ಸೋಮವಾರ, ಮೇ 17, 2021
26 °C

ಹೈದರಾಬಾದ್: ನಾಳೆ ರೆಡ್ಡಿ ಜಾಮೀನು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

  ಹೈದರಾಬಾದ್, (ಐಎಎನ್ಎಸ್): ಕರ್ನಾಟಕದ ಬಂಧಿತ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ಅವರ ಭಾವ ಶ್ರೀನಿವಾಸ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯವು ಗುರುವಾರಕ್ಕೆ ಮುಂದೂಡಿದೆ.

ಈ ನ್ಯಾಯಾಲಯ ಈ ಇಬ್ಬರು ಬಂಧಿತರ ಬಂಧನ ಅವಧಿಯ ವಿಸ್ತರಣೆಯನ್ನು ಕೋರಿರುವ ಸಿಬಿಐ ಅರ್ಜಿ ವಿಚಾರಣೆಯನ್ನೂ ಗುರುವಾರಕ್ಕೆ ಮುಂದೂಡಿದೆ.

ಆಂಧ್ರ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಓಬಳಾಪುರಂ ಕಂಪೆನಿಯ ಮಾಲಿಕ ಜನಾರ್ದನ ರೆಡ್ಡಿ ಮತ್ತು ಕಂಪೆನಿಯ ಆಡಳಿತ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರನ್ನು ಸಿಬಿಐ ಸೋಮವಾರ ಬಳ್ಳಾರಿಯ ಅವರ ಮನೆಯ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡು ಬಂಧಿಸಿತ್ತು.

ನಂತರ ಅವರನ್ನು ಸೆ. 19ರ ವೆರೆಗೆ ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿತ್ತು. ವಿಚಾರಣೆಗಾಗಿ ಬಂಧಿತರನ್ನು 15 ದಿನಗಳ ಕಾಲ ತನ್ನ ವಶಕ್ಕೆ ನಿಡಬೇಕೆಂದು ಸಿಬಿಐ, ನ್ಯಾಯಾಲಯವನ್ನು ಕೋರಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.