ಶುಕ್ರವಾರ, ಜನವರಿ 17, 2020
23 °C

ಹೆಬ್ರಿ: ಅಮೃತಭಾರತಿ ಶಿಕ್ಷಣ ಸಂಸ್ಥೆ ಕ್ರೀಡಾಕೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ: ಹೆಬ್ರಿಯ ಮಿಥಿಲಾನಗರದ ಅಮೃತಭಾರತಿ ವಿದ್ಯಾಲಯ ಮತ್ತು ಅಮೃತಭಾರತಿ ವಿದ್ಯಾಕೇಂದ್ರ ವಾರ್ಷಿಕ ಕ್ರೀಡಾಕೂಟ ಗುರುವಾರ ನಡೆಯಿತು. ಕ್ರೀಡಾಕೂಟವನ್ನು ಕಾರ್ಕಳ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಬು ಪೂಜಾರಿ ಉದ್ಘಾಟಿಸಿದರು. ಹೆಬ್ರಿಯ ಉದ್ಯಮಿ ಎಚ್.ಕೃಷ್ಣ ಪ್ರಭು ಕ್ರೀಡಾ ಧ್ವಜರೋಹಣ ಮಾಡಿದರು. ಅಮೃತಭಾರತಿ ಟ್ರಸ್ಟ್ ಅಧ್ಯಕ್ಷ ರವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಅಮೃತ­ವಾಣಿ ಮಾಸಿಕ ಹಸ್ತ ಪತ್ರಿಕೆಯನ್ನು ಪಂಚಾಯಿತಿ ಸದಸ್ಯ ಉಮೇಶ ನಾಯಕ್ ಬಿಡುಗಡೆಗೊಳಿಸಿದರು.ಅಮೃತಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ, ಸಂಚಾಲಕ ಬಾಲಕೃಷ್ಣ ಮಲ್ಯ, ಉದ್ಯಮಿ ಭಾಸ್ಕರ ಜೋಯಿಸ್, ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಕಾಲೇಜು ಪ್ರಾಂಶುಪಾಲ ಅಮರೇಶ ಹೆಗ್ಡೆ, ವಿದ್ಯಾಲಯದ ಪ್ರಾಂಶುಪಾಲ ಮೋಹನ್, ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ವಿಮಲಾ, ದೈಹಿಕ ಶಿಕ್ಷಣ ನಿರ್ದೇಶಕ ವಿಜಯ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಶೆಟ್ಟಿ, ಪ್ರಸನ್ನ ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)