ಗುರುವಾರ , ಫೆಬ್ರವರಿ 25, 2021
25 °C

ಹಸಿರು ವಲಯ ವೃದ್ಧಿಗೆ ತುರ್ತು ಗಮನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸಿರು ವಲಯ ವೃದ್ಧಿಗೆ ತುರ್ತು ಗಮನ ಅಗತ್ಯ

ಬೆಂಗಳೂರು: `ಜಾಗತಿಕ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಹಸಿರು ವಲಯ ವೃದ್ಧಿಗೆ ತುರ್ತು ಗಮನ ನೀಡಬೇಕಿದೆ~ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ವಿಭಾಗದ ವಿಜ್ಞಾನಿ ಡಾ.ಹರೀಶ್ ಆರ್. ಭಟ್ ಹೇಳಿದರು.ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯವು ವಿಶ್ವ ಪರಿಸರ ದಿನದ ಪ್ರಯುಕ್ತ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಭವಿಷ್ಯಕ್ಕಾಗಿ ಉತ್ತಮ ಪರಿಸರ~ ಎಂಬ ವಿಷಯ ಕುರಿತು ಅವರು ಮಾತನಾಡಿದರು.`ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕಿದೆ. ದೊಡ್ಡ ಪ್ರಮಾಣದಲ್ಲಿ ಸಸಿಗಳನ್ನು ಬೆಳೆಸಬೇಕು. ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಯುವಜನತೆ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು~ ಎಂದರು.`ಸಸಿ ನೆಟ್ಟ ಬಳಿಕ ಮೂರು ವರ್ಷ ಕಾಲ ಅದನ್ನು ಪೋಷಿಸಿದರೆ ಆನಂತರ ಹತ್ತಾರು ವರ್ಷ ಯಾವುದೇ ನಿರ್ವಹಣೆಯಿಲ್ಲದಿದ್ದರೂ ಮರ ಉತ್ತಮವಾಗಿ ಬೆಳೆಯುತ್ತವೆ. ಜತೆಗೆ ಫಲವನ್ನೂ ನೀಡುತ್ತದೆ. ಪ್ರಾಣಿ, ಪಕ್ಷಿಗಳಿಗೆ ಆಶ್ರಯವೂ ದೊರೆತಂತಾಗುತ್ತದೆ~ ಎಂದು ಹೇಳಿದರು.`ಕೆಲ ದಶಕಗಳ ಹಿಂದೆ ನೀರಿನ ಬಾಟಲಿ ಹಿಡಿದು ಹೋಗುವವರನ್ನು ಅಪಹಾಸ್ಯ ಮಾಡುವಂತಾಗಿತ್ತು. ಆದರೆ ಇಂದು ಎಲ್ಲರೂ ಬಾಟಲಿ ನೀರು ಬಳಸುವ ಕಾಲ ಬಂದಿದೆ. ಅದೇ ರೀತಿ ಭವಿಷ್ಯದಲ್ಲಿ ಆರೋಗ್ಯವಂತ ವ್ಯಕ್ತಿಗಳು ಆಮ್ಲಜನಕದ ಸಿಲಿಂಡರ್‌ಗಳನ್ನು ಬಳಸುವ ಸ್ಥಿತಿ ಬರಬಾರದು. ಅದಕ್ಕಾಗಿ ಇಂದಿನಿಂದಲೇ ಗಿಡ- ಮರ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು~ ಎಂದರು.ಬಳಿಕ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.