ಶನಿವಾರ, ಫೆಬ್ರವರಿ 27, 2021
20 °C

ಹಾಕಿ: ಆರ್ಮಿ ಗ್ರೀನ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಆರ್ಮಿ ಗ್ರೀನ್‌ಗೆ ಜಯ

ಬೆಂಗಳೂರು: ಜಾನಿ ಜಸ್ರೊಟಿಯಾ ತಂದಿತ್ತ ಎರಡು ಗೋಲುಗಳ ನೆರವಿನಿಂದ ಆರ್ಮಿ ಗ್ರೀನ್ ತಂಡದವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

ಅಕ್ಕಿತಿಮ್ಮನಹಳ್ಳಿಯಲ್ಲಿರುವ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ಮಿ ಗ್ರೀನ್ 4-3 ಗೋಲುಗಳಿಂದ ಫೋರ್ಟಿಸ್ ತಂಡವನ್ನು ಸೋಲಿಸಿತು. ವಿಜಯಿ ತಂಡದ ರೊಮೆನ್ (6ನೇ ನಿಮಿಷ), ಜಾನಿ ಜಸ್ರೊಟಿಯಾ (24ನೇ ಹಾಗೂ 37ನೇ ನಿ.) ಹಾಗೂ ಅರುಣ್ ಕುಮಾರ್ (66ನೇ ನಿ.) ಗೋಲು ತಂದಿತ್ತರು. ಫೋರ್ಟಿಸ್ ತಂಡದ ವಿಕ್ರಮಾಜಿತ್ ಸಿಂಗ್ (4ನೇ ಹಾಗೂ 14ನೇ ನಿ.) ಮತ್ತು ಇನೊಸೆಂಟ್ ಕುಲ್ಲು (62ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಆದರೆ ಐಒಸಿಎಲ್ ಹಾಗೂ ಐಎಎಫ್ ನಡುವಿನ ಪಂದ್ಯ ಮಳೆಯ ಕಾರಣ ರದ್ದಾಯಿತು. ವಿರಾಮದ ಬಳಿಕ ಪಂದ್ಯ ನಡೆಯಲಿಲ್ಲ. ಈ ಹಂತದಲ್ಲಿ ಐಒಸಿಎಲ್ 3-1 ಗೋಲುಗಳಿಂದ ಮುಂದಿತ್ತು. ಗುರ್ಜಿಂದರ್ ಸಿಂಗ್ (6ನೇ ನಿ.), ದೀಪಕ್ ಠಾಕೂರ್ (11ನೇ ನಿ.) ಹಾಗೂ ರೋಷನ್ ಮಿಂಜ್ (16ನೇ ನಿ.) ಗೋಲು ಗಳಿಸಿದರು. ಐಎಎಫ್‌ನ ಹರ್ವಂತ್(29ನೇ ನಿ.) ಚೆಂಡನ್ನು ಗುರಿ ಸೇರಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.