ಮನೆಯೊಳಗೆ ಅಗತ್ಯ ಸೌಲಭ್ಯಗಳಿದ್ದರೆ ಸಾಕು ಎಂಬ ಪ್ರವೃತ್ತಿ ಈಗ ಬದಲಾಗಿದೆ. ವಿಶಾಲವಾದ ಮನೆ, ಅಗತ್ಯ ಸೌಲಭ್ಯ ಎಲ್ಲವೂ ಇದ್ದರೂ ಇನ್ನೂ ಏನೋ ಬೇಕು ಎಂಬ ತುಡಿತ. ಇಪ್ಪತ್ತು–ಮುವ್ವತ್ತು ವರ್ಷಗಳ ಹಿಂದೆ ಎಷ್ಟೇ ಖರ್ಚು ಮಾಡಿ ಕಟ್ಟಿದ ಮನೆಯಾದರೂ ಅದರ ನೆಲಕ್ಕೆ ಬಳಸಿದ ಟೈಲ್ಸ್, ಕಿಟಕಿ, ಬಾಗಿಲುಗಳ ವಿನ್ಯಾಸ, ಚಾವಣಿ, ಅಷ್ಟೇ ಅಲ್ಲ ಕಮೋಡ್, ಟ್ಯಾಪ್ಗಳು ಈಗಿನ ಕಾಲಕ್ಕೆ ಹೋಲಿಸಿದರೆ ಹಳೆಯವು ಎನಿಸುತ್ತವೆ.

ಈಗ ಮನೆ ಕಟ್ಟುವವರಿಗೆ ನೂರಾರು ಆಯ್ಕೆಗಳಿವೆ. ಮನೆ ಹಳೆಯದಾಯಿತು. ಅತ್ಯಾಧುನಿಕ ಸೌಲಭ್ಯಗಳು ಬೇಕು. ಒಳಾಂಗಣ ವಿನ್ಯಾಸ ಚೆನ್ನಾಗಿರಬೇಕು. ಗಾಳಿ, ಬೆಳಕು ಸರಿಯಾಗಿ ಬರಬೇಕು. ಹೀಗೆ ತಮ್ಮ ಎಲ್ಲ ಅಗತ್ಯಗಳನ್ನು ಹಳೆಯ ಮನೆಯಲ್ಲಿಯೇ ಸಾಧ್ಯವಾಗಿಸಿಕೊಳ್ಳುವುದು ಈಗ ಕಷ್ಟವೇನಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಹಳೆಯ ಕಟ್ಟಡಗಳಿಗೆ ಹೊಸ ರೂಪ ನೀಡುವುದು ಈಗಿನ ಫ್ಯಾಷನ್.

‘ಹೊಸ ಮನೆ ಕಟ್ಟುವುದಕ್ಕಿಂತ ಹಳೇ ಮನೆಯನ್ನು ನವೀಕರಿಸಿದರೆ ಹಣ ಉಳಿತಾಯವಾಗುತ್ತದೆ. ಹಳೆಯ ವಿನ್ಯಾಸದ ಮನೆಗಳಲ್ಲಿ ಗಾಳಿ, ಬೆಳಕು ಕಡಿಮೆ ಇರುತ್ತದೆ. ಮನೆ ಕಟ್ಟುವಾಗ ಗಾಳಿ ಬೆಳಕಿದ್ದರೂ ನಂತರ ಅಕ್ಕಪಕ್ಕದಲ್ಲಿ ಬಹುಮಹಡಿ ಕಟ್ಟಡಗಳು ಬಂದು ಗಾಳಿ–ಬೆಳಕಿಗೆ ತಡೆಯಾಗಿರಬಹುದು. ಇಂಥ ಮನೆಗಳಿಗೆ ವೆಂಟಿಲೇಷನ್ಗಳನ್ನು ಅಳವಡಿಸಿ ಗಾಳಿ ಬರುವಂತೆ ಮಾಡಬಹುದು.

ನೈಸರ್ಗಿಕ ಬೆಳಕು ಬರುವಂತೆ ಚಾವಣಿಗೆ ಗಾಜು ಅಳವಡಿಸಬಹುದು. ಹಳೆಯ ಟೈಲ್ಸ್ಗಳನ್ನು ಬದಲಾಯಿಸಬಹುದು. ಬಚ್ಚಲಿಗೆ ಹೊಸ ರೂಪ ನೀಡಬಹುದು. ಹೊಸ ಬಗೆಯ ಟ್ಯಾಪ್ಗಳು, ಕಮೋಡ್ಗಳನ್ನು ಅಳವಡಿಸಬಹುದು. ಹೊಸ ವಿನ್ಯಾಸದ ಕಿಟಕಿ, ಬಾಗಿಲುಗಳನ್ನು ಆಳವಡಿಸ ಬಹುದು. ಗೋಡೆಗಳ ಸಿಮೆಂಟು ಕಿತ್ತು ಹೊಸದಾಗಿ ಹಾಕಬಹುದು. ಮಾರ್ಬಲ್, ಟೈಲ್ಸ್ ಅಳವಡಿಸಬಹುದು’ ಎಂದು ವಿನ್ಯಾಸಕರು ಹೇಳುತ್ತಾರೆ.

ಅನೇಕರು ವಾಸ್ತುವಿಗೆ ಅನುಸಾರವಾಗಿ ಮನೆ ನಿರ್ಮಿಸಲು ಯೋಚಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಇದೇ ಕಾರಣಕ್ಕೆ ಮನೆಯ ಬಾಗಿಲು, ಗೋಡೆಗಳನ್ನು ಒಡೆಯಬೇಕಾಗುತ್ತದೆ. ಅದಕ್ಕಾಗಿ ಯೋಚಿಸುವ ಅಗತ್ಯವಿಲ್ಲ. ಈಗ ಕಾಂಕ್ರಿಟ್ ಕಟ್ಟಿಂಗ್ ಮಷೀನ್ ಬಳಸಿ ಕಟ್ಟಡಕ್ಕೆ ಹಾನಿಯಾಗದ ರೀತಿಯಲ್ಲಿ ನವೀಕರಿಸಬಹುದು.

ನವೀಕರಿಸುವ ಮುನ್ನ
‘ಹಳೆಯ ಫ್ಲ್ಯಾಟ್, ಮನೆ, ಅಂಗಡಿ ಕಟ್ಟಡಗಳನ್ನು ಕೊಂಡವರು ತಮ್ಮ ಅಗತ್ಯಗಳಿಗೆ ಸರಿ ಹೊಂದುವಂತೆ ನವೀಕರಿಸುವುದು ಸಹಜ. ಆದರೆ, ನವೀಕರಿಸುವಾಗ ಕಟ್ಟಡದ ಬಾಳಿಕೆ, ಗಟ್ಟಿತನದ ಪರೀಕ್ಷೆ ಮಾಡುವುದು ಅಷ್ಟೇ ಮುಖ್ಯ’ ಎನ್ನುತ್ತಾರೆ ಸಿವಿಲ್ ಎಂಜಿನಿಯರ್ ಜಗನ್ನಾಥ್.
‘ಹಳೆಯ ಕಟ್ಟಡವನ್ನು ನವೀಕರಣ ಮಾಡುವಾಗ ಕಟ್ಟಡದ ಇಡೀ ತಳಪಾಯ, ವಿನ್ಯಾಸ ಹೇಗಿದೆ ಎಂದು ಪರೀಕ್ಷೆ ಮಾಡಬೇಕು.

ಗೋಡೆಗಳಲ್ಲಿ ಬಿರುಕುಗಳಿದ್ದರೆ ತುಂಬ ಬೇಕು. ಚಾವಣಿಗಳಲ್ಲಿ ಲೀಕೇಜ್ ಇದ್ದರೆ ಸಿಮೆಂಟು ತುಂಬಿ ಸರಿಪಡಿಸಬೇಕು. ಹೀಗೆ ಮಾಡಿದ ನಂತರ ನವೀಕರಣ ಕಾರ್ಯ ಶುರು ಮಾಡಬೇಕು. ಸರಿಯಾದ ಮುಂಜಾಗ್ರತೆ ವಹಿಸಿ ನವೀಕರಿಸಿದರೆ ಕಟ್ಟಡ ಕನಿಷ್ಠ ನೂರು ವರ್ಷ ಬಾಳಿಕೆ ಬರುತ್ತದೆ’ ಎಂದು ಅವರು ಹೇಳುತ್ತಾರೆ.

ಇಟಾಲಿಯನ್ ಎಲಿವೇಶನ್ ಅನುಸರಿಸಿ ಮನೆಯ ಹೊರಭಾಗವನ್ನು ಪುನರ್ ವಿನ್ಯಾಸಗೊಳಿಸುವ ಟ್ರೆಂಡ್ ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದು ಬಿಟ್ಟರೆ, ಮನೆಯ ಒಳಗಡೆ ನವೀಕರಣ ಮಾಡಿಸುತ್ತಿರುವವರಲ್ಲಿ ಅನೇಕರು ವಾಸ್ತುವಿನ ಮೊರೆ ಹೋಗುತ್ತಾರೆ ಎನ್ನುವುದು ಎಂಜಿನಿಯರ್ ಭಗವಂತ ಅವರ ಅಭಿಪ್ರಾಯ.

ಮನೆ ಕಟ್ಟುವಾಗ ವಾಸ್ತು ನೋಡದವರು ಹತ್ತು ಹದಿನೈದು ವರ್ಷದ ನಂತರ ನವೀಕರಣಕ್ಕೆ ಮುಂದಾಗುತ್ತಾರೆ. ವಾಸ್ತು ಕಾರಣಕ್ಕೆ ನವೀಕರಿಸುವಾಗ ಗೋಡೆ ಒಡೆಯುವುದು, ಬಾಗಿಲುಗಳನ್ನು ಸ್ಥಳಾಂತರಿಸುವುದು ಸಾಮಾನ್ಯ.

ಹೀಗೂ ಮಾಡಬಹುದು
ಹಳೆಯ ಮನೆಗೆ ಹೊಸ ಸ್ಪರ್ಶ ನೀಡಬೇಕು ಎಂದು ಬಯಸುವವರು ನೆಲಕ್ಕೆ ಹೊಸಬಗೆಯ ಟೈಲ್ಸ್, ಗ್ರಾನೈಟ್ ಬಳಸಬಹುದು. ಮರದ ಫ್ಲೋರ್ಗಳು ಈಗ ಹೆಚ್ಚು ಚಾಲ್ತಿಯಲ್ಲಿದೆ. ಇದಕ್ಕೆ ನೆಲ ಒಡೆಯಬೇಕಾದ ಅಗತ್ಯವಿಲ್ಲ. ದುಬಾರಿ ಗ್ರಾನೈಟ್ ಮತ್ತು ಟೈಲ್ಸ್ಗಳಿಗಿಂತ ಕಡಿಮೆ ಖರ್ಚಿನಲ್ಲಿ ಮರದ ಫ್ಲೋರಿಂಗ್ ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಗೋಡೆಗಳ ಅಂದ ಹೆಚ್ಚಿಸಲು ವಾಲ್ಪೇಪರ್ಗಳು ಬಂದಿವೆ. ಅವುಗಳನ್ನು ಗೋಡೆಗಳಿಗೆ ಅಂಟಿಸಿದರೆ ಹೊಸತನ ಸಿಗುತ್ತದೆ.

ಮುನ್ನೆಚ್ಚರಿಕೆ ಕ್ರಮ
*ಮನೆಯ ಪಕ್ಕದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾಗಿದ್ದರೆ, ನಿಮ್ಮ ಮನೆಯ ಅಡಿಪಾಯಕ್ಕಿಂತ ಆಳದಲ್ಲಿ ಕೊರೆದು ಕಟ್ಟಡ ಕಟ್ಟಿರುತ್ತಾರೆ. ಇದರಿಂದ ನಿಮ್ಮ ಮನೆಯ ಅಡಿಪಾಯಕ್ಕೆ ತೊಂದರೆಯಾಗಿರುತ್ತದೆ. ಅಂಥ ಸಂದರ್ಭದಲ್ಲಿ ಮನೆಯನ್ನು ಒಡೆದು ಹೊಸದಾಗಿ ನವೀಕರಣ ಮಾಡುವುದು ಅಪಾಯಕಾರಿ.

*ತುಂಬ ಹಳೆಯದಿರಲಿ, ಇತ್ತೀಚೆಗೆ ನಿರ್ಮಿಸಿದ ಮನೆ ಇರಲಿ ನವೀಕರಣ ಮಾಡುವಾಗ ಎಂಜಿನಿಯರ್ ಸಹಾಯ ಪಡೆಯುವುದು ಅಗತ್ಯ.

*ಗೋಡೆ ಒಡೆಯಬೇಕಾದಾಗ ಚಾವಣಿಗೆ ಆಧಾರವಾಗಿರುವ ಗೋಡೆಗಳನ್ನು ಒಡೆಯಬಾರದು.

*ಬಾಗಿಲ ಮೇಲೆಷ್ಟೇ ಲಿಂಟಲ್ ಇದ್ದರೆ ಗೋಡೆ ಒಡೆಯುವುದು ಸರಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.