ಮಂಗಳವಾರ, ಜನವರಿ 28, 2020
21 °C

ಹನುಮ ಜಯಂತಿ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀ ಮಾರುತಿ ಭಕ್ತಮಂಡಳಿ ಟ್ರಸ್ಟ್: 21ನೇ ಮುಖ್ಯರಸ್ತೆ, ವಿಜಯನಗರ. ಶ್ರೀ ಹನುಮ ಜಯಂತಿ. ಶನಿವಾರ ಬೆಳಿಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ಧಾರ್ಮಿಕ ಕಾರ್ಯಕ್ರಮ. ಸಂಜೆ 6.30ರಿಂದ ದೇವರನಾಮ, ಭಕ್ತಿಗೀತೆ, ಹರಿದಾಸದ ಕೀರ್ತನೆ ಶಶಿಧರ ಕೋಟೆ ತಂಡದಿಂದ. ಭಾನುವಾರ ಬೆಳಿಗ್ಗೆ 9ರಿಂದ 11 ಧಾರ್ಮಿಕ ಕಾರ್ಯಕ್ರಮ. ಸಂಜೆ 6.30ಕ್ಕೆ ದೇವರನಾಮ, ಭಕ್ತಿಗೀತೆಗಳು, ಹರಿದಾಸ ಕೀರ್ತನೆಗಳು ರೂಪಾ ಮತ್ತು ದೀಪಾ ಸಹೋದರಿಯರಿಂದ. 

ಶ್ರೀ ಓಣಿ ಆಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್: ವೈ.ಎಚ್‌. ವೆಂಕಟರಮಣಪ್ಪ ಕಲ್ಯಾಣ ಮಂದಿರ, ಗಾಂಧಿನಗರ. ಶನಿವಾರ ಹನುಮ ಜಯಂತಿ. ಹೂವಿನ ಅಲಂಕಾರ, ಲಕ್ಷದೀಪೋತ್ಸವ. ಬೆಳಿಗ್ಗೆ 7.30.ಶ್ರೀ ಜಯಮಾರುತಿ ದೇವಾಲಯ: ಎಚ್‌.ಬಿ.ಸಮಾಜ ರಸ್ತೆ, ಬಸವನಗುಡಿ. ಶ್ರೀ ಹನುಮದ್‌ ಜಯಂತಿ. ಶನಿವಾರ ಬೆಳಿಗ್ಗೆ 4.30ರಿಂದ 9.30ರವರೆಗೆ ಧಾರ್ಮಿಕ ಕಾರ್ಯಕ್ರಮ. ಸಂಜೆ 6ರಿಂದ ದೇವರನಾಮ ನಂದಿನಿರಾವ್‌ ಅವರಿಂದ. ಭಾನುವಾರ ಬೆಳಿಗ್ಗೆ 5ರಿಂದ 11ರವರೆಗೆ ಧಾರ್ಮಿಕ ಕಾರ್ಯಕ್ರಮ. ಸಂಜೆ 6ರಿಂದ ಪ್ರಕಾರೋತ್ಸವ, ಮೈಸೂರು ರಾಮಚಂದ್ರಾಚಾರ್‌ ಅವರಿಂದ ದೇವರನಾಮ.ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ: ವೆಂಗಯ್ಯನಕೆರೆ ಅಶ್ವತ್ಥಕಟ್ಟೆ, ಕೆ.ಆರ್.ಪುರಂ. ಹನುಮ ಜಯಂತಿ ಶನಿವಾರ ಪ್ರಯುಕ್ತ ಬೆಳಿಗ್ಗೆ 10.45ರಿಂದ ಬ್ರಹ್ಮರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವ.ಶ್ರೀ ಆಂಜನೇಯಸ್ವಾಮಿ ಮತ್ತು ಗಣಪತಿ ದೇವಸ್ಥಾನ: 16ನೇ ಅಡ್ಡರಸ್ತೆ, 4ನೇ ಹಂತ, ಜೆ.ಪಿ.ನಗರ. ಹನುಮ ಜಯಂತಿ. ಶನಿವಾರ ಅಭಿಷೇಕ, ಹೋಮ. ಬೆಳಿಗ್ಗೆ 8.30ರಿಂದ 12.ಯಲಹಂಕದ ಸಂತೆ ವೃತ್ತದಲ್ಲಿರುವ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ 14ರಂದು ಹನುಮ ಜಯಂತಿ ಸಮಾರಂಭ ನಡೆಯಲಿದೆ.

ಶನಿವಾರ ಬೆಳಗ್ಗೆ 6.30ಕ್ಕೆ ಮೂಲದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಗಣಪತಿಹೋಮ, ನವಗ್ರಹಹೋಮ, ಮೃತ್ಯುಂಜಯಹೋಮ, ಮಹೇಶ್ವರ ಹೋಮ, ಶ್ರೀರಾಮತಾರಕಹೋಮ, ಪವಮಾನಹೋಮ, ನಾಗದೇವತಾ ಹೋಮ ಹಾಗೂ ಮಹಾಪೂರ್ಣಾಹುತಿ ನಂತರ ಬೃಹತ್‌ ವೀರಾಂಜನೇಯ ಸ್ವಾಮಿಗೆ 301 ಕಳಶಗಳಿಂದ ಉಚಿತವಾಗಿ ಕ್ರೈನಿನ ಮೂಲಕ ಭಕ್ತಾದಿಗಳಿಂದ ಕುಂಭಾಭಿಷೇಕ ಮತ್ತು ಸತ್ಯನಾರಾಯಣಸ್ವಾಮಿ ಪೂಜೆಯನ್ನು ಏರ್ಪಡಿಸಲಾಗಿದೆ.ನೂರಾರು ವರ್ಷಗಳ ಇತಿಹಾಸವಿರುವ ಸೊಣ್ಣೇನಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿ.14ರಂದು  ‘ಹನುಮಜಯಂತಿ’ ಆಯೋಜಿಸಲಾಗಿದೆ.

ಹನುಮಜಯಂತಿ ಜೊತೆಗೆ ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮಿ, ಆದಿಚುಂಚನಗಿರಿ ಮಠದ ನಿರ್ಮಲಾನಂದಸ್ವಾಮಿ, ವಿಶ್ವ ಒಕ್ಕಲಿಗರ ಮಠದ  ಕುಮಾರ ಚಂದ್ರಶೇಖರನಾಥ ಸ್ವಾಮಿ, ನಂಜಾವಧೂತ ಸ್ವಾಮಿ, ಸಂತೋಷ್‌ಗುರೂಜಿ ಅವರಿಗೆ ಗುರುವಂದನೆ.ಪೂಜಾಕುಣಿತ, ಪಟ್ಟದಕುಣಿತ, ಕಂಸಾಳೆಪದ, ವೀರಭದ್ರನ ಕುಣಿತ, ಕರಡಿ ಕುಣಿತ, ಯಕ್ಷಗಾನ, ಮಲೆಮಹದೇಶ್ವರ ಕುರಿತ ಭಕ್ತಿಗೀತೆ, ಜಾನಪದ ಹಾಡುಗಾರಿಕೆ, ನಾಡಿನ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನ ವಿಶೇಷ ಮೆರುಗು ನೀಡಲಿವೆ.ಆಂಜನೇಯಸ್ವಾಮಿಗೆ ಪಂಚಾಭಿಷೇಕ, ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಲಕ್ಷ್ಮೀ ಹೋಮ, ಮೃತ್ಯುಂಜಯ ಹೋಮ, ಶ್ರೀ ವೀರಾಂಜನೇಯಸ್ವಾಮಿ ಪ್ರಧಾನ ಹೋಮ, ದೇವರ ಉತ್ಸವ ಮೆರವಣಿಗೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಪ್ರತಿಕ್ರಿಯಿಸಿ (+)