ಗುರುವಾರ , ಮೇ 6, 2021
25 °C
ಮೊದಲ ಪಂಚಾಯಿತಿ ಚುನಾವಣೆ

ಹೆಗಡೆ, ನಜೀರ್‌ ಪರಂಪರೆ ಮುಂದುವರಿಸಿದ ಘೋರ್ಪಡೆ

ಅನಿರುದ್ಧ ಕೃಷ್ಣ Updated:

ಅಕ್ಷರ ಗಾತ್ರ : | |

ಡಿ‌ಸೆಂಬರ್ ೧೯೯೨ ರಲ್ಲಿ ಸಂವಿಧಾನಕ್ಕೆ ೭೩ನೇ ತಿದ್ದುಪಡಿಯಾಗಿ ಪಂಚಾಯತ್ ವ್ಯವಸ್ಥೆಗೆ ಸಾಂವಿಧಾನಿಕ ಮಾನ್ಯತೆ ಸಿಕ್ಕಾಗ ಕರ್ನಾಟಕದಲ್ಲಿ ವೀರಪ್ಪ ಮೊಯಿಲಿ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಸಂಡೂರಿನ ರಾಜವಂಶಕ್ಕೆ ಸೇರಿದ ಮುರಾರಿರಾವ್ ಯಶವಂತರಾವ್ (ಎಂ.ವೈ) ಘೋರ್ಪಡೆ ಪಂಚಾಯತ್ ರಾಜ್ ಮಂತ್ರಿಯಾಗಿದ್ದರು. ೧೯೮೭ರಲ್ಲಿ ಜನತಾ ಸರ್ಕಾರದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಪರಿಷತ್ತು ಮತ್ತು ಮಂಡಲ ತಾಲ್ಲೂಕುಗಳ ಅವಧಿ ಮುಗಿದು ಆಡಳಿತಾಧಿಕಾರಿಗಳಿದ್ದರು. ೧೯೯೨ರಲ್ಲಿ ನಡೆಯ­ಬೇಕಿದ್ದ ಚುನಾವಣೆಗಳನ್ನು ಬಂಗಾರಪ್ಪ ನೇತೃತ್ವದ ಸರ್ಕಾರ ಏನೇನೋ ನೆಪ ಹೇಳಿ ಮುಂದೂಡಿತ್ತು.ಸಂವಿಧಾನ ತಿದ್ದುಪಡಿಯಾದ ಕಾರಣ ಚುನಾವಣೆ­ಗಳನ್ನು ನಡೆಸುವುದು ಮೊಯ್ಲಿ ಸರ್ಕಾರಕ್ಕೆ ಅನಿವಾರ್ಯ­ವಾಯಿತು. ಆದರೆ ಅದಕ್ಕೆ ಮೊದಲು ರಾಜ್ಯ ಪಂಚಾಯತ್ ರಾಜ್ ಕಾಯ್ದೆಯನ್ನು ೭೩ನೇ ತಿದ್ದುಪಡಿಗೆ ಅನುಗುಣವಾಗಿ ಪುನರ್ ರೂಪಿಸಬೇಕಿತ್ತು. ಪಂಚಾಯತ್ ರಾಜ್ ಮಂತ್ರಿ ಘೋರ್ಪಡೆ ಈ ಕಾರ್ಯವನ್ನು ಕೇವಲ ಅನಿವಾರ್ಯ ಎನ್ನುವ ರೀತಿಯಲ್ಲಿ ವಹಿಸಿಕೊಳ್ಳಲಿಲ್ಲ. ಅವರಿಗೆ ಹೊಸ ವ್ಯವಸ್ಥೆಯನ್ನು ಹುಟ್ಟುಹಾಕುವುದರಲ್ಲಿ ಪ್ರಾಮಾಣಿಕವಾದ ಆಸಕ್ತಿ ಇತ್ತು. ರಾಮಕೃಷ್ಣ ಹೆಗಡೆ, ನಜೀರ್‌ಸಾಬ್ ಮತ್ತು ರಾಜೀವ್ ಗಾಂಧಿಯವರಂತೆಯೇ ಘೋರ್ಪಡೆಯವರಿಗೆ ಕೂಡಾ ಅಧಿಕಾರ ವಿಕೇಂದ್ರಿ­ಕರಣದ ಬಗ್ಗೆ ಅಪಾರ ಬದ್ಧತೆ ಇತ್ತು.ಕರ್ನಾಟಕದ ಮಟ್ಟಿಗೆ ವಿಕೇಂದ್ರೀಕೃತ ವ್ಯವಸ್ಥೆ ಜನತಾ ಸರ್ಕಾರ ಮತ್ತು ಕಾಂಗ್ರೆಸ್ ಸರ್ಕಾರಗಳೆರಡರ ಜಂಟಿ ಕೊಡುಗೆ. ಇದರ ಶ್ರೇಯಸ್ಸು ಜನತಾ ಪರಿವಾರದಲ್ಲಿ ಹೆಗಡೆ ಮತ್ತು ನಜೀರ್‌ಸಾಬ್ ಅವರಿಗೆ ಸೇರಿದರೆ, ಕಾಂಗ್ರೆಸ್ಸಿನಲ್ಲಿ ಅದು ಮುಖ್ಯವಾಗಿ ಸೇರಬೇಕಾಗಿರುವುದು ಘೋರ್ಪಡೆಯವರಿಗೆ. ೭೩ನೇ ತಿದ್ದುಪಡಿಗೆ ಮೊದಲಿನ ವಿಕೇಂದ್ರೀಕರಣದ ಚರಿತ್ರೆಯನ್ನು ಹೆಗಡೆ ಮತ್ತು ನಜೀರ್‌ಸಾಬ್ ಬರೆದರೆ, ತಿದ್ದುಪಡಿಯ ನಂತರ ವಿಕೇಂದ್ರೀಕರಣಕ್ಕೆ ಹೊಸ ಭಾಷ್ಯ ಬರೆದವರು ಘೋರ್ಪಡೆ. ವೈಯಕ್ತಿಕವಾಗಿ ಮುತುವರ್ಜಿ ವಹಿಸಿ ಘೋರ್ಪಡೆ ಹೊಸ ಕಾಯ್ದೆಯನ್ನು (ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ - ೧೯೯೩) ರೂಪಿಸಿ ವಿಧಾನ ಮಂಡಳದ ಒಪ್ಪಿಗೆ ಪಡೆದುಕೊಂಡರು.ಹೊಸ ಕಾಯ್ದೆಯನ್ನು ೧೯೮೩ ರ ಕಾಯ್ದೆ ಮತ್ತು ಸಂವಿಧಾನ ತಿದ್ದುಪಡಿ ಇವೆರಡರನ್ನೂ ಹಿನ್ನೆಲೆಯಾಗಿಸಿ­ಕೊಂಡು ರೂಪಿಸಲಾಗಿತ್ತು. ಜನತಾ ಸರ್ಕಾರದ ೧೯೮೩ರ ಕಾಯ್ದೆಗೆ ಹೋಲಿಸಿದರೆ ೧೯೯೩ರ ಕಾಯ್ದೆಯಲ್ಲಿ ಹಲವು ಅಂಶಗಳನ್ನು ಬದಲಾಯಿಸಲಾಗಿತ್ತು. ಹಳೆಯ ಎರಡು ಹಂತಕ್ಕೆ ಬದಲಾಗಿ ಹೊಸ ಕಾಯ್ದೆ ಮೂರು ಹಂತದ ಪಂಚಾಯತ್ ವ್ಯವಸ್ಥೆಗೆ ಅನುವು ಮಾಡಿಕೊಟ್ಟಿತ್ತು. ಹಳೆಯ ಮಂಡಲ ತಾಲ್ಲೂಕುಗಳ ಸ್ಥಾನದಲ್ಲಿ ಹೊಸ ಗ್ರಾಮ ತಾಲ್ಲೂಕುಗಳು, ಹಳೆಯ ಜಿಲ್ಲಾ ಪರಿಷತ್ತುಗಳ ಸ್ಥಾನದಲ್ಲಿ ಜಿಲ್ಲಾ ತಾಲ್ಲೂಕುಗಳು ಮತ್ತು ಚುನಾಯಿತ ತಾಲೂಕು ತಾಲ್ಲೂಕುಗಳು (ಹಳೆಯ ವ್ಯವಸ್ಥೆಯಲ್ಲಿ ತಾಲೂಕು ತಾಲ್ಲೂಕು ಚುನಾಯಿತ ಸಂಸ್ಥೆಯಾಗಿರಲಿಲ್ಲ) ಎಂಬಂತೆ ಹೊಸ ಕಾಯ್ದೆಯನ್ನು ರೂಪಿಸಲಾಗಿತ್ತು. ಮಂಡಲ ತಾಲ್ಲೂಕುಗಳಿಗೆ ಹೋಲಿಸಿದರೆ ಗ್ರಾಮ­ತಾಲ್ಲೂಕುಗಳ ವ್ಯಾಪ್ತಿ ಕಡಿಮೆ ಇತ್ತು. ಗ್ರಾಮ ತಾಲ್ಲೂಕುಗಳ ಚುನಾವಣೆ ಪಕ್ಷೇತರ ನೆಲೆಯಲ್ಲಿ ನಡೆಯಬೇಕಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಜಿಲ್ಲಾ ಪರಿಷತ್‌ನ ಮುಖ್ಯ­ಕಾರ್ಯ­ದರ್ಶಿಯ ಹುದ್ದೆಯನ್ನು ಜಿಲ್ಲಾ ಪಂಚಾಯತ್‌ನಲ್ಲಿ ಮುಖ್ಯಕಾರ್ಯನಿರ್ವ­ಹಣಾ­ಧಿ­ಕಾರಿ ಎಂದು ಮರುನಾಮಕರಣ ಮಾಡಲಾಯಿತು. ಹಳೆಯ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿಗಿಂತ ಹಿರಿಯರಾದ ಅಧಿಕಾರಿಗಳನ್ನು ಜಿಲ್ಲಾಪರಿಷತ್ ಮುಖ್ಯ ಕಾರ್ಯದರ್ಶಿ­ಗಳನ್ನಾಗಿ ನೇಮಿಸುವ ಪರಿಪಾಠವಿತ್ತು. ಹೊಸ ಕಾಯ್ದೆಯ ಪ್ರಕಾರ ಜಿಲ್ಲಾಧಿಕಾರಿಗಳಿಗಿಂತ ಕಿರಿಯ ಅಧಿಕಾರಿಗಳು ಜಿಲ್ಲಾ ತಾಲ್ಲೂಕುಗಳ ಮುಖ್ಯ ಕಾರ್ಯನಿರ್ವಹಣಾ­ಅಧಿಕಾರಿಗಳಾದರು.ವಿಧಾನಮಂಡಲದಲ್ಲಿ ಚರ್ಚೆಗೆ ಬಂದಾಗ ಹೊಸ ಕಾಯ್ದೆ ೧೯೮೩ರ ಕಾಯ್ದೆಗಿಂತ ದುರ್ಬಲ­ವಾಗಿದೆ ಎಂಬ ವಾದಗಳು ಜೋರಾಗಿಯೇ ಕೇಳಿಬಂದವು. ಜನತಾದಳದ ಸದಸ್ಯರು ಹೊಸ ಕಾಯ್ದೆ ವಿಕೇಂದ್ರೀಕರಣಕ್ಕೆ ನಿಜವಾದ ಬದ್ಧತೆ ಹೊಂದಿಲ್ಲ ಎಂದು ವಾದಿಸಿದರು. ಎಲ್ಲರನ್ನೂ ಸಮಾಧಾನ ಪಡಿಸಿದರು. ಮುಂದೆ ಸರಿ ಪಡಿಸೋಣ ಎಂಬ ಭರವಸೆ ಇತ್ತರು. ಕೊನೆಗೂ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ (೧೯೯೩) ಜಾರಿಗೆ ಬಂದೇ ಬಿಟ್ಟಿತು. ಕಾಯ್ದೆ ಜಾರಿಗೆ ಬಂದ ಮೇಲೆ ಆಗಬೇಕಿದ್ದ ಮೊದಲ ಕೆಲಸ ಮೂರು ಹಂತದ ಪಂಚಾಯತ್ ಸಂಸ್ಥೆಗಳಿಗೆ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಆಡಳಿತವನ್ನು ಜಾರಿಗೆ ತರುವುದು.ಹೊಸ ಕಾಯ್ದೆಯ ಪ್ರಕಾರ ೧೯೯೩ ಡಿಸೆಂಬರ್ ಕೊನೆಯ ವಾರದಲ್ಲಿ ಗ್ರಾಮತಾಲ್ಲೂಕು ಚುನಾವಣೆ­ಗಳು ನಡೆದವು. ತಾಲೂಕು ತಾಲ್ಲೂಕು ಮತ್ತು ಜಿಲ್ಲಾ ತಾಲ್ಲೂಕುಗಳಿಗೆ ಸದ್ಯವೇ ಚುನಾವಣೆ ನಡೆಸ­ಲಾಗುವುದು ಎಂದು ಸರ್ಕಾರ ಭರವಸೆ ನೀಡಿತು. ಗ್ರಾಮ ತಾಲ್ಲೂಕು ಚುನಾವಣೆ ಕಾಯ್ದೆಯ ಪ್ರಕಾರ ಪ್ರಕ್ಷಾತೀತ­ವಾಗಿ ನಡೆದರೂ, ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜನತಾದಳ ಎರಡೂ ಪಕ್ಷಗಳೂ ನಮ್ಮ ಅಭ್ಯರ್ಥಿಗಳೇ ಹೆಚ್ಚು ಗೆದ್ದಿದ್ದಾರೆ ಎಂದು ತಮ್ಮದೇ ಮೂಲಗಳಿಂದ ಸಂಗ್ರಹಿಸಿದ ಅಂಕೆ--ಸಂಖ್ಯೆಗಳನ್ನು ಮಾಧ್ಯಮಗಳಿಗೆ ನೀಡಿದವು.ಸಂವಿಧಾನ ತಿದ್ದುಪಡಿಯ ಪ್ರಕಾರ ಪಂಚಾಯತ್ ಚುನಾವಣೆಗಳನ್ನು ರಾಜ್ಯ ಮಟ್ಟದ ಪ್ರತ್ಯೇಕ ಚುನಾವಣಾ ಆಯೋಗ ನಡೆಸಿಕೊಡಬೇಕಿತ್ತು. ಆ ತನಕ ಪಂಚಾಯತ್ ಚುನಾವಣೆಗಳನ್ನು ಕೂಡಾ ಕೇಂದ್ರ ಚುನಾವಣಾ ಆಯೋಗದ ರಾಜ್ಯ ಪ್ರತಿನಿಧಿ ಅಂದರೆ ಮುಖ್ಯ ಚುನಾವಣಾಧಿಕಾರಿಗಳೇ ನಡೆಸುವ ಪರಿಪಾಠವಿತ್ತು. ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಜ್ಯ ಚುನಾವಣಾ ಆಯೋಗದ ಮೊದಲ ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ನಾಗರಾಜನ್ ಅವರನ್ನು ನೇಮಿಸಲಾಗಿತ್ತು. ನಾಗರಾಜನ್ ಕೂಡಾ ಘೋರ್ಪಡೆಯವರಂತೆಯೇ ಪಂಚಾಯತ್ ವ್ಯವಸ್ಥೆಯ ಬಗ್ಗೆ ವಿಶೇಷ ಒಲವು ಮತ್ತು ಬದ್ಧತೆ ಇದ್ದ ಅಧಿಕಾರಿಯಾಗಿದ್ದರು. ಗ್ರಾಮ ತಾಲ್ಲೂಕು ಚುನಾವಣೆ­ಗಳನ್ನು ಯಶಸ್ವಿಯಾಗಿ ನಡೆಸಿದ ನಂತರ ನಾಗರಾಜನ್ ತಾಲೂಕು ಮತ್ತು ಜಿಲ್ಲಾ ತಾಲ್ಲೂಕು ಚುನಾವಣೆ­ಗಳನ್ನು ನಡೆಸಲು ಸಿದ್ದತೆ ನಡೆಸತೊಡಗಿದರು. ಆದರೆ ರಾಜ್ಯ ಸರ್ಕಾರಕ್ಕೆ ಈ ಚುನಾವಣೆಗಳನ್ನು ನಡೆಸಲು ಇಷ್ಟವಿಲ್ಲ ಎನ್ನುವ ಗುಸುಗುಸು ಕೇಳತೊಡಗಿತು. ಮೊಯ್ಲಿ ಸಂಪುಟದಲ್ಲಿ ಬಹುಶಃ ಘೋರ್ಪಡೆಯವರನ್ನು ಬಿಟ್ಟರೆ ಉಳಿದ ಯಾರಿಗೂ ತಾಲೂಕು ತಾಲ್ಲೂಕು ಮತ್ತು ಜಿಲ್ಲಾ ತಾಲ್ಲೂಕು ಚುನಾವಣೆಗಳನ್ನು ಎದುರಿಸುವ ಧೈರ್ಯವಾಗಲೀ, ಆಸಕ್ತಿಯಾಗಲೀ ಇದ್ದ ಹಾಗಿರಲಿಲ್ಲ. ಅದಕ್ಕೆ ಒಂದು ಕಾರಣ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದುದು. ಕಾಂಗ್ರೆಸ್ ಭಿನ್ನಮತದಿಂದ ತತ್ತರಿಸಿ ಸೋಲನ್ನು ಎದುರು ನೋಡುತ್ತಿದ್ದ ದಿನಗಳವು. ಏಪ್ರಿಲ್ ತಿಂಗಳ ಕೊನೆಯ ದಿನ ಪಂಚಾಯತ್ ಚುನಾವಣೆಗಳ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ಕ್ಯಾಬಿನೆಟ್ ಸಭೆ ಸೇರಿತ್ತು. ಸುದೀರ್ಘ ಚರ್ಚೆಯ ನಂತರ ಚುನಾವಣೆಯನ್ನು ಮುಂದೂಡುವ ನಿರ್ಣಯ ಕೈಗೊಳ್ಳಲಾಯಿತು. ಸಭೆ­ಯಲ್ಲಿ ಏಕಾಂಗಿಯಾಗಿ ಚುನಾವಣೆ ನಡೆಸಿಯೇ ತೀರ­ಬೇಕೆಂದು ವಾದಿಸಿದ್ದ ಘೋರ್ಪಡೆಯವರಿಗೆ ನಿರಾಶೆ­ಯಾಗಿತ್ತು. ಅವರು ಇನ್ನೊಂದು ಕ್ಷಣವೂ ಅಲ್ಲಿರಲು ಬಯಸಲಿಲ್ಲ. ಮರುದಿನವೇ ಅವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು.ನವೆಂಬರ್ ೧೯೯೪ರಲ್ಲಿ ವಿಧಾನಸಭಾ ಚುನಾವಣೆಗಳು ನಡೆದವು. ಕಾಂಗ್ರೆಸ್ ಹೀನಾಯವಾಗಿ ಸೋತು ದೇವೇಗೌಡ ನೇತೃತ್ವದ ಜನತಾದಳ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಹೊಸ ಸರ್ಕಾರಕ್ಕೆ ತಾಲೂಕು ಮತ್ತು ಜಿಲ್ಲಾ ತಾಲ್ಲೂಕುಗಳಿಗೆ ಚುನಾವಣೆ ನಡೆಸುವುದು ಅನಿವಾರ್ಯ­ವಾಗಿತ್ತು. ಮೇ ತಿಂಗಳಲ್ಲಿ ಚುನಾವಣೆಗಳು ನಡೆದವು. ಚುನಾವಣಾ ಆಯುಕ್ತ ಪಿ.ಎಸ್. ನಾಗರಾಜನ್ ಜತೆಗೆ ಆಯೋಗದ ಕಾರ್ಯದರ್ಶಿಯಾಗಿ ಜಿ.ವಿ. ಕೊಂಗವಾಡ್ ಇದ್ದರು. ಆರು ತಿಂಗಳ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಆದಂತೆ ಜನತಾದಳ ಬಹುತೇಕ ಜಿಲ್ಲಾ ತಾಲ್ಲೂಕು ಮತ್ತು ತಾಲ್ಲೂಕು ತಾಲ್ಲೂಕುಗಳಲ್ಲಿ ಗೆದ್ದಿತು. ಅಲ್ಲಿಗೆ ೭೩ನೇ ಸಂವಿಧಾನ ತಿದ್ದುಪಡಿಯನ್ವಯ ಮೊದಲನೇ ಬಾರಿಗೆ ನಡೆದ ತಾಲ್ಲೂಕು ಚುನಾವಣೆಗಳು ಕರ್ನಾಟಕದಲ್ಲಿ ಪೂರ್ಣಗೊಂಡವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.