ಹೊಸಕೋಟೆ: ಧರೆಗುರುಳಿದ ಮರ ಬಾಲಕನಿಗೆ ಗಾಯ

7

ಹೊಸಕೋಟೆ: ಧರೆಗುರುಳಿದ ಮರ ಬಾಲಕನಿಗೆ ಗಾಯ

Published:
Updated:
ಹೊಸಕೋಟೆ: ಧರೆಗುರುಳಿದ ಮರ ಬಾಲಕನಿಗೆ ಗಾಯ

ಹೊಸಕೋಟೆ: ಪಟ್ಟಣದ ಕೋಟೆ ಬಡಾವಣೆಯಲ್ಲಿ ಮಂಗಳವಾರ ಸಂಜೆ ಭಾರಿ ಗಾತ್ರದ ಅಶ್ವತ್ಥ ಮರದ ಭಾಗವೊಂದು ನೆಲಕ್ಕೆ ಉರುಳಿ ಬಿದ್ದ ಪರಿಣಾಮ ಮರದ ಕೆಳಗಡೆ ಇದ್ದ ಪೆಟ್ಟಿ ಅಂಗಡಿಯೊಂದು ಸಂಪೂರ್ಣ ಜಖಂಗೊಂಡಿತಲ್ಲದೆ ವೆಂಕೋಬರಾವ್ (15) ಎಂಬ ಬಾಲಕನೊಬ್ಬನ ಕಾಲು ಮೂಳೆ ಮುರಿದಿದೆ.ಪೆಟ್ಟಿ ಅಂಗಡಿಯಲ್ಲಿದ್ದ ಮತ್ತೊಬ್ಬ ಬಾಲಕಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ. ಅಶ್ವತ್ಥಕಟ್ಟೆ ಕೆಳಗಿದ್ದ ಇನ್ನೊಂದು ಪೆಟ್ಟಿ ಅಂಗಡಿ ಹಾಗೂ ವಿದ್ಯುತ್ ಕಂಬಗಳು ಹಾನಿಯಾಗಿವೆ. ಮರಬಿದ್ದ ಜಾಗದಲ್ಲಿ ಬಸ್ ನಿಲುಗಡೆ ಜಾಗವೂ ಇದ್ದು ಸದಾ ಗಿಜಿಗುಡುತ್ತಿರುತ್ತದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಮರ ಬಹಳಷ್ಟು ಹಳೆಯದಾಗಿದ್ದು ಮಧ್ಯಭಾಗದಲ್ಲಿ ಟೊಳ್ಳಾಗಿದ್ದೆ ಮರ ಬೀಳಲು ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry