ಕೊಳ್ಳೇಗಾಲ: ಮಳೆ ಬಾರದೆ ಸಂಪೂರ್ಣವಾಗಿ ಒಣಗಿಹೋಗಿರುವ ಕಬ್ಬಿನ ಬೆಳೆಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಶಾಸಕ ಆರ್.ನರೇಂದ್ರ ಭರವಸೆ ನೀಡಿದರು.

ತಾಲ್ಲೂಕಿನ ಹನೂರು ಸಮೀಪದ ಬೆಳ್ತೂರು ಗ್ರಾಮದ ರೈತ ಪುಟ್ಟರಾಜಶೆಟ್ಟಿ ಅವರ 4 ಎಕರೆ ಜಮೀನಿನಲ್ಲಿ ಹಾಕಿದ್ದ ಕಬ್ಬಿನ ಬೆಳೆ ಅಂತರ್ಜಲ ಕುಸಿತ ಮತ್ತು ಮಳೆ ಇಲ್ಲದ ಕಾರಣ ಸಂಪೂರ್ಣವಾಗಿ ಒಣಗಿ ನಷ್ಟ ಉಂಟಾಗಿದ್ದು, ಬುಧವಾರ ಶಾಸಕ ಆರ್. ನರೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

ಮಳೆಬಾರದ ಹನೂರು ಕ್ಷೇತ್ರದಲ್ಲಿ ಹೆಚ್ಚಿನ ಬೆಳೆ ನಷ್ಟ ಉಂಟಾಗಿದ್ದು ರೈತರಿಗೆ ಕೂಡಲೇ ಸೂಕ್ತ ಪರಿಹಾರ ದೊರಕಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವುದಾಗಿ ಅವರು ರೈತರಿಗೆ ತಿಳಿಸಿದರು.
ರಾಮಾಪುರ ಬ್ಲಾಕ್ ಅಧ್ಯಕ್ಷ ಕೆ. ಕಾಮರಾಜು ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.