ಬುಧವಾರ, ಜೂನ್ 23, 2021
24 °C

ಹಣದುಬ್ಬರ ಇಳಿಕೆ ತಂದ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟು­ವ ಟಿಕೆ ಮತ್ತು ಡಾಲರ್‌ ವಿರುದ್ಧ ರೂಪಾ­ಯಿ ಮೌಲ್ಯದಲ್ಲಿನ ಏರಿಳಿತ ಈ ವಾರ ಷೇರು­ಪೇಟೆ ವಹಿವಾಟಿನ ಗತಿ ನಿರ್ಧರಿ­ಸ ಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ (ಡಬ್ಲ್ಯುಪಿಐ) ದರ ಫೆಬ್ರು­ವ­ರಿಯಲ್ಲಿ 9 ತಿಂಗಳಲ್ಲೇ ಕನಿಷ್ಠ ಮಟ್ಟ ವಾದ ಶೇ 4.68ಕ್ಕೆ ಕುಸಿತ ಕಂಡಿದೆ. ಇದ ರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ಏ.  1ರಂದು ಪ್ರಕಟಿಸಲಿ­ರುವ ಹಣಕಾಸು ನೀತಿ ಪರಾಮರ್ಶೆ­ಯಲ್ಲಿ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ಹೆಚ್ಚಿದೆ. ಹೂಡಿಕೆದಾರರ ವಿಶ್ವಾಸವೂ ಇದರಿಂದ ಮರಳಿದ್ದು, ವಿಶೇಷ­­ವಾಗಿ ಐ.ಟಿ ಮತ್ತು ಔಷಧ ವಲಯದ ಕಂಪೆನಿಗಳ ಷೇರು ಗಳಲ್ಲಿ ಹೂಡಿಕೆ ಹೆಚ್ಚಿದೆ ಎಂದು  ‘ಕೋಟಕ್‌ ಸೆಕ್ಯುರಿಟೀಸ್‌’ ಮುಖ್ಯಸ್ಥ ದಿಪಿನ್‌ ಷಾ ಅಭಿಪ್ರಾಯಪಟ್ಟಿದ್ದಾರೆ.ಉಕ್ರೇನ್‌ ಬಿಕ್ಕಟ್ಟಿಗೆ ಸಂಬಂಧಿಸಿದ ಬೆಳ ವಣಿಗೆಗಳು ಜಾಗತಿಕ ಷೇರು­ಪೇಟೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನು ಹೊರತು­ಪಡಿಸಿದರೆ ಈ ವಾರ ನಕಾರಾತ್ಮಕ ಪ್ರಭಾವ ಬೀರುವ ಯಾವುದೇ ಸಂಗತಿ ಎಲ್ಲ ಎಂದೂ ಅವರು ಹೇಳಿದ್ದಾರೆ.‘ಹಣದುಬ್ಬರ ತಗ್ಗಿರುವ ಹಿನ್ನೆಯಲ್ಲಿ ‘ಆರ್‌ಬಿಐ’ ಖಂಡಿತ ಬಡ್ಡಿ ದರ ಕಡಿತ ಮಾಡ­ಲಿದೆ ಎಂಬ ಭಾರಿ ವಿಶ್ವಾಸದಲ್ಲಿ ಹೂಡಿಕೆದಾರರಿದ್ದಾರೆ’ ಎಂದು ‘ಬೊನಾಂಜಾ ಪೋರ್ಟ್‌ಫೋಲಿಯೊ’ ಸಂಸ್ಥೆ ಹಿರಿಯ ಉಪಾಧ್ಯಕ್ಷ ರಾಕೇಶ್‌ ಗೋಯಲ್‌ ಹೇಳಿದ್ದಾರೆ.ಜಾಗತಿಕ ಅಸ್ಥಿರತೆ ಹೊರತುಪ­ಡಿಸಿ ದರೆ, ಇತ್ತೀಚಿನ ದೇಶೀಯ ಮಟ್ಟದ ಎಲ್ಲ ಬೆಳ­ವಣಿಗೆಗಳು ಹೂಡಿಕೆದಾರರಿಗೆ ಅನು­ಕೂಲಕರವಾಗಿವೆ. ‘ಎಫ್‌ಐಐ’ ಹೂಡಿಕೆ ಮತ್ತು ಸಣ್ಣ ಹೂಡಿಕೆದಾರರ ಚಟು­ವ ಟಿಕೆ ಸೂಚ್ಯಂಕದ ಏರಿಳಿತ ನಿರ್ಧ­ರಿಸಲಿದೆ ಎಂದು ರೆಲಿಗೇರ್‌ ಸೆಕ್ಯುರಿ­ಟೀಸ್‌ನ ಮುಖ್ಯಸ್ಥ ಜಯಂತ್‌ ಮಂಗ್ಲಿಕ್‌ ಅಭಿಪ್ರಾ ಯಪಟ್ಟಿದ್ದಾರೆ.ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ನ  ಮುಕ್ತ ಮಾರುಕಟ್ಟೆ ಸಮಿತಿ (ಎಫ್‌­ಒ ಎಂಸಿ) ಸಭೆ ಮಾ.18 ಮತ್ತು 19ರಂದು ನಡೆಯಲಿದೆ. ಈ ಸಭೆಯಲ್ಲಿ ಆರ್ಥಿಕ ಉತ್ತೇಜನ ಕೊಡುಗೆಗಳನ್ನು ಕಡಿತ ಮಾಡಬೇಕೇ ಬೇಡವೇ ಎನ್ನು­ವುದರ ಕುರಿತು ನಿರ್ಧಾರ ಹೊರ­ಬೀಳಲಿದೆ. ಫೆಡ ರಲ್‌ ರಿಸರ್ವ್‌ನ ಈ ಸಭೆ ಭಾರತವೂ ಸೇರಿದಂತೆ ಪ್ರವರ್ಧ­ಮಾನಕ್ಕೆ ಬರುತ್ತಿ ರುವ ದೇಶಗಳ ಷೇರುಪೇಟೆಗಳ ಮೇಲೆ ಪ್ರಭಾವ ಬೀರಬಹುದು ಎಂದು ಮಾರು ಕಟ್ಟೆ ತಜ್ಞರು ಹೇಳಿದ್ದಾರೆ.ಕಳೆದ ವಾರದಲ್ಲಿ ಸೂಚ್ಯಂಕ ಒಟ್ಟಾರೆ 110 ಅಂಶಗಳಷ್ಟು ಹಾನಿ ಅನುಭವಿ­ಸಿದ್ದು 21,809 ಅಂಶಗಳಿಗೆ ವಹಿ­ವಾಟು ಕೊನೆಗೊಳಿಸಿದೆ. ಹೋಳಿ ನಿಮಿತ್ತ ಮಾ. 17ರಂದು ಷೇರುಪೇಟೆಗೆ ರಜೆ. ವಹಿ ವಾಟು ನಡೆಯುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.