ಸೋಮವಾರ, ಮಾರ್ಚ್ 1, 2021
29 °C

ಹೆದ್ದಾರಿ ಶುಲ್ಕ ಸಂಗ್ರಹ: ಟೋಲ್ ಮುಂದೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿ ಶುಲ್ಕ ಸಂಗ್ರಹ: ಟೋಲ್ ಮುಂದೆ ಪ್ರತಿಭಟನೆ

ಹೊಸಕೋಟೆ: ಪಟ್ಟಣದ ಹೊರವಲ ಯದ ಹೆದ್ದಾರಿಯಲ್ಲಿ ಖಾಸಗಿ ಸಂಸ್ಥೆಯವರು ಟೋಲ್ ಸಂಗ್ರಹ ಮಾಡುತ್ತಿರುವುದನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ವಸೂಲಿ ವಿರೋಧಿ ಒಕ್ಕೂಟದ ಸದಸ್ಯರು ಗುರುವಾರ ಟೋಲ್ ಮುಂಭಾಗ ಪ್ರತಿಭಟನೆ ನಡೆಸಿದರು.‘ಸರ್ಕಾರ ಇಂಧನ, ವಾಹನಗಳ ನೋಂದಣಿ ಮುಂತಾದವುಗಳ ಮೂಲಕ ಬಳಕೆದಾರರಿಂದ  ರಸ್ತೆ ಸೌಕರ್ಯಕ್ಕೆ ತೆರಿಗೆ ವಸೂಲಿ ಮಾಡುತ್ತಿದೆ. ಮತ್ತೆ ಖಾಸಗಿ ಸಹಭಾಗಿತ್ವದಲ್ಲಿ ಶುಲ್ಕ ವಸೂಲಿ ಮಾಡುವುದು ಹಗಲು ದರೋಡೆ’ ಎಂದು ಪ್ರತಿಭಟನಾಕಾರರು ದೂರಿದರು.‘ಬೆಲೆಯೇ ಸಿಗದೆ ಕಂಗಾಲಾಗಿರುವ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಿಕೊಂಡು ಬರಲೂ ಟೋಲ್ ಕಟ್ಟ ಬೇಕಾಗಿರುವುದು ದೊಡ್ಡ ದುರಂತ. ಹಾಗೆಯೇ ಟೋಲ್ ನೆಪದಲ್ಲಿ ಬಸ್ ಪ್ರಯಾಣಿಕರು ಪ್ರತಿನಿತ್ಯ ಹೆಚ್ಚು ದರ ನೀಡಬೇಕಿದೆ. ಸರ್ಕಾರ ತಕ್ಷಣದಿಂದ ಟೋಲ್ ಸಂಗ್ರಹ ವ್ಯವಸ್ಥೆ ನಿಲ್ಲಿಸಬೇಕು’ ಎಂದು ಅವರು ಆಗ್ರಹಿಸಿದರು.ಸಾದಪ್ಪನಹಳ್ಳಿ ಮಂಜುನಾಥ್, ಗೊರವಗೆರೆ ನಾಗೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ವಿಶೇಷ ಶಿಬಿರ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇದೇ 9 ರಂದು ತಾಲ್ಲೂಕಿನ ಎಲ್ಲ 265 ಮತಗಟ್ಟೆಯಲ್ಲಿ ವಿಶೇಷ ಶಿಬಿರ ನಡೆಸಲಾ ಗುವುದು. ಹೊಸ ಮತದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಾಲ್ಲೂಕಿನ ಸಹಾಯಕ ಚುನಾವಣಾಧಿಕಾರಿ ನಟರಾಜ್ ತಿಳಿಸಿದರು.ಚುನಾವಣೆ ಸಿದ್ಧತೆಗಾಗಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಪ್ರಚಾರ ಸಾಮಗ್ರಿಗಳಿಗೆ ಅವಕಾಶ ನೀಡಬಾರದು. ಎಲ್ಲ ಮತಗಟ್ಟೆಗಳಲ್ಲಿ ಜಾರು ಮೆಟ್ಟಿಲು ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಗಮನ ಹರಿಸಬೇಕು’ ಎಂದರು. ತಹಶೀಲ್ದಾರ್ ಕುಮಾರಸ್ವಾಮಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.