ಹಳ್ಳಿಗಳಲ್ಲೂ ಸಹಪಂಕ್ತಿ ಭೋಜನ ನಡೆಯಲಿ

ಭಾನುವಾರ, ಮೇ 26, 2019
22 °C

ಹಳ್ಳಿಗಳಲ್ಲೂ ಸಹಪಂಕ್ತಿ ಭೋಜನ ನಡೆಯಲಿ

Published:
Updated:

ಹಿಂದೂ ಧರ್ಮಕ್ಕೆ ಕಳಂಕ ಹಚ್ಚಿರುವ ಅಸ್ಪೃಶ್ಯತೆ ಆಚರಣೆಯನ್ನು ನಿರ್ಮೂಲನೆ ಮಾಡುವ ಪ್ರಯತ್ನವಾಗಿ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಮತ್ತು ಮಾದಾರ ಚೆನ್ನಯ್ಯ ಸ್ವಾಮೀಜಿ ಅವರ ಪ್ರಯತ್ನ ಶ್ಲಾಘನೀಯ.ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ದಲಿತರ ಮನೆಗಳ ಸಹಪಂಕ್ತಿ ಭೋಜನದ ಕಾರ್ಯಕ್ರಮ ನಡೆಸಿದ್ದು  ಮೆಚ್ಚಬೇಕಾದ ಕ್ರಮ. ಇದೇ ರೀತಿ ದಲಿತರನ್ನೊಳಗೊಂಡು ಗ್ರಾಮೀಣ ಪ್ರದೇಶಗಳಲ್ಲಿ ಸಹಪಂಕ್ತಿ ಭೋಜನವನ್ನು ಸವರ್ಣೀಯರ ಮನೆಗಳಲ್ಲಿ ಏರ್ಪಡಿಸಿದರೆ ಉದ್ದೇಶ ಸಫಲವಾಗುತ್ತದೆ.ಇದರಿಂದ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಆಚರಣೆಯ ಪಾಪಪ್ರಜ್ಞೆ ಕೆಲವರಲ್ಲಾದರೂ ಬಂದು ಹಿಂದೂ ಸಮಾಜದಲ್ಲಿ ಸ್ವಲ್ಪವಾದರೂ ಸುಧಾರಣೆಗೆ ಅವಕಾಶವಾಗಬಹುದು. ಈ ಬಗೆಗೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಪ್ರಯತ್ನಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry