ಹವಾಮಾನ ಇಲಾಖೆ ತಪ್ಪೊಪ್ಪಿಗೆ

7

ಹವಾಮಾನ ಇಲಾಖೆ ತಪ್ಪೊಪ್ಪಿಗೆ

Published:
Updated:

ನವದೆಹಲಿ: ನೈರುತ್ಯ ಮುಂಗಾರು ಮುನ್ಸೂಚನೆ ನೀಡುವಲ್ಲಿ ಎಡವಿದ್ದನ್ನು ಭಾರತೀಯ ಹವಾಮಾನ ಇಲಾಖೆ ಇದೇ ಮೊದಲ ಬಾರಿ ಒಪ್ಪಿಕೊಂಡಿದೆ.

2011ರ ನೈರುತ್ಯ ಮುಂಗಾರು ಮಳೆ ಮುನ್ಸೂಚನೆಯು ನಿಖರವಾಗಿರಲಿಲ್ಲ ಎಂದು ಮುಂಗಾರು ಅವಧಿ ಅಂತ್ಯದ ವರದಿಯಲ್ಲಿ ಇಲಾಖೆ ಸ್ಪಷ್ಟಪಡಿಸಿದೆ.

`ಇಲಾಖೆ ಸುಧಾರಣೆಗಾಗಿ ಸಲಹೆ ಸ್ವೀಕರಿಸಲು ಸಿದ್ಧವಿದೆ~ ಎಂದು  ನಿರ್ದೇಶಕ ಅಜಿತ್ ತ್ಯಾಗಿ ತಿಳಿಸಿದ್ದಾರೆ. ಏಪ್ರಿಲ್‌ನಿಂದ ನೀಡಿದ 4 ಮುನ್ಸೂಚನೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿವೆು ಮಳೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಬಿದ್ದ ಮಳೆಯ ಪ್ರಮಾಣ ಇದಕ್ಕಿಂತ ಅಧಿಕ. ಮುಂಗಾರಿನ ದ್ವಿತೀಯಾರ್ಧದ ಮಳೆ ಪ್ರಮಾಣ ನಿಖರವಾಗಿ ಹೇಳಲು ಈ ನಾಲ್ಕೂ ಮುನ್ಸೂಚನೆಗಳು ವಿಫಲವಾಗಿವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry