ಶನಿವಾರ, ಏಪ್ರಿಲ್ 17, 2021
32 °C

ಹಾಸನ: ಪ್ರಾಬಲ್ಯ ಮೆರೆದ ಜೆಡಿಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರಸಭೆಯ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಮಂಗಳವಾರ ನಡೆದು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರು.ಈ ಮೂಲಕ ಜೆಡಿಎಸ್ ತನ್ನ ಸ್ಥಾನಗಳನ್ನು ಉಳಿಸಿಕೊಂಡಂತಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮುಖಭಂಗವಾಗಿದೆ.26ನೇ ವಾರ್ಡ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನಕ್ಕೆ ತೃಪ್ತಿ   ಪಡುವಂತಾಗಿರುವುದು ವಿಶೇಷವಾಗಿದೆ. ಒಟ್ಟಾರೆ ಚಲಾವಣೆಯಾದ 1191 ಮತಗಳಲ್ಲಿ 6 ಮತಗಳು    ತಿರಸ್ಕೃತಗೊಂಡಿದ್ದವು. ಉಳಿದವುಗಳಲ್ಲಿ ಜೆಡಿಎಸ್‌ನ ನಿರ್ಮಲಾ 411, ನಫೀಜಾ (ಪಕ್ಷೇತರ) 291, ಪ್ರತಿಭಾ    (ಪಕ್ಷೇತರ) 269, ನಾಗರತ್ನಮ್ಮ (ಬಿಜೆಪಿ) 165, ನಗರಸಭೆಯ ಮಾಜಿ ಸದಸ್ಯೆಯೂ ಆಗಿದ್ದ ಕಾಂಗ್ರೆಸ್ ಅಭ್ಯರ್ಥಿ ಕಮರುನ್ನಿಸಾ 35 ಹಾಗೂ ಲಕ್ಷ್ಮಿ 14 ಮತಗಳನ್ನು ಪಡೆದರು.9ನೇ ವಾರ್ಡ್‌ನಲ್ಲಿ ಶಾಸಕರ ಸಹೋದರ ಡಾ. ಅನಿಲ್ ಕುಮಾರ್ ಕಣದಲ್ಲಿ ಇದ್ದುದರಿಂದ ಕುತೂಹಲ  ಹೆಚ್ಚಾಗಿತ್ತು. ಜೊತೆಗೆ ಇದೇ ವಾರ್ಡ್‌ನ ನಿವಾಸಿ ವಿಜಯಕುಮಾರ್ (ಐನೆಟ್ ವಿಜಿ) ಬಿಜೆಪಿಯ  ಅಭ್ಯರ್ಥಿ ಯಾಗಿದ್ದರು.ಇಲ್ಲಿ ಭಾರೀ ಪೈಪೋಟಿ ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮತದಾರರು ಅನಿಲ್  ಕುಮಾರ್‌ರನ್ನು ಭಾರಿ ಅಂತರಿಂದ ಗೆಲ್ಲಿಸಿದ್ದಾರೆ. ಒಟ್ಟಾರೆ 1489 ಮತಗಳಲ್ಲಿ 1032 ಮತಗಳನ್ನು ಅನಿಲ್  ಕುಮಾರ್ ಪಡೆದರೆ ವಿಜಯ ಕುಮಾರ್ 279 ಮತಗಳಿಗೆ ಸಮಾಧಾನ ಪಡಬೇಕಾಯಿತು.ಕಾಂಗ್ರೆಸ್‌ನ ಮುರಳೀಧರ 134 ಹಾಗೂ ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ ಕೇವಲ 27 ಮತಗಳನ್ನು ಪಡೆದರು. 17 ಮತಗಳು ಕುಲಗೆಟ್ಟಿದ್ದವು.ಗೆದ್ದ ಅಭ್ಯರ್ಥಿಗಳು ತಮ್ಮ ವಾರ್ಡ್‌ಗಳಲ್ಲಿ ಕುಡಿಯುವ ನೀರು ಹಾಗೂ ರಸ್ತೆಯ ಸಮಸ್ಯೆ ಪರಿಹರಿಸಲು ಶ್ರಮಿಸುವುದಾಗಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.