ಉಡುಪಿ: ನಂದಿಕೂರಿನಲ್ಲಿರುವ ಯುಪಿಸಿಎಲ್ ವಿದ್ಯುತ್ ಘಟಕದಿಂದಾಗಿ ಸುತ್ತಲಿನ ಪರಿಸರಕ್ಕೆ ಉಂಟಾಗಿರುವ ಹಾನಿ ಹಾಗೂ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿರುವ ‘ಪರಿಸರ ಭವನ’ದಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಸೋಮವಾರ ವಿಶೇಷ ಸಭೆ ನಡೆಯಲಿದೆ.

ಯುಪಿಸಿಎಲ್ ಅಧಿಕಾರಿಗಳು ಖುದ್ದು ಹಾಜರಾಗಿ ಘಟಕದಲ್ಲಿ ಕೈಗೊಂಡಿರುವ ಮಾಲಿನ್ಯ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕೆಂಬ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ವಿದ್ಯುತ್ ಘಟಕದಿಂದಾಗಿ ತೆಂಕ ಎರ್ಮಾಳು ಪ್ರದೇಶದಲ್ಲಿ ಪೈಪ್ಲೈನ್ ಒಡೆದು ಸುತ್ತಲಿನ ಕೃಷಿಭೂಮಿ ಹಾಗೂ ಅಂತರ್ಜಲ ಕಲುಷಿತಗೊಂಡಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಾಕಷ್ಟು ದೂರುಗಳು ಬಂದಿದ್ದವು. ಕೆಲವು ದಿನಗಳಿಂದ ಸಾಂತೂರು, ಎಲ್ಲೂರು ಪ್ರದೇಶದಲ್ಲಿ ಹಾರುಬೂದಿ ಸಮಸ್ಯೆಯಿಂದಾಗಿ ಉಂಟಾಗಿರುವ ಅವಾಂತರಗಳ ಬಗ್ಗೆ ಜನರಿಂದ ತೀವ್ರ ಪ್ರತಿಭಟನೆಗಳು ನಡೆದಿದ್ದು ಆ ಬಗ್ಗೆಯೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರುಗಳು ಹೋಗಿವೆ.

ಈ ಎಲ್ಲದರ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಪ್ರಾದೇಶಿಕ ಕಚೇರಿ ಪರಿಶೀಲನೆ ನಡೆಸಿದ್ದು, ಯುಪಿಸಿಎಲ್ ಘಟಕ ಕೃಷಿಭೂಮಿ ಹಾಗೂ ಸುತ್ತಲ ಪರಿಸರಕ್ಕೆ ಮಾರಕವಾಗಿರುವ ಅಂಶಗಳ ಕುರಿತು ವರದಿ ನೀಡುವಂತೆ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಯಾಗಿ ಘಟಕದ ಸುತ್ತ ತಾನು ಕೈಗೊಂಡ ಕ್ರಮಗಳ ಬಗ್ಗೆ ಯುಪಿಸಿಎಲ್ ವರದಿ ನೀಡಿತ್ತು. ಆ ವರದಿಯನ್ನು ಬೆಂಗಳೂರಿನಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿದ್ದಾಗಿ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ರವಿಚಂದ್ರ ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.

ಇವೆಲ್ಲವನ್ನು ಪರಿಶೀಲಿಸಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ಕಂಪೆನಿ ಪ್ರತಿನಿಧಿಗಳು ಖುದ್ದು ಹಾಜರಾಗಿ ಹೇಳಿಕೆ ನೀಡುವಂತೆ ಸೂಚನೆ ನೀಡಿದೆ. ಅದರಂತೆ ಆ ಬಗ್ಗೆ ಅಲ್ಲಿ ವಿಸ್ತ್ರತ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಆರೋಗ್ಯ ಕೇಂದ್ರ ವರದಿ: ಎಲ್ಲೂರು, ತೆಂಕ, ಬಡಾ ಹಾಗೂ ಸಾಂತೂರು ಗ್ರಾಮಗಳ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿರುವ ಈ ಘಟಕದಿಂದಾಗಿ ಸುತ್ತಲ ಬಾವಿಗಳಲ್ಲಿ ಹಾಗೂ ಕೆರೆಗಳಲ್ಲಿ ನೀರು ಕಲುಷಿತಗೊಂಡಿದೆ. ಆ ಬಗ್ಗೆ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವೂ ಬೆಂಗಳೂರಿನ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿತ್ತು. ಕೊಳಚೂರು ಪ್ರದೇಶದಲ್ಲಿ 100 ಬಾವಿಗಳ ನೀರು ಕಲುಷಿತಗೊಂಡಿರುವ ಬಗ್ಗೆ ಸಲ್ಲಿಸಿದ ವರದಿಯನ್ನು ಮಂಡಳಿ ಅಧಿಕೃತವಾಗಿ ಒಪ್ಪಿಲ್ಲ. ಅದನ್ನು ತಜ್ಞರಿಂದ ಪರಿಶೀಲನೆ ಮಾಡಲಾಗಿಲ್ಲ ಎನ್ನುವ ಕಾರಣಕ್ಕೆ ಆ ವರದಿ ತಿರಸ್ಕರಿಸಿತ್ತು. ಆದಾಗ್ಯೂ ಪರಿಸರ ಇಲಾಖೆಯೇ ಅಲ್ಲಿನ ಸ್ಥಿತಿಗತಿ ಬಗ್ಗೆ ಕಂಪೆನಿ ಅಧಿಕಾರಿಗಳೇ ಖುದ್ದು ಹಾಜರಾಗಿ ಮಾಹಿತಿ ನೀಡಲು ಕೋರಿರುವುದು ಗಮನಾರ್ಹ.

ಯುಪಿಸಿಎಲ್ 600 ಮೆ.ವಾ. ಸಾಮರ್ಥ್ಯದ ಎರಡು ವಿದ್ಯುತ್ ಘಟಕಗಳನ್ನು ವಿಸ್ತರಣೆ ಮಾಡುವ ಸಂದರ್ಭದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖಾ ಪರಿಣತ ಸದಸ್ಯರು ಷರತ್ತುಬದ್ಧ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಕಂಪೆನಿ ಬಳಸುವ ಸಮುದ್ರದ ನೀರನ್ನು ತೊರೆಗಳಿಗೆ ಬಿಡದೇ ಆಳಸಮುದ್ರಕ್ಕೇ ವಿಸರ್ಜಿಸಬೇಕು. ಸೂಕ್ತವಾದ ಎಫ್ಜಿಡಿ ವ್ಯವಸ್ಥೆ ಮಾಡಬೇಕು, ಪ್ರಾದೇಶಿಕ ಪರಿಸರ, ಸಸ್ಯ ಸಂಪತ್ತು ವನ್ಯಜೀವಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂಬುದೂ ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಕೋರಿತ್ತು.

ಆದರೆ, ಕಂಪೆನಿ ಎಲ್ಲ ವರದಿಗಳನ್ನು ಸಲ್ಲಿಸಿ ಅನುಮತಿ ಪಡೆದುಕೊಳ್ಳಲಾಗಿದೆ ಎಂದಿದೆ. ಇದೇ ವೇಳೆ, ಎಲ್ಲೂರು, ಸಾಂತೂರು ಪ್ರದೇಶದಲ್ಲಿ ಕಂಪೆನಿಯಿಂದಾಗಿ ಪರಿಸರಕ್ಕೆ ಬಹಳಷ್ಟು ತೊಂದರೆ ಆಗುತ್ತಿವೆ ಎನ್ನುವುದು ಸ್ಥಳೀಯರ ಸಾಮಾನ್ಯ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.