ಬುಧವಾರ, ಮಾರ್ಚ್ 3, 2021
22 °C
ರಿಯೊಒಲಿಂಪಿಕ್ಸ್‌

ಹಾಕಿ: ಬೆಲ್ಜಿಯಂ ಎದುರು ಮಣಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಬೆಲ್ಜಿಯಂ ಎದುರು ಮಣಿದ ಭಾರತ

ರಿಯೊ ಡಿ ಜನೈರೊ (ಪಿಟಿಐ): ಕಳೆದ 36 ವರ್ಷಗಳಿಂದ ಭಾರತದ ಹಾಕಿಪ್ರಿಯರು ಕಾಣುತ್ತಿದ್ದ ಒಲಿಂಪಿಕ್ಸ್‌ ಪದಕದ ಕನಸು ಈ ಬಾರಿಯೂ ಭಗ್ನವಾಯಿತು. ಭಾನುವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಎರಡು ಗೋಲು ಹೊಡೆದ ಬೆಲ್ಜಿಯಂನ ಡಾಕೀರ್ ಸೆಬಾಸ್ಟಿಯನ್ ಭಾರತ ತಂಡವನ್ನು ನಿರಾಸೆಯ ಮಡುವಿಗೆ ತಳ್ಳಿದರು.ಪಿ.ಆರ್. ಶ್ರೀಜೇಶ್‌ ಬಳಗವು 1–3 ಗೋಲುಗಳಿಂದ ಬೆಲ್ಜಿಯಂ ವಿರುದ್ಧ ಸೋತಿತು.ಪಂದ್ಯದಲ್ಲಿ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಮುನ್ನಡೆ ಸಾಧಿಸಿದ್ದ ಭಾರತ ತಂಡವು ನಂತರದ ಅವಧಿಯಲ್ಲಿ ಕೈಚೆಲ್ಲಿತು.  ತಾನೇ ಮಾಡಿಕೊಂಡ ತಪ್ಪುಗಳಿಂದ ಗೆಲುವಿನ ಅವಕಾಶವನ್ನು ಕಳೆದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಫಾರ್ವರ್ಡ್‌ ಆಟಗಾರ ಡಾಕೀರ್ (33ನಿ ಮತ್ತು 45ನೇ ನಿಮಿಷ)  ಹೊಡೆದ ಎರಡು ಗೋಲುಗಳು ನಿರ್ಣಾಯಕವಾದವು. ಎರಡೂ ಗೋಲುಗಳನ್ನು  ಗೋಲ್‌ ಕೀಪರ್ ಶ್ರೀಜೇಶ್ ಅವರ ಬಲಬದಿಯಿಂದಲೇ ಡಾಕೀರ್ ಬಾರಿಸಿದ್ದರು. ಕಳೆದ ಪಂದ್ಯಗಳಲ್ಲಿಯೂ ತಮ್ಮ ಬಲಬದಿಯಿಂದ ನುಗ್ಗಿದ ಚೆಂಡನ್ನು ತಡೆಯುವಲ್ಲಿ ಶ್ರೀಜೇಶ್ ವಿಫಲರಾಗಿದ್ದರು. ಈ ಪಂದ್ಯದಲ್ಲಿಯೂ ಅವರ ದೌರ್ಬಲ್ಯ ತಂಡಕ್ಕೆ ಮುಳುವಾಯಿತು. ಇದರಿಂದಾಗಿ ಪಂದ್ಯದ ಕೊನೆಯ ಕ್ವಾರ್ಟರ್‌ನಲ್ಲಿಯೂ ಬೂನ್ ಟಾಮ್ (50ನೇ ನಿಮಿಷ) ಕೂಡ ಶ್ರೀಜೇಶ್ ಬಲಬದಿಯಿಂದಲೇ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ ರಣಕೇಕೆ ಹಾಕಿದರು.ಆರಂಭದ ಹಿಡಿತ

ಮೊದಲ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ತಂಡದ ಚುರುಕಾದ ಪಾಸಿಂಗ್ ಮತ್ತು ಶಿಸ್ತುಬದ್ಧ ಆಟಕ್ಕೆ  ಭಾರತ ತಿರುಗೇಟು ನೀಡಿತ್ತು. ಆರಂಭದಿಂದಲೂ ಭಾರತದ ಗೋಲುಪೆಟ್ಟಿಗೆಯ ಮೇಲೆ ದಾಳಿ ಮಾಡಿದ ಬೆಲ್ಜಿಯಂ ತಂಡದ ಪ್ರಯತ್ನಗಳಿಗೆ ಗೋಲ್‌ಕೀಪರ್ ಶ್ರೀಜೇಶ್ ಅಡ್ಡಿಯಾದರು. ಈ ಹಂತದಲ್ಲಿ ಬೆಲ್ಜಿಯಂ ತಂಡದ ಸ್ಟ್ರೈಕರ್‌ಗಳೇ ಹೆಚ್ಚು ಹೊತ್ತು ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದರು.ಅವರನ್ನು ತಡೆಯಲು ಭಾರತದ ಆಟಗಾರರು   ತಮ್ಮೆಲ್ಲ ಶಕ್ತಿ ವಿನಿಯೋಗಿಸಿದರು. 15ನೇ ನಿಮಿಷದಲ್ಲಿ   ಎಸ್‌.ವಿ. ಸುನಿಲ್  ನಿಖರವಾದ ಹೊಡೆತವನ್ನು ಗೋಲ್ ಕೀಪರ್  ವನೇಶ್ ವಿನ್ಸನ್   ಬಳಿಯಿದ್ದ  ಆಕಾಶ್‌ ದೀಪ್  ಅವರು ರಿವರ್ಸ್ ಶಾಟ್ ಹೊಡೆ ಯಲು ಯತ್ನಿಸಿದರು. ಸ್ಟಿಕ್‌ ಅಂಚಿಗೆ ತಗುಲಿದ ಚೆಂಡು ಗೋಲುಪೆಟ್ಟಿಗೆ ಯೊಳಗೆ ಜಿಗಿಯಿತು. ಭಾರತದ ಪಾಳೆಯ ದಲ್ಲಿ ಖುಷಿ ಚಿಮ್ಮಿತು.  ಕೋಚ್ ರೋಲಂಟ್ ಓಲ್ಟಮನ್ಸ್‌ ಸಂತಸದಿಂದ ಬೀಗಿದರು.ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ರಕ್ಷಣಾ ಆಟಗಾರರು ದಿಟ್ಟ ಆಟವಾಡಿದರು. ಬೆಲ್ಜಿಯಂನ ಡಾಕೀರ್ ಪದೇ ಪದೇ ಗೋಲುಪೆಟ್ಟಿಗೆಯ ಮೇಲೆ ದಾಳಿ ಮಾಡಿದರು. ಅದನ್ನು ತಡೆಯು ವಲ್ಲಿ ಶ್ರೀಜೇಶ್ ಮತ್ತು ರಕ್ಷಣಾ ಆಟ ಗಾರರು ಸಫಲರಾದರು. ಇದರಿಂದಾಗಿ ಪಂದ್ಯದ ಮೊದಲರ್ಧ ವಿರಾಮಕ್ಕೆ ಭಾರತ 1–0 ಮುನ್ನಡೆ ಹೊಂದಿತ್ತು.  ಆದರೆ ನಂತರದ   ಅವಧಿಯಲ್ಲಿ ಪಂದ್ಯದ ಚಿತ್ರಣ ತಿರುವುಮರು ವಾಯಿತು. ಡಾಕೀರ್ ತಮ್ಮ ಸತತ ಯತ್ನಗಳಲ್ಲಿ ಸಫಲರಾದರು. ಭಾರತ ತಂಡದ ಒಲಿಂಪಿಕ್ಸ್‌ ಪದಕದ ಕನಸು ನುಚ್ಚುನೂರಾಯಿತು.

 

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಸತತ ಹಿನ್ನಡೆ ಅನುಭವಿಸಿತ್ತು.  ಒಟ್ಟು ಎಂಟು ಚಿನ್ನದ ಪದಕಗಳನ್ನು ಗೆದ್ದ ಇತಿಹಾಸ ಹೊಂದಿರುವ ಭಾರತ ತಂಡವು 2008ರ ಒಲಿಂಪಿಕ್ಸ್‌ಗೆ ಅರ್ಹತೆಯನ್ನೇ ಪಡೆದಿರಲಿಲ್ಲ.  ಲಂಡನ್ ಒಲಿಂಪಿಕ್ಸ್‌ನಲ್ಲಿ ಆಡಿತ್ತಾದರೂ ಕೊನೆಯ ಸ್ಥಾನ ಪಡೆದಿ ತ್ತು.   ಆದರೆ ಈ ಬಾರಿ   ಎಂಟರ ಘಟ್ಟಕ್ಕೆ ತಲುಪಿ ಪದಕದ ನಿರೀಕ್ಷೆ ಮೂಡಿಸಿತ್ತು.ಮುಖ್ಯಾಂಶಗಳು

* ಮೊದಲ ಕ್ವಾರ್ಟರ್‌ನಲ್ಲಿ ಗೋಲು ಹೊಡೆದ ಅಕಾಶ್‌ದೀಪ್ ಸಿಂಗ್

* ಮೂರನೇ ಕ್ವಾರ್ಟರ್‌ನಲ್ಲಿ ಎರಡು ಗೋಲು ಗಳಿಸಿದ ಡಾಕೀರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.