ಬುಧವಾರ, ಏಪ್ರಿಲ್ 21, 2021
25 °C

ಹಾಲೆಂಡ್ ಮಹಿಳೆಯರಿಗೆ ಬಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಲೆಂಡ್ ಮಹಿಳೆಯರಿಗೆ ಬಂಗಾರ

ಲಂಡನ್ (ಎಪಿ): ಹಾಲೆಂಡ್ ಮಹಿಳೆಯರು ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಹಾಕಿಯಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ರಿವರ್‌ಬ್ಯಾಕ್ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಹಾಲೆಂಡ್ ತಂಡದವರು 2-0 ಗೋಲುಗಳಿಂದ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಸೋಲಿಸಿ ಈ ಸಾಧನೆ ಮಾಡಿದ್ದಾರೆ. ಹಾಲೆಂಡ್ ಗಳಿಸಿದ ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬಂದವು.ಕಾರ್ಲಿನ್ ಡಿರ್ಕ್ಸ್ ವಾನ್ ಡೆನ್ 40ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. 54ನೇ ನಿಮಿಷದಲ್ಲಿ ಲಭಿಸಿದ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ನಾಯಕಿ ಮಾರ್ತೆ ಪಾಮೆನ್ ಚೆಂಡನ್ನು ಗುರಿ ಸೇರಿಸಿದರು.  ಈ ಕಾರಣ ಅರ್ಜೆಂಟೀನಾ ಬೆಳ್ಳಿ ಪದಕಕ್ಕೆ ಸಮಾಧಾನ ಪಡಬೇಕಾಯಿತು. ಈ ವಿಭಾಗದ ಕಂಚಿನ ಪದಕ ಗ್ರೇಟ್ ಬ್ರಿಟನ್ ಪಾಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.