ಸ್ಯಾಂಟಿಯಾಗೊ: ಭಾರತ ಮಹಿಳೆಯರ ತಂಡವು ಇಲ್ಲಿ ನಡೆದ ಎಫ್ಐಎಚ್ ಜೂನಿಯರ್ ಹಾಕಿ ವಿಶ್ವಕಪ್ನ ‘ಕ್ಲಾಸಿಫಿಕೇಷನ್’ ಪಂದ್ಯದಲ್ಲಿ 1–2ರಿಂದ ಸ್ಪೇನ್ ತಂಡಕ್ಕೆ ಮಣಿಯಿತು. ಇದರೊಂದಿಗೆ ಭಾರತ ತಂಡವು ನಿರಾಶಾದಾಯಕ ಹತ್ತನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.

ಒಂಬತ್ತು ಮತ್ತು ಹತ್ತನೇ ಸ್ಥಾನದ ನಿರ್ಣಾಯಕ್ಕಾಗಿ ನಡೆದ ಪ್ಲೇಆಫ್ನಲ್ಲಿ ಭಾರತದ ಪರ ಕನಿಕಾ ಸಿವಾಚ್ (41ನೇ) ಏಕೈಕ ಗೋಲು ಗಳಿಸಿದರೆ, ಸ್ಪೇನ್ ಪರ ನಟಾಲಿಯಾ ವಿಲನೋವಾ (16ನೇ) ಮತ್ತು ಎಸ್ತರ್ ಕೆನಾಲ್ಸ್ (36ನೇ) ತಲಾ ಒಂದು ಗೋಲು ಬಾರಿಸಿದರು.

ಈ ಪಂದ್ಯದಲ್ಲಿ ಭಾರತ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದು, ಒಂದರಲ್ಲಿ ಯಶಸ್ವಿಯಾಯಿತು. ಸ್ಪೇನ್ ತಂಡವೂ ಒಂಬತ್ತು ಪೆನಾಲ್ಟಿ ಕಾರ್ನರ್ಗಳನ್ನು ಪಡೆಯಿತು. ಆ ಪೈಕಿ ಎಂಟು ಪ್ರಯತ್ನಗಳು ವಿಫಲವಾದವು.

2013ರಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡವು ಕೊನೆಯ ಆವೃತ್ತಿಯಲ್ಲಿ (2023) ಒಂಬತ್ತನೇ ಸ್ಥಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.