ಸೋಮವಾರ, ಜನವರಿ 20, 2020
20 °C

ಹೊಲಸುಬಾಕರು...

–ಕೆ.ಶರಣಪ್ಪ ನಿಡಶೇಸಿ,ಕುಷ್ಟಗಿ. Updated:

ಅಕ್ಷರ ಗಾತ್ರ : | |

ಹೆಮ್ಮೆಪಡುವಂತಿದೆ

ಭಾರತೀಯರ

ಆಚಾರ-ವಿಚಾರ

ತಲೆತಗ್ಗಿಸುವಂತಿದೆ

ಭಾರತೀಯರ

ಭ್ರಷ್ಟಾಚಾರ!



ಹೌದು...

ಗಂಡಾಗುಂಡಿ ಮಾಡಿ

ಗಡಿಗೆ ತುಪ್ಪ ಕುಡಿಯುವ-

ಕುಡಿಗಳಿಂದ ಭಾರತದಲ್ಲಿ

ನಡೆಯುತ್ತಿವೆ ಎಂಥೆಂಥದೋ

ಪವಾಡಗಳು!



ನೆಲ-ಜಲ, ಕೆರೆ-ಬಾವಿ,

ಮನೆ- ಶೌಚಾಲಯ ನುಂಗುವ

ಹೊಲಸು ಬಾಕರು;

ಅನ್ನಕ್ಕೂ ಕನ್ನ ಹಾಕಿ

ದೇಶದ ಸಂಪತ್ತನ್ನೂ

ಬಿಡದ ಬಕಾಸುರರಿರುವಾಗ

ಭಾರತಕ್ಕೆ ಸಿ(ದ)ಕ್ಕಿದೆ

ಭ್ರಷ್ಟಾಚಾರದಲ್ಲಿ ೯೪ನೇ ಸ್ಥಾನ!



–ಕೆ.ಶರಣಪ್ಪ ನಿಡಶೇಸಿ, ಕುಷ್ಟಗಿ.

ಪ್ರತಿಕ್ರಿಯಿಸಿ (+)