ಮಂಗಳವಾರ, ಜನವರಿ 28, 2020
29 °C

ಹಾಲಭಾವಿ ಓಣಿ ನಿವಾಸಿಗಳ ನರಕಯಾತನೆ

ಪ್ರಜಾವಾಣಿ ವಾರ್ತೆ/ ಬಸವರಾಜ ಹಲಕುರ್ಕಿ Updated:

ಅಕ್ಷರ ಗಾತ್ರ : | |

ಹಾಲಭಾವಿ ಓಣಿ ನಿವಾಸಿಗಳ ನರಕಯಾತನೆ

ನರಗುಂದ: ಪಟ್ಟಣದಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಅವುಗಳನ್ನು ಸಕಾಲದಲ್ಲಿ ಸ್ವಚ್ಛಗೊಳಿಸದ ಪರಿಣಾಮ  ಸೊಳ್ಳೆಗಳ ತಾಣವಾಗಿ ಮಾರ್ಪ­ಡುತ್ತಿವೆ. ಸವದತ್ತಿ ರಸ್ತೆ ಸಮೀಪ ಇರುವ ಹಾಲಭಾವಿ ಕೆರೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.ಸಕಾಲಕ್ಕೆ ಸ್ವಚ್ಛಗೊಳಿಸದ ಪರಿಣಾಮ ಇರುವ ಚರಂಡಿ  ತುಂಬಿ ಹರಿಯುತ್ತಿವೆ.  ಇದರಿಂದ ಈ   ಓಣಿಯ ನಿವಾಸಿಗಳು ನಿತ್ಯ ಪುರಸಭೆಯನ್ನು ಶಪಿಸುತ್ತಿದ್ದಾರೆ. ಇದರಿಂದ ಈ ನಿವಾಸಿಗಳ ನರಕಯಾತನೆ ಸಾಮಾನ್ಯ ಎಂಬಂತಾಗಿದೆ.ಇದಕ್ಕೆ ಪುರಸಭೆಯ ದಿವ್ಯ ನಿರ್ಲಕ್ಷ್ಯವೇ ಆಗಿದೆ. ಈ ಕುರಿತು  ಪುರಸಭೆಗೆ ಹಲವಾರು ಸಲ ಮನವಿ ಮಾಡಿ­ಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಇಲ್ಲಿಯ ನಿವಾಸಿ ಮಹಾಂತವ್ವ ಗುರು­ಪಾದ­ಶೆಟ್ಟರ  ಆಕ್ರೋಶ ವ್ಯಕ್ತಪಡಿಸುತ್ತಾರೆ.ಈ ಓಣಿಯಲ್ಲಿ  ಚರಂಡಿಗಳು ಸರಿಯಾಗಿ ನಿರ್ಮಾಣವಾಗಿಲ್ಲ. ಇದರಿಂದ ಕೆಲವೇ  ದಿನಗಳಲ್ಲಿ ಈ ಚರಂಡಿಗಳು ತುಂಬಿ ಬಿಡುತ್ತವೆ. ತುಂಬಿದ ಸಂದರ್ಭದಲ್ಲಿ  ಪುರಸಭೆ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ  ಸ್ವಚ್ಛಗೊಳಿಸುವುದೇ ಇಲ್ಲ. ಇದರಿಂದ ಇಲ್ಲಿ ದುರ್ವಾಸನೆ ಹರಡಿ ಇತ್ತ ಜನ  ಸಂಚರಿಸಲು  ಬರದಂತಾಗಿದೆ ಎಂದು ಇಲ್ಲಿಯ ನಿವಾಸಿಗಳು ತಮ್ಮ ಅಳಲನ್ನು ತೋಡಿ­ಕೊಳ್ಳುವುದು ಸಾಮಾನ್ಯವಾಗಿದೆ.‘ಪಟ್ಟಣದಲ್ಲಿ ಬಹುತೇಕ ಓಣಿಗಳಲ್ಲಿ, ಗಲ್ಲಿಗಳಲ್ಲಿ ಚರಂಡಿಗಳು ಸುವ್ಯವಸ್ಥಿತವಾಗಿ ನಿರ್ಮಾ­­ಣ­ವಾಗಿದ್ದರೂ ಇಲ್ಲಿ ಏಕೆ ನಿರ್ಮಾಣವಾಗುತ್ತಿಲ್ಲ‘ ಎಂದು ಇಲ್ಲಿಯ ನಿವಾಸಿ ರುಕ್ಮಿಣಿ ಗಾಯಕವಾಡ ಪ್ರಶ್ನಿಸುತ್ತಾರೆ.ಚರಂಡಿ ನೀರು ಅರ್ಧಕ್ಕೆ ಪೈಪ್‌ ಕಟ್ಟಿದ ಪರಿಣಾಮ ಆ ನೀರು ಮುಂದೆ ಹೋಗುವುದೇ ಇಲ್ಲ. ಜೊತೆಗೆ   ರಸ್ತೆಗಳು ಸರಿಯಾಗಿರದ ಪರಿಣಾಮ ರಸ್ತೆ ಮಧ್ಯದಲ್ಲಿಯೇ ಚರಂಡಿ ನೀರು ನಿಲ್ಲುವ ಮೂಲಕ ಸೊಳ್ಳೆಗಳಿಗೆ ಆಶ್ರಯ ತಾಣವಾಗಿದೆ. ಸಂಜೆ ಹೊತ್ತು ಇಲ್ಲಿಯ ನಿವಾಸಿಗಳು  ಹೊರಬರುವಂತಿಲ್ಲ. ಜೊತೆಗೆ ಮನೆ­ಗಳಲ್ಲೂ ಹೆಚ್ಚಿನ ಸೊಳ್ಳೆಗಳು ಆವರಿ­ಸುತ್ತಿರು­ವುದರಿಂದ ನಿದ್ದೆ ಮಾಡಲು ಪರದಾಡಬೇಕಾದ  ಸ್ಥಿತಿ ಇಲ್ಲಿದೆ.  ಬಸ್‌ ನಿಲ್ದಾಣಕ್ಕೆ ಅಣತಿ ದೂರದಲ್ಲಿರುವ ಈ ಓಣಿಯ ಬಗ್ಗೆ ಪುರಸಭೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.‘ನಮ್ಮ ಗೋಳು  ಯಾರು ಕೇಳುತ್ತಿಲ್ಲ. ಇಲ್ಲಿ ಸರಿ­ಯಾದ ಮೂಲ ಸೌಲಭ್ಯಗಳೇ ಇಲ್ಲ. ಬೀದಿ ದೀಪಗಳ ಕೊರತೆ ಹೆಚ್ಚಾಗಿದೆ.  ಪುರಸಭೆ ಇತ್ತ ಗಮನಹರಿಸಬೇಕು’ ನಿವಾಸಿ ಲಕ್ಷ್ಮಿ ಕುಂಬಾರ  ಹೇಳಿದರು. ‘ಈಗಾಗಲೇ ಚರಂಡಿ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಮೂಲ  ಸೌಲಭ್ಯ­ಗಳು ಹಾಗೂ ಚರಂಡಿಗಳ  ನಿರ್ಮಾಣದ ಬಗ್ಗೆ ಕ್ರಮಕ್ಕೆ ಕೈಗೊಳ್ಳಲಾಗುವುದು’ ಎಂದು  ಪುರಸಭೆ ಅಧಿಕಾರಿ ಜೆ.ಇ. ನದಾಫ ತಿಳಿಸಿದರು.

ಪ್ರತಿಕ್ರಿಯಿಸಿ (+)