ಬಸವಕಲ್ಯಾಣ: ಹುಲಸೂರನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸಲು ಕಳೆದ 40 ವರ್ಷಗಳಲ್ಲಿ ರಾಜ್ಯ ಸರ್ಕಾರ ರಚಿಸಿದ ನಾಲ್ಕು ಸಮಿತಿಗಳಿಂದ ಶಿಫಾರಸು ಮಾಡಲಾಗಿದೆ. ಹೀಗಿದ್ದಾಗ ಇಂದಿನ ಸರ್ಕಾರ ತಾಲ್ಲೂಕುಗಳ ಘೋಷಣೆಗೆ ಹಿಂದೇಟು ಏಕೆ ಹಾಕುತ್ತಿದೆ ಎಂದು ಹುಲಸೂರ ತಾಲ್ಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ ಪ್ರಶ್ನಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಕಳುಹಿಸಿದ್ದಾರೆ. 20 ವರ್ಷಗಳಿಂದ ಈ ಸಂಬಂಧ ಹೋರಾಟ ನಡೆಸಲಾಗುತ್ತಿದೆ.

ಹಿಂದೆ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದ ಹುಲಸೂರನ್ನು ತಾಲ್ಲೂಕುವನ್ನಾಗಿ ಮಾಡಲು ಯಾವುದೇ ಅಡೆತಡೆಗಳಿಲ್ಲ. ಅಲ್ಲದೆ, ವಾಸುದೇವರಾವ ಸಮಿತಿ, ಟಿ.ಎಂ.ಹುಂಡೇಕಾರ್ ಸಮಿತಿ, ಪಿ.ಸಿ.ಗದ್ದಿಗೌಡರ ಸಮಿತಿ ಮತ್ತು ಎಂ.ಬಿ.ಪ್ರಕಾಶ ಸಮಿತಿಯಿಂದ ಇದರ ಮಂಜೂರಾತಿಗೆ ಶಿಫಾರಸು ಮಾಡಲಾಗಿದೆ.

ಈ ಕಾರಣ ಹಿಂದಿನ ಬಿಜೆಪಿ ಸರ್ಕಾರ ಹುಲಸೂರ ಒಳಗೊಂಡು 43 ಹೊಸ ತಾಲ್ಲೂಕುಗಳನ್ನು ಘೋಷಿಸಿತ್ತು. ಪ್ರತಿ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ 2 ಕೋಟಿ ರೂಪಾಯಿ ಅನುದಾನ ಸಹ ಒದಗಿಸಿತ್ತು.
ಆದರೆ, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಬಗ್ಗೆ ನಿರಾಸಕ್ತಿ ತೋರುತ್ತಿರುವುದು ಸೇಡಿನ ರಾಜಕಾರಣವಾಗಿದೆ. ಇದಕ್ಕಾಗಿ ಹಣದ ಕೊರತೆಯ ನೆಪ ಸರಿಯಲ್ಲ ಎಂದಿದ್ದಾರೆ.

ತಾಲ್ಲೂಕು ಕೇಂದ್ರದ ವ್ಯಾಪ್ತಿ ಕಡಿಮೆ ಆಗಿರುವಷ್ಟು ಜನರಿಗೆ ಅನುಕೂಲ ಆಗುತ್ತದೆ. ಕಡಿಮೆ ಅವಧಿಯಲ್ಲಿ ಕೆಲಸಗಳು ಆಗುತ್ತವೆ.

ಆದ್ದರಿಂದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗುಜರಾತ ಮತ್ತು ಮಧ್ಯಪ್ರದೇಶದಲ್ಲಿ ಈಚೆಗೆ ಅನೇಕ ಹೊಸ ತಾಲ್ಲೂಕುಗಳನ್ನು ರಚಿಸಲಾಗಿದೆ. ಕರ್ನಾಟಕ ಮಾತ್ರ ಈ ವಿಷಯದಲ್ಲಿ ಹಿಂದಿದೆ ಎಂದಿದ್ದಾರೆ.

ಹುಲಸೂರನ ಜತೆಗೆ ಬೀದರ ಜಿಲ್ಲೆಯ ಕಮಾಲನಗರ ಮತ್ತು ಚಿಟಗುಪ್ಪಗಳನ್ನು ಸಹ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

ಆದ್ದರಿಂದ ಅಲ್ಲಿಯೂ ಸಾರ್ವಜನಿಕ ಕಚೇರಿಗಳನ್ನು ಆರಂಭಿಸಿ ಜನರಿಗೆ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಹೊಸ ತಾಲ್ಲೂಕುಗಳನ್ನು ಘೋಷಿಸಿದ ನಂತರ ಅವುಗಳನ್ನು ರದ್ದುಗೊಳಿಸುವ ನಿರ್ಣಯ ತೆಗೆದುಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಗಂಭೀರ ಪರಿಣಾಮ ಎದುರಿಸುವುದು ಖಚಿತ ಎಂದಿದ್ದಾರೆ. ಮನವಿಯಲ್ಲಿ ಸಮಿತಿಯ 20 ಕ್ಕೂ ಹೆಚ್ಚಿನ ಸದಸ್ಯರು ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.