಗ್ರಿಗಳು ಕಳ್ಳರ ಪಾಲಾಗುತ್ತಿವೆ ಎಂದು ಕಾರ್ಮಿಕರು ದೂರಿದ್ದಾರೆ. ಸಂಬಂಧಪಟ್ಟವರು ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.