ಬೆಂಗಳೂರು: ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಹಾಗೂ ಗದಗಿನ ಎಸ್ಎಚ್ಬಿಎಚ್ಸಿ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಪಂದ್ಯದಲ್ಲಿ ಸೋಲು ಅನುಭವಿಸಿದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೋಲಿನ ಸುರಿಮಳೆಗೆರದ ಬೆಂಗಳೂರಿನ ಬಿಇಎಂಎಲ್ ತಂಡ 14-1 ಗೋಲುಗಳಿಂದ ಗದಗಿನ ಎಸ್ಎಚ್ಬಿಎಚ್ಸಿ ಮೇಲೆ ಸುಲಭ ವಿಜಯ ಸಾಧಿಸಿತು. ವಿಜಯಿ ತಂಡದ ಅರವಿಂದ್ (3), ರಮೇಶ್ (3), ಎಚ್.ಡಿ. ಸುರೇಂದ್ರ (3), ನರೇಶ್ ಬಾಬು (2), ಸಚಿನ್ (2), ಕಾಳಪ್ಪ ಹಾಗೂ ಎದುರಾಳಿ ತಂಡದ ಪ್ರವೀಣ್ ಗೋಲು ತಂದಿತ್ತರು.

ಇದೇ ಲೀಗ್ ಇನ್ನೊಂದು ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ `ಬಿ~ ತಂಡ 5-1 ಗೋಲುಗಳಿಂದ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಮೇಲೆ ಗೆಲುವು ಪಡೆಯಿತು. ಭಾರತ ಕ್ರೀಡಾ ಪ್ರಾಧಿಕಾರ ತಂಡದ ಪ್ರಮೋದ್, ಬಿದ್ದಪ್ಪ (2), ರತನ್, ಅಶೋಕ್ ಹಾಗೂ ಎದುರಾಳಿ ತಂಡದ ನಾಗರಾಜ್ ಚೆಂಡನ್ನು ಗುರಿಮುಟ್ಟಿಸಿದರು.

ಮಂಗಳವಾರದ ಪಂದ್ಯಗಳು: ಮಧ್ಯಾಹ್ನ 1-00ಕ್ಕೆ ಸೌತ್ ವೆಸ್ಟರ್ನ್ ರೈಲ್ವೆ ಹುಬ್ಬಳ್ಳಿ-ಕೂರ್ಗ್ ಬ್ಲೂಸ್, ಮಧ್ಯಾಹ್ನ 2-30ಕ್ಕೆ ಗದಗಿನ ಎಸ್ಎಚ್ಬಿಎಚ್ಸಿ-ಬೆಂಗಳೂರಿನ ಐಟಿಐ ಹಾಗೂ ಮಧ್ಯಾಹ್ನ 4-00ಕ್ಕೆ ಆರ್ಡಬ್ಲ್ಯುಎಫ್-ಬಿಎಸ್ಎನ್ಎಲ್ ನಡುವೆ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.