ಬೆಳಗಾವಿ: ಅವರೆಲ್ಲ ಪರೀಕ್ಷೆಯ ಭಯವನ್ನು ಬದಿಗಿಟ್ಟಿದ್ದಾರೆ. ವಿಶ್ವ ಕನ್ನಡ ಸಮ್ಮೇಳನ ಸಮಾರಂಭದಲ್ಲಿ ಅವಿಸ್ಮರಣೀಯ ನೃತ್ಯ ಪ್ರದರ್ಶಿಸಬೇಕು; ಅದಕ್ಕಾಗಿ ನಿಗದಿತ ಅವಧಿಯೊಳಗೆ ನೃತ್ಯ ಸಿದ್ಧಗೊಳ್ಳಬೇಕು ಎಂಬ ಹಂಬಲವೇ ಎಲ್ಲರ ಮುಖದಲ್ಲಿ ಎದ್ದುಕಾಣುತ್ತಿದೆ. ಕಾಲುನೋವನ್ನೂ ಲೆಕ್ಕಿಸದೇ, ಸಾವಿರದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವಿರತ ನೃತ್ಯಾಭ್ಯಾಸ ನಡೆಸಿದ್ದು, ಸಮ್ಮೇಳನಕ್ಕೆ ಗೆಜ್ಜೆ ಕಟ್ಟಿ ಸಜ್ಜಾಗುತ್ತಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನದಂಥ ಐತಿಹಾಸಿಕ ಸಮಾರಂಭದಲ್ಲಿ ಪ್ರತಿಭೆ ಮೆರೆಯಲು ಅವಕಾಶ ಸಿಕ್ಕ ಸಂಭ್ರಮವೇ ಅದರನ್ನು ಇನ್ನಷ್ಟು ಹುರಿದುಂಬಿಸಿದೆ.

ಉದ್ಘಾಟನಾ ಸಮಾರಂಭದಲ್ಲಿ ನಾಲ್ಕು ಹಾಡುಗಳಿಗೆ ಹೆಜ್ಜೆ ಹಾಕಲಿರುವ 1,100 ವಿದ್ಯಾರ್ಥಿಗಳು, ಫೆ.11ರಿಂದಲೇ ನಗರದ ಬೆನನ್ ಸ್ಮಿತ್ ಕಾಲೇಜು ಮೈದಾನದಲ್ಲಿ ನೃತ್ಯಾಭ್ಯಾಸ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಸೇರಿದಂತೆ ಸುತ್ತ- ಮುತ್ತಲಿನ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರತ್ಯೇಕವಾಗಿ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ. 1,100 ವಿದ್ಯಾರ್ಥಿಗಳ ಪೈಕಿ 600 ಮಂದಿ ಬೆಳಗಾವಿಯವರಾಗಿದ್ದರೆ, ಹುಬ್ಬಳ್ಳಿ-ಧಾರವಾಡ ಭಾಗದ 500 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಬೆಳಗಾವಿಯ 350 ವಿದ್ಯಾರ್ಥಿಗಳು ‘ಹಚ್ಚೇವು ಕನ್ನಡ ದೀಪ ಹಾಡಿಗೆ’, 250 ವಿದ್ಯಾರ್ಥಿಗಳು ’ರೈತ ಗೀತೆ’ಗೆ ಹೆಜ್ಜೆ ಹಾಕಲಿದ್ದಾರೆ. ಹುಬ್ಬಳ್ಳಿ-ಧಾರವಾಡದ 250 ವಿದ್ಯಾರ್ಥಿಗಳು ’ಒಂದೇ, ಒಂದೇ ಕರ್ನಾಟಕ ಒಂದೇ’ ಹಾಡಿಗೆ ಹಾಗೂ 250 ವಿದ್ಯಾರ್ಥಿಗಳು ’ಜೋಗದ ಸಿರಿ ಬೆಳಕಿನಲ್ಲಿ’ ಹಾಡಿಗೆ ನೃತ್ಯ ಮಾಡಲಿದ್ದಾರೆ.

ಸರ್ಕಾರದ ವತಿಯಿಂದಲೇ ಪ್ರತಿ ವಿದ್ಯಾರ್ಥಿಗೆ ರೂ 500 ವೆಚ್ಚದಲ್ಲಿ ನೃತ್ಯ ಪರಿಕರಗಳನ್ನು ಒದಗಿಸಲಾಗುತ್ತಿದೆ. ನೃತ್ಯಕ್ಕೆ ಬಿಳಿ, ಹಸಿರು ಸೇರಿದಂತೆ ಆರು ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನೃತ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತಿಂಡಿ, ತಿನಿಸು ನೀಡಲಾಗುತ್ತಿದೆ. ಜತೆಗೆ ಮಕ್ಕಳನ್ನು ಬಿಟ್ಟು ಬರಲು ಬಸ್ ವ್ಯವಸ್ಥೆ ಮಾಡಲಾಗುತ್ತಿದೆ.

ಶಾಂತಲಾ ನಾಟ್ಯಾಲಯದ ರೇಖಾ ಹೆಗಡೆ, ಟಿ. ರವೀಂದ್ರ ಶರ್ಮ ನೃತ್ಯ ಸಂಯೋಜಿಸುತ್ತಿದ್ದಾರೆ. ರಸೂಲ್ ಮೋಮಿನ್ ಹಾಗೂ ಧನಶ್ರೀ ಗುರುವ ಎಂಬುವವರು ತಾಂತ್ರಿಕ ಸಹಾಯ ನೀಡುತ್ತಿದ್ದು, ಮಕ್ಕಳಿಗೆ ನೃತ್ಯ ತರಬೇತಿ ನೀಡುವ ಕೆಲಸ ಭರದಿಂದ ನಡೆದಿದೆ.

‘ಹತ್ತಾರು ಮಕ್ಕಳಿಗೆ ನೃತ್ಯ ಅಭ್ಯಾಸ ಮಾಡಿಸಿದ ಅನುಭವವಿದೆ. ಆದರೆ ಈಗ ಏಕಕಾಲಕ್ಕೆ ನೂರಾರು ಮಕ್ಕಳಿಗೆ ಹೇಳಿಕೊಟ್ಟಿಲ್ಲ. ಈಗ ಅದನ್ನು ಮಾಡುತ್ತಿದ್ದೇವೆ. ಜತೆಗೆ ನೃತ್ಯ ಅರಿಯದ ಮಕ್ಕಳಿಗೂ ಕೆಲವೇ ಸಮಯದಲ್ಲಿ ಹೇಳಿಕೊಡುವ ಸವಾಲು ನಮ್ಮ ಮುಂದಿದೆ’ ಎನ್ನುತ್ತಾರೆ ನೃತ್ಯ ಸಂಯೋಜಕಿ ರೇಖಾ ಹೆಗಡೆ.

‘ವಿಶ್ವ ಕನ್ನಡ ಸಮ್ಮೇಳನದಲ್ಲಿ ಬೆಳಗಾವಿ ಭಾಗದ ಇಷ್ಟೊಂದು ಮಕ್ಕಳಿಗೆ ನೃತ್ಯಾವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ನೃತ್ಯದ ಕಡೆಗೆ ವಾಲುವ ಸಾಧ್ಯತೆ ಇದೆ. ಇದು ಜೀವನದಲ್ಲಿ ಸಿಕ್ಕ ದೊಡ್ಡ ಅವಕಾಶಗಳಲ್ಲಿ ಒಂದಾಗಿದೆ’ ಎಂದೂ ಅವರು ಸಂಭ್ರಮಿಸಿದರು.

ಪ್ರೌಢಶಾಲೆಯ ವಿದ್ಯಾರ್ಥಿಗಳ ಪರೀಕ್ಷೆಗಳು ಇದೇ ಮಾರ್ಚ್ 21ರಿಂದ ಆರಂಭವಾಗಲಿದ್ದು, ಇದು ಬಿಡುವಿಲ್ಲದೇ ಓದಬೇಕಾದ ಸಮಯ. ಆದರೆ ನೂರಾರು ಮಕ್ಕಳು ನಿತ್ಯವೂ ನಾಲ್ಕು ಗಂಟೆ ಕಾಲವನ್ನು ನೃತ್ಯಾಭ್ಯಾಸಕ್ಕೆ ಮೀಸಲಾಗಿರಿಸಿದ್ದಾರೆ.

‘ಪರೀಕ್ಷೆ ಇದೆ ನಿಜ. ಆದರೆ ಇಂತಹ ಅವಕಾಶ ಸಿಗಬೇಕಲ್ಲ. ದೊಡ್ಡ ಅವಕಾಶ ಸಿಕ್ಕಿರುವಾಗ ಸುಮ್ಮನಿರಲು ಸಾಧ್ಯವೇ? ನೃತ್ಯದ ಜತೆಗೆ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎನ್ನುತ್ತಾಳೆ ವಿದ್ಯಾರ್ಥಿನಿ ಮೇಘಾ ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.