ಹಣದುಬ್ಬರವು ಜನರ ಬದುಕಿನ ಮೇಲೆ ಎಂತಹ ದುಷ್ಪರಿಣಾಮ ಬೀರಿದೆ ಎಂಬುದನ್ನು ಇದೀಗ ವಿವರಿಸಿ ಹೇಳುವ ಅಗತ್ಯ ಇಲ್ಲ. ಕಳೆದ 2-3 ವರ್ಷಗಳಿಂದ ದೇಶ ಹಣದುಬ್ಬರದಿಂದ ತತ್ತರಿಸಿ ಹೋಗಿದೆ. ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧಾರದಲ್ಲಿ ಇದುವರೆಗೆ ಹಣದುಬ್ಬರದ ಪ್ರಮಾಣ ಅಳೆಯಲಾಗುತ್ತಿತ್ತು.

ಆದರೆ, ಇದರ್ಲ್ಲಲಿ ಗ್ರಾಹಕರಿಗೆ ಸಂಬಂಧಿಸಿದ ಅದೆಷ್ಟೋ ವಿಚಾರಗಳು ಗಣನೆಗೆ ಬಾರದೆ ಹೋಗುತ್ತಿದ್ದವು. ಇದನ್ನು ನಿವಾರಿಸು ಕೇಂದ್ರ ಸರ್ಕಾರವು ಇತ್ತೀಚೆಗೆ ಗ್ರಾಹಕ ಲೆ ಸೂಚ್ಯಂಕ (ಸಿಪಿಐ) ರೂಪಿಸಿತ್ತು. ಇದೇ ಪ್ರಥಮ ಬಾರಿಗೆ ಹಣದುಬ್ಬರದ ಸೂಚ್ಯಂಕ ರೂಪಿಸುವಾಗ ಚಿಲ್ಲರೆ ವ್ಯವಹಾರದಲ್ಲಿನ ದರಗಳ ವಿಚಾರವನ್ನೂ ಪರಿಗಣಿಸಲಾಗುತ್ತಿದೆ.

ಗ್ರಾಹಕರು ಹಣದುಬ್ಬರದಿಂದ ಎಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದನ್ನು ಸಗಟು ದರ ಸೂಚ್ಯಂಕಕ್ಕಿಂತ ಗ್ರಾಹಕ ದರ ಸೂಚ್ಯಂಕ ಹೆಚ್ಚು ಕರಾರುವಕ್ಕಾಗಿ ತಿಳಿಸಿಕೊಟ್ಟಿರುವುದು ಕಂಡುಬಂದಿದೆ. ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇಂಧನ, ಬಟ್ಟೆ, ಗೃಹನಿರ್ಮಾಣ ಮತ್ತು ಸೇವಾ ಕ್ಷೇತ್ರಗಳಲ್ಲಿನ ಚಿಲ್ಲರೆ ದರಗಳ ಮಾಹಿತಿಯನ್ನು ಈ ಸೂಚ್ಯಂಕ ನೀಡುವುದರಿಂದ ನೀತಿ ನಿರೂಪಕರಿಗೆ ಇದರಿಂದ ಹೆಚ್ಚು ಪ್ರಯೋಜನ ದೊರೆಯಲಿದೆ.

`ಡಬ್ಲ್ಯುಪಿಐ~ನಲ್ಲಿ 435 ವಸ್ತುಗಳ ಪೈಕಿ 100ಕ್ಕೂ ಅಧಿಕ ವಸ್ತುಗಳು ಹಣದುಬ್ಬರದ ಲೆಕ್ಕಕ್ಕೇ ಸಿಗದೆ ಹೋಗಿದ್ದವು. ಗ್ರಾಹಕರಿಗೆ ಬಹಳ ಮುಖ್ಯವಾದ ಇವುಗಳನ್ನು ಸಹ ಹಣದುಬ್ಬರ ಲೆಕ್ಕಕ್ಕೆ ಸೇರಿಸಿಕೊಳ್ಳುವ ಅಗತ್ಯ ಇತ್ತು. `ಡಬ್ಲ್ಯುಪಿಐ~ನಲ್ಲಿ ಸಗಟು ವ್ಯಾಪಾರಿಗಳಲ್ಲಿ ಅಥವಾ ಉತ್ಪಾದನೆ ಹಂತದಲ್ಲಿ ಆಗುವ ದರ ಬದಲಾವಣೆಯನ್ನಷ್ಟೇ ಗಣನೆಗೆ ತೆಗೆದುಕೊಳ್ಳುತ್ತಿತ್ತೇ ಹೊರತು ಚಿಲ್ಲರೆ ವ್ಯವಹಾರದಲ್ಲಿನ ದರ ಏರಿಳಿತವನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ.

ಇತ್ತೀಚಿನವರೆಗೂ ಪ್ರತಿ ಗುರುವಾರದ ಲೆಕ್ಕದಲ್ಲಿ ಹಣದುಬ್ಬರ ಲೆಕ್ಕಹಾಕಲಾಗುತ್ತಿತ್ತು. ಇದರಿಂದ ಗ್ರಾಹಕರಿಗೆ ಅಂತಹ ವ್ಯತ್ಯಾಸವೇನೂ ಕಾಣುತ್ತಿರಲಿಲ್ಲ, ಯಾಕೆಂದರೆ ಹಣದುಬ್ಬರಕ್ಕೆ ಲೆಕ್ಕ ಹಾಕುವ ಹೆಚ್ಚಿನ ಸಾಮಗ್ರಿಗಳು ವೈಯಕ್ತಿಕ ಗ್ರಾಹಕರ ಬಜೆಟ್ನ ಅಂಗವಾಗಿರಲಿಲ್ಲ.

`ಈ ಎಲ್ಲ ಕಾರಣಕ್ಕೆ `ಸಿಪಿಐ~ ಸೂಚ್ಯಂಕಕ್ಕೆ ಬದಲಾಗುವ ಅನಿವಾರ್ಯತೆ ಎದುರಾಗಿತ್ತು. ಈ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನ ಅನುಭೋಗ ಪದ್ಧತಿಯ ಆಧಾರದಲ್ಲಿ ಲೆಕ್ಕ ಹಾಕುವುದರಿಂದ ಬೆಲೆ ಏರಿಕೆಯಿಂದ ನಿಮ್ಮ ಬಜೆಟ್ಗೆ ಎಂತಹ ಹಾನಿ ಆಗುತ್ತಿದೆ ಎಂಬುದನ್ನು ನಿಖರವಾಗಿ ಅಂದಾಜಿಸುವುದು ಸುಲಭವಾಗಲಿದೆ~ ಎಂದು ಸಾರ್ವಜನಿಕ ಅರ್ಥಶಾಸ್ತ್ರ ಮತ್ತು ನೀತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಮಹೇಶ್ ಸಿ.ಪುರೋಹಿತ್ ಹೇಳುತ್ತಾರೆ.

ಬೇಡಿಕೆ ಕಡೆಯ ಒತ್ತಡ ಸೂಚಿಸುವುದಕ್ಕೆ ಸಿಪಿಐ ಉತ್ತಮ ಸಾಧನ ಎಂದು ಅವರು ಹೇಳುತ್ತಾರೆ. ಇನ್ನೂ ಕೆಲವು ಆರ್ಥಿಕ ತಜ್ಞರ ಪ್ರಕಾರ ಸಿಪಿಐ ಎಂಬುದು ಜೀವನ ಸೂಚ್ಯಂಕದ ವೆಚ್ಚ. ಸದ್ಯಕ್ಕೆ ದೇಶಿ ಆರ್ಥಿಕ ರಂಗದಲ್ಲಿ ಸೇವಾ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ.

ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಗ್ರಾಹಕರು ಮಾಡುವ ವೆಚ್ಚ ಹಲವು ಪಟ್ಟು ಹೆಚ್ಚಾಗಿದೆ. ಇಂತಹ ಸೇವೆಗಳನ್ನು `ಡಬ್ಲುಪಿಐ~ನಲ್ಲಿ ಸೇರಿಸಲಾಗುತ್ತಿಲ್ಲ. ನೈಜ ಗ್ರಾಹಕರು ಮಾಡುವ ಖರ್ಚಿನ ಮನೋಭಾವ ತಿಳಿದುಕೊಳ್ಳದೆ ಇರುವುದೇ `ಡಬ್ಲ್ಯುಪಿಐ~ನ ದೊಡ್ಡ ಕೊರತೆ ಎಂಬ ಅಭಿಪ್ರಾಯ ಪುರೋಹಿತ್ ಅವರದು.

ಭಾರತದಲ್ಲಿ `ಸಿಪಿಐ~ ಸೂಚ್ಯಂಕ ಜಾರಿಗೆ ಕೆಲವೊಂದು ಸಮಸ್ಯೆಗಳಿದ್ದವು. `ಸಿಪಿಐ~ ನಿರ್ಧರಿಸುವಾಗ ನಮ್ಮಲ್ಲಿ ಮೂರು ಬಗೆಯ ವರ್ಗವನ್ನು ಗುರುತಿಸಲಾಗುತ್ತಿದೆ. ಅವುಗಳೆಂದರೆ ಕೈಗಾರಿಕಾ ಕಾರ್ಮಿಕರ ಸಿಪಿಐ, ಕೃಷಿ ಕಾರ್ಮಿಕರ ಸಿಪಿಐ ಮತ್ತು ಗ್ರಾಮೀಣ ಕಾರ್ಮಿಕರ ಸಿಪಿಐ. ಇದರಿಂದ ಸರ್ಕಾರಕ್ಕೆ ಹಣದುಬ್ಬರದ ಲೆಕ್ಕಾಚಾರ ಮಾಡುವುದು ಕಷ್ಟವಾಗುತ್ತಿತ್ತು.

ದೇಶದಲ್ಲಿ ವಾರಕ್ಕೊಮ್ಮೆ ಹಣದುಬ್ಬರ ಲೆಕ್ಕಾಚಾರ ಮಾಡುತ್ತಿದ್ದರೆ, `ಸಿಪಿಐ~ ಅಂಕಿಅಂಶ ಸಿಗುವುದು ಮಾಸಿಕ ಲೆಕ್ಕದಲ್ಲಿ. ಎಲ್ಲಾ ಬಗೆಯ ಸೂಚ್ಯಂಕಗಳಿಂದ `ಸಿಪಿಐ~ ಸೂಚ್ಯಂಕ ಗಳಿಸಿಕೊಳ್ಳುವುದು ಸರ್ಕಾರಕ್ಕೆ ಬಹಳ ಕಷ್ಟದ ವಿಚಾರವಾಗಿತ್ತು.

ಸಮಗ್ರ ಗ್ರಾಹಕ ದರ ಸೂಚ್ಯಂಕದ ಕೊರತೆಯ ಹಿನ್ನೆಲೆಯಲ್ಲಿ `ಆರ್ಬಿಐ~ ಸಗಟು ದರ ಸೂಚ್ಯಂಕವನ್ನೇ ಹಣಕಾಸು ನೀತಿ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಬಳಸುತ್ತಿದೆ. `ಆಯ್ಕೆಗೆ ಅವಕಾಶ ಕೊಟ್ಟರೆ ಬೇಡಿಕೆ ಒತ್ತಡಗಳನ್ನು ಸಮರ್ಥವಾಗಿ ಬಿಂಬಿಸುವ ಕಾರಣ `ಸಿಪಿಐ~ಗೆ ಹೆಚ್ಚು ಒಲವು ತೋರುವುದು ನಿಶ್ಚಿತ~ ಎಂದು ಆರ್ಥಿಕ ತಜ್ಞರೊಬ್ಬರು ಹೇಳುತ್ತಾರೆ. ಆದರೆ ಸದ್ಯದ ಮಟ್ಟಿಗೆ ಆರ್ಬಿಐ ಮಾತ್ರ ಡಬ್ಲ್ಯುಪಿಐ ಸೂಚ್ಯಂಕವನ್ನು ಸಂಪೂರ್ಣವಾಗಿ ಕೈಬಿಡುವ ಲಕ್ಷಣ ಕಾಣಿಸುತ್ತಿಲ್ಲ.

`ಆರ್ಬಿಐ ಸಹ ಮುಂದಿನ ದಿನ ಸಿಪಿಐ ಕಡೆ ಒಲವು ತೋರುವುದು ನಿಶ್ಚಿತ. ಆದರೆ, ಅದಕ್ಕಿಂತ ಮೊದಲು ಅದು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದನ್ನು ಅದು ದೃಢಪಡಿಸಿಕೊಳ್ಳಬಹುದು~ ಎಂದು ರೇಟಿಂಗ್ ಏಜೆನ್ಸಿ `ಕ್ರಿಸಿಲ್ ಲಿಮಿಟೆಡ್~ನ ಮುಖ್ಯ ಅರ್ಥಶಾಸ್ತ್ರಜ್ಞ ಡಿ.ಕೆ.ಜೋಷಿ ಹೇಳುತ್ತಾರೆ. ಆರ್ಥಿಕ ನೀತಿ ನಿರೂಪಣೆಯಲ್ಲಿ `ಸಿಪಿಐ~ ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ನಿಶ್ಚಿತ. ಮಾಹಿತಿ ಸಂಗ್ರಹದಲ್ಲಿನ ಯಶಸ್ಸಿನ ಆಧಾರದಲ್ಲಿ ಇದರ ಅನುಷ್ಠಾನವೂ ಆಗಬಹುದು ಎಂಬ ಅಭಿಪ್ರಾಯ ಅವರದು.

ದೇಶದ ಪ್ರಥಮ ರಾಷ್ಟ್ರವ್ಯಾಪಿ `ಸಿಪಿಐ~ ಸೂಚ್ಯಂಕವನ್ನು ಜನವರಿ ತಿಂಗಳ ಅಂಕಿಅಂಶದೊಂದಿಗೆ ಕಳೆದ ಫೆಬ್ರುವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. 2010ನ್ನು ಮೂಲ ವರ್ಷವಾಗಿ ಪರಿಗಣಿಸಲಾಗಿತ್ತು. 310 ಪಟ್ಟಣಗಳು ಮತ್ತು 1,181 ಹಳ್ಳಿಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ನಗರ ಮತ್ತು ಹಳ್ಳಿಗಳಿಂದ ಮಾಹಿತಿ ಸಂಗ್ರಹಿಸುವ ಹೊಣೆಗಾರಿಕೆಯನ್ನು ಕ್ರಮವಾಗಿ ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್ ಮತ್ತು ಅಂಚೆ ಇಲಾಖೆಗೆ ವಹಿಸಲಾಗಿತ್ತು.

ಈ ಸಮೀಕ್ಷೆಯಿಂದ ಕಂಡುಬಂದ ಸಂಗತಿ ಏನೆಂದರೆ, ಜನವರಿಯಲ್ಲಿ ಹಣದುಬ್ಬರದ ಪ್ರಮಾಣ ಶೇ 7.65ರಷ್ಟಾಗಿತ್ತು. ನಿರೀಕ್ಷೆಯಂತೆ ನಗರ ಪ್ರದೇಶಗಳಲ್ಲಿ ಗ್ರಾಹಕ ಹಣದುಬ್ಬರ ಅಧಿಕವಾಗಿತ್ತು. ವಾರ್ಷಿಕ ಲೆಕ್ಕದಲ್ಲಿ ಹೇಳುವುದಾದರೆ ಗ್ರಾಮಾಂತರ ಪ್ರದೇಶಗಳಲ್ಲಿ ಶೇ 7.38 ಮತ್ತು ನಗರ ಪ್ರದೇಶಗಳಲ್ಲಿ ಶೇ 8.25ರಷ್ಟು ಹಣದುಬ್ಬರ ಪ್ರಮಾಣ ಇರುವುದು ಕಂಡುಬಂತು.

ಇನ್ನು ಮುಂದೆ ಪ್ರತಿ ತಿಂಗಳು `ಸಿಪಿಐ~ ಸೂಚ್ಯಂಕದ ಆಧಾರದಲ್ಲಿ ಹಣದುಬ್ಬರದ ಲೆಕ್ಕಾಚಾರ ಬಹಿರಂಗವಾಗಲಿದೆ. ಚಿಲ್ಲರೆ ಮಾರಾಟದ ಹಂತದಲ್ಲಿ ಆಗುವ ವೆಚ್ಚದ ಬದಲಾವಣೆಯನ್ನೂ ಸೇರಿಸಿಕೊಂಡು ಈ ಹೊಸ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ.
ಆರನೇ ವೇತನ ಆಯೋಗದ ಶಿಫಾರಸಿನ ಜಾರಿಯ ಬಳಿಕ `ಸಿಪಿಐ~ ಸೂಚ್ಯಂಕದ ಮೂಲಕ ತುಟ್ಟಿಭತ್ಯೆ ಲೆಕ್ಕಹಾಕುವುದು ಇನ್ನಷ್ಟು ಸುಲಭವಾಗಲಿದೆ.

ಉದ್ದೇಶಿತ ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಪರಿಷ್ಕೃತ ರೂಪವನ್ನು ಸಿದ್ಧಪಡಿಸುವಲ್ಲಿಯೂ ಮುಂದಿನ ದಿನಗಳಲ್ಲಿ `ಸಿಪಿಐ~ ಪ್ರಮುಖ ಪಾತ್ರ ವಹಿಸಲಿದೆ. ಹಣದುಬ್ಬರ ಲೆಕ್ಕ ಹಾಕುವಾಗ ಸಗಟು ದರ ಸೂಚ್ಯಂಕಕ್ಕಿಂತ ಗ್ರಾಹಕರ ದರ ಸೂಚ್ಯಂಕ ಹೆಚ್ಚು ನಿಖರ ಎಂಬುದು ಈಗಾಗಲೇ ಸಾಬೀತಾಗಿದೆ. ಈ ವ್ಯವಸ್ಥೆಯಿಂದ ಇನ್ನಿತರ ಹಲವು ಪ್ರಯೋಜನಗಳೂ ಇರುವುದರಿಂದ `ಸಿಪಿಐ~ ವ್ಯವಸ್ಥೆಗೆ ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಹೊಂದಲು ಕಾಲ ಸನ್ನಿಹಿತವಾಗಿದೆ ಎಂದು ನಿಶ್ಚಿತವಾಗಿ ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.