ಗುರುವಾರ , ಮೇ 28, 2020
27 °C

ಹೆಸರಿಗಷ್ಟೇ ಸಸ್ಪೆಂಡ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಅಮಾನತುಗೊಂಡ ಕಿರಿಯ ಎಂಜಿನಿಯರ್ ಒಬ್ಬರಿಗೆ ವಾರದವ ರೆಗೂ ಕರ್ತವ್ಯ ನಿರ್ವಹಿಸುವುದಕ್ಕೆ ಅವಕಾಶ ನೀಡುವ ಮೂಲಕ ಅಧಿ ಕಾರಿಗಳು ಸರ್ಕಾರದ ನಿಯಮ ಗಳನ್ನು ಉಲ್ಲಂಘಿಸಿ ಮನ ಬಂದಂತೆ ನಡೆದುಕೊಂಡಿರುವುದು ಇಲ್ಲಿಯ ಪಂಚಾಯತ್‌ರಾಜ್ ಎಂಜಿನಿಯ ರಿಂಗ್ ಉಪವಿಭಾಗದಲ್ಲಿ ಬೆಳಕಿಗೆ ಬಂದಿದೆ. ತಾ.ಪಂ ಕಿರಿಯ ಎಂಜಿನಿಯರ್ ಆಗಿರುವ ಎಸ್.ಎಚ್.ಹನುಮಂತಪ್ಪ ಎರವರಲು ಸೇವೆಯ ಮೇಲೆ ಪಂ.ರಾ ಉಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ. ಆದರೆ ಉದ್ಯೋಗ ಖಾತರಿ ಯೋಜನೆ ಹಣ ದುರುಪ ಯೋಗದ ಸಂಬಂಧ ಜ.4ರಿಂದ ಜಾರಿಗೆ ಬರುವಂತೆ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.ಆದರೆ ಅಮಾನತುಗೊಂಡ ಎಂಜಿ ನಿಯರ್ ಹನುಮಂತಪ್ಪ ಎಂದಿನಂತೆ ಕರ್ತವ್ಯ ನಿರ್ವಹಿಸುವುದಕ್ಕೆ ಉಪ ವಿಭಾಗದ ಮುಖ್ಯಸ್ಥರು ಅವಕಾಶ ನೀಡಿ ಅಚ್ಚರಿ ಮೂಡಿಸಿದ್ದಾರೆ. ಸದರಿ ಎಂಜಿನಿಯರ್ ಜ.12ರವರೆಗೂ ಕಚೇರಿಯ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿರುವುದನ್ನು ಗಮನಿಸಿದರೆ ಅಧಿಕಾರಿಗಳ ಕರ್ತವ್ಯಲೋಪ ಎದ್ದು ಕಾಣುತ್ತಿದೆ. ಈ ವಿಷಯ ಬಯಲಿಗೆ ಬರುತ್ತಿದ್ದಂತೆ ಗಡಿಬಿಡಿಯಲ್ಲಿ ಜ.13ರಿಂದ ಅಮಾನತು ಗೊಂಡಿ ದ್ದಾರೆ ಎಂದು ಹಾಜರಿ ಪುಸ್ತಕದಲ್ಲಿ ನಮೂದಿಸಿದ್ದಾರೆ ಎಂದು ತಿಳಿದಿದೆ. ಅದೇ ರೀತಿ ಉದ್ಯೋಗ ಖಾತರಿ ಯೋಜನೆ ಹಣ ದುರುಪಯೋಗದ ಆರೋಪದ ಮೇಲೆ ಜ.5ರ ಆದೇಶ ದಂತೆ ಅಮಾನತುಗೊಂಡಿದ್ದ ಕಿರಿಯ ಎಂಜಿನಿಯರ್ ದೇವೇಂದ್ರಗೌಡ ಎಂಬುವವರ ಹೆಸರಿನ ಮುಂದೆ ಅದೇ ದಿನ ಅಮಾನತುಗೊಂಡಿರುವುದನ್ನು ನಮೂದಿಸಿರುವುದು ಹಾಜರಿ ಪುಸ್ತಕ ದಲ್ಲಿ ಕಂಡುಬಂದಿದೆ. ಈ ಕುರಿತು ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ವಿವರಿಸಿದ ಎ.ಇ.ಇ ತಿಮ್ಮಣ್ಣ, ಹನುಮಂತಪ್ಪ ಅಮಾ ನತುಗೊಂಡಿರುವ ಅಧಿಕೃತ ಆದೇಶ ಜ.12ರಂದು ತಲುಪಿದೆ ಎಂದರು.

ಆದರೆ ದೇವೇಂದ್ರಗೌಡ ಅವರ ವಿಷಯದಲ್ಲಿ ಮಾತ್ರ ಅಮಾನತು ಗೊಂಡ ದಿನದಂದೇ ಹಾಜರಿ ಪುಸ್ತಕದಲ್ಲಿ ‘ಅಮಾನತು ಗೊಂಡಿದ್ದಾರೆ’ ಎಂಬುದನ್ನು ನಮೂದಿಸಿರುವುದೇಕೆ ಎಂಬುದಕ್ಕೆ, ‘ಅದು ಜಿ.ಪಂ ಆದೇಶ ಆಗಿದ್ದು ಅದೇ ದಿನ ಫ್ಯಾಕ್ಸ್ ಸಂದೇಶ ಬಂದಿತ್ತು ಎಂದಷ್ಟೇ ಹೇಳಿದರು.ಅಲ್ಲದೇ ಹನುಮಂತಪ್ಪ ಜ.12 ರವರೆಗೆ ಸಹಿ ಮಾಡಿದರೂ ಜ.4 ರಿಂದ ಅವರ ವೇತನ ತೆಗೆಯು ವುದಿಲ್ಲ, ಅಲ್ಲದೇ ಯಾವುದೇ ಕೆಲಸ ನಿರ್ವಹಿಸದಂತೆ ಅವರಿಗೆ ನೋಟಿಸ್ ಸಹ ನೀಡಲಾಗಿದೆ, ಪುರ್ತಗೇರಿ ಪುನ ರ್ವಸತಿ ಪ್ರದೇಶದ ಕೆಲಸ ಕಾರ್ಯ ಗಳನ್ನು ಸಿದ್ದುಸಾಬ್‌ರೆಡ್ಡಿ ಎಂಜಿನಿ ಯರ್‌ಗೆ ವಹಿಸಲಾಗಿದೆ ಎಂದು ತಿಮ್ಮಣ್ಣ ಸಮಜಾಯಿಷಿ ನೀಡಿದರು.ವಿಳಂಬ: ಮೂಲಗಳ ಪ್ರಕಾರ ಪುರ್ತಗೇರಿ ಪನರ್ವಸತಿ ಪ್ರದೇಶ ದಲ್ಲಿನ ಮೂಲಸೌಕರ್ಯ ಕೆಲಸ ಕಾಮಗಾರಿಗಳನ್ನು ಹನುಮಂತಪ್ಪ ನಿರ್ವಹಿಸುತ್ತಿದ್ದರು, ಅಮಾನತು ಗೊಂಡ ನಂತರ ಅಧಿಕಾರಿಗಳು ಕೆಲಸವನ್ನು ಬೇರೆಯವರಿಗೆ ವಹಿಸದ ಕಾರಣ ತೆರೆಮರೆಯಲ್ಲಿ ಹನು ಮಂತಪ್ಪ ಅವರೇ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಅತಿವೃಷ್ಟಿ ಸಂಭವಿಸಿ ಒಂದೂವರೆ ವರ್ಷವಾ ದರೂ ಕೆಲಸಗಳು ವಿಳಂಬಗತಿಯಲ್ಲಿ ಮತ್ತು ತೀರಾ ಕಳಪೆ ರೀತಿಯಲ್ಲಿ ನಡೆಯುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.