ಶುಕ್ರವಾರ, ಜೂಲೈ 10, 2020
27 °C

ಹಾಕಿ: ಏರ್ ಇಂಡಿಯಾಕ್ಕೆ ಮತ್ತೊಂದು ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಮೀರ್ ದಾದ್ ಗಳಿಸಿದ ಮೂರು ಗೋಲುಗಳ ನೆರವಿನಿಂದ ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ’ಒಜೋನ್ ಗ್ರೂಪ್’ ಪ್ರಾಯೋಜಿತ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಮತ್ತೊಂದು ಗೆಲುವು ಪಡೆದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಏರ್ ಇಂಡಿಯಾ 8-2 ಗೋಲುಗಳಿಂದ ಆರ್ಮಿ ಗ್ರೀನ್ ತಂಡವನ್ನು ಸುಲಭವಾಗಿ ಮಣಿಸಿತು.

ಸಮೀರ್ ದಾದ್‌ಗೆ ಉತ್ತಮ ಸಾಥ್ ನೀಡಿದ ಲೆನ್ ಅಯ್ಯಪ್ಪ ಮತ್ತು ಅರ್ಜುನ್ ಹಾಲಪ್ಪ ತಲಾ ಎರಡು ಗೋಲು ತಂದಿತ್ತರು. ಮತ್ತೊಂದು ಗೋಲನ್ನು ಶಿವೇಂದರ್ ಸಿಂಗ್ ಗಳಿಸಿದರು. ಆರ್ಮಿ ಗ್ರೀನ್ ತಂಡದ ಪರ ಲವ್‌ಪ್ರೀತ್ ಸಿಂಗ್ ಮತ್ತು ಗ್ಯಾಬ್ರಿಯಲ್ ಗೋಲುಗಳನ್ನು ತಂದಿತ್ತರು.

ಇನ್ನೊಂದು ಪಂದ್ಯದಲ್ಲಿ ಎಸ್‌ಎಐ ತಂಡ 8-2 ಗೋಲುಗಳಿಂದ ಎಂಇಜಿ ತಂಡವನ್ನು ಸುಲಭವಾಗಿ ಮಣಿಸಿತು. ನಾಮಧಾರಿ ಇಲೆವನ್ ಹಾಗೂ ಎಂಎಲ್‌ಐ ತಂಡದ ನಡುವೆ ನಡೆದ ಮತ್ತೊಂದು ಪಂದ್ಯವು 1-1ರಲ್ಲಿ ಡ್ರಾ ಆಯಿತು. ನಾಮಧಾರಿ ಪರ ಹರ್ಪಾಲ್ ಸಿಂಗ್ ಮತ್ತು ಎಂಎಲ್‌ಐ ತಂಡದ ಸುನಿಲ್ ಕುಮಾರ್ ತಲಾ ಒಂದು ಗೋಲು ಗಳಿಸಿದರು.

ಸೋಮವಾರದ ಪಂದ್ಯಗಳು: ನಾಮಧಾರಿ ಇಲೆವೆನ್-ಎಂಇಜಿ (ಮಧ್ಯಾಹ್ನ 2.15ಕ್ಕೆ), ಐಒಸಿಎಲ್-ಎಸ್‌ಎಐ (ಮಧ್ಯಾಹ್ನ 3.45).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.