ಗುರುವಾರ , ಜೂನ್ 24, 2021
23 °C

ಹೈಟೆನ್ಷನ್‌ ವಿದ್ಯುತ್‌ ಕಾಮಗಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ಮೈಸೂರು–ಕೇರಳದ ಕೊಯಿಕ್ಕೋಡ್‌ ಹೈಟೆ­ನ್ಷನ್‌ ವಿದ್ಯುತ್‌ ಮಾರ್ಗದ ಕಾಮಗಾರಿ ಸ್ಥಗಿತಗೊಳಿಸಲು ಕಾವೇರಿ ಸೇನೆ ಹಾಗೂ ಬಸವಣ್ಣ ದೇವರ ಬನ ಸಂರ­ಕ್ಷಣಾ ಟ್ರಸ್ಟ್‌ ಪದಾಧಿ­ಕಾರಿಗಳು ಆಗ್ರಹಿಸಿದರು.ವಿ­ರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ದೇವಮಚ್ಚಿ ಸಂರ­ಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆಯು­ತ್ತಿರುವ ಕಾಮ­ಗಾರಿಯ ಸ್ಥಳಕ್ಕೆ ಸೋಮ­ವಾರ ಭೇಟಿ ನೀಡಿದ ಸಂಘ­ಟನೆಯ ಪ್ರಮುಖರು, ಪವರ್‌ ಗ್ರೀಡ್‌ ಸಂಸ್ಥೆಯ ವಿರುದ್ಧ ಹರಿಹಾಯ್ದರು.ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್‌ ಅಧ್ಯಕ್ಷ ಡಾ.ಬಿ.ಸಿ. ನಂಜಪ್ಪ ಮಾತ­ನಾಡಿ, ಕೊಡಗಿನ ಅರಣ್ಯ ಪ್ರದೇಶ­ವನ್ನು ಲೂಟಿ ಮಾಡುವ ಉದ್ದೇಶ­ದಿಂದ  ವಿದ್ಯುತ್‌ ಕಾಮಗಾರಿ ಆರಂಭಿಸ­ಲಾಗಿದೆ. ಕಾಮಗಾರಿ ಅನು­ಷ್ಠಾನಕ್ಕಾಗಿ ಲಕ್ಷಾಂ­ತರ ಮರ­ಗಳನ್ನು ಕಡಿಯ­ಲಾಗು­ತ್ತಿದೆ. ಇದರಿಂದ ಕಾವೇರಿ ಜಲಮೂಲಕ್ಕೆ ಧಕ್ಕೆ ಉಂಟಾ­ಗಲಿದೆ ಎಂದು ಆರೋಪಿಸಿ­ದರು.ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಮಾತನಾಡಿ, ವಿವಿಧ ಯೋಜನೆ­­ಗಳ ಹೆಸರಿನಲ್ಲಿ ಕೊಡಗಿನ ಪರಿಸರ­ವನ್ನು ನಾಶ ಮಾಡಲು ಸರ್ಕಾರ ಹೊರಟಿದೆ. ಜನರು ಒಗ್ಗಟ್ಟಾಗಿ ಹೋರಾಟ ಮಾಡಲು ಮುಂದೆ ಬರಬೇಕು ಎಂದರು.

ಈ ಹೋರಾಟವನ್ನು ಹತ್ತಿಕ್ಕುವ ಉದ್ದೇಶ­ದಿಂದ ನಮ್ಮ ಮೇಲೆ ವಿನಾಕಾರಣ ಮೊಕದ್ದಮೆ ದಾಖಲಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡು­ತ್ತಿದ್ದಾರೆ ಎಂದು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.