ಶನಿವಾರ, ಏಪ್ರಿಲ್ 17, 2021
33 °C

ಹುಲ್ಲು ಬೆಳೆಯಲು ಆಧುನಿಕ ತಂತ್ರಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬರಗಾಲ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆಗೆ  ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರವು ಆಧುನಿಕ ತಂತ್ರಜ್ಞಾನದಿಂದ ಹುಲ್ಲು ಬೆಳೆಯುವ ವಿಧಾನವನ್ನು ಪರಿಚಯಿಸಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಮಂಗಳವಾರ ಹೇಳಿದರು.ಈ ವಿಧಾನದಲ್ಲಿ ಏಳು ದಿನಗಳ ಅವಧಿಯಲ್ಲಿ ಹುಲ್ಲು ಬೆಳೆಸಿ, ಜಾನು ವಾರುಗಳಿಗೆ ಒದಗಿಸಲು ಸಾಧ್ಯ ಎಂದು ಅವರು ತಿಳಿಸಿದರು.ಉತ್ತರ ಕರ್ನಾಟಕದಲ್ಲಿ ಬರದಿಂದಾಗಿ ಶೇ 40ರಷ್ಟು ಜಾನುವಾರು  ಸಾವನ ್ನಪ್ಪುತ್ತಿವೆ. ಇದನ್ನು ತಡೆಗಟ್ಟಲು ಹಾಗೂ ಹೈನುಗಾರಿಕೆಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ ಎಂದರು.ತಗಡಿನ ತಟ್ಟೆಗಳಲ್ಲಿ ಮೇವು ಬೆಳೆಯುವ ಈ ಹೊಸ ತಂತ್ರಜ್ಞಾನ ವಿಧಾನ  ಇದೇ 15 ರಂದು ಸಾರ್ವ ಜನಿಕರಿಗೆ ಪ್ರದರ್ಶಿ ಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.