ಗುರುವಾರ , ಏಪ್ರಿಲ್ 22, 2021
29 °C

ಹೊಸೂರು: ಸಂಭ್ರಮದ ದೀಪಾವಳಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಚಂದಗಾಲು ಹೊಸೂರು ಗ್ರಾಮದಲ್ಲಿ ಮಹದೇಶ್ವರಸ್ವಾಮಿಯ ದೀಪಾವಳಿ ರಥೋತ್ಸವ ಗುರುವಾರ ಸಡಗರ, ಸಂಭ್ರಮದಿಂದ ನಡೆಯಿತು.ಸಂಜೆ 4.30ಕ್ಕೆ ಒಡೆಯರ್ ವಂಶಸ್ಥ ಶ್ರೀಕಂಠದತ್ತ ನರಸಿಂರಾಜ ಒಡೆಯರ್ ಅವರ ಪತ್ನಿ ಪ್ರಮೋದಾದೇವಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವಕ್ಕಾಗಿ ಬಗೆ ಬಗೆಯ ಹೂಗಳಿಂದ ರಥವನ್ನು ಸಿಂಗರಿಸಲಾಗಿತ್ತು. ಭಕ್ತ ಜನರು ಸರ್ವಾಲಂಕೃತ ರಥವನ್ನು ದೇವಾಲಯದ ಸುತ್ತ ಶ್ರದ್ಧಾ, ಭಕ್ತಿಯಿಂದ ಎಳೆದರು. ರಥ ಎಳೆಯುವಾಗ ಉಘೇ.. ಉಘೇ.. ಘೋಷಣೆಗಳು ಮೊಳಗಿದವು. ವಿವಿಧೆಡೆಗಳಿಂದ ಆಗಮಿಸಿದ್ದ ಯುವಜನರು ಉತ್ಸಾಹದಿಂದ ರಥ ಎಳೆದರು.ಹರಕೆ ಹೊತ್ತವರು ರಥಕ್ಕೆ ಹಣ್ಣ, ದವನ ಎಸೆದರು. ರಥೋತ್ಸವದಲ್ಲಿ ನವ ಜೋಡಿಗಳು ಹೆಚ್ಚು ಕಂಡು ಬಂದರು. ಕೆಲವರು ಬಾಯಿ ಬೀಗ, ಪಂಜಿನ ಸೇವೆ ಸಲ್ಲಿಸಿದರು. ರಥೋತ್ಸವದ ಜತೆಗೆ ರಾಸುಗಳ ಮೆರವಣಿಗೆ ಕೂಡ ನಡೆಯಿತು. ಚಂದಗಾಲು, ಮೇಳಾಪುರ, ನಗುವನಹಳ್ಳಿ, ನಾಗಯ್ಯನಹುಂಡಿ, ಬೆಳವಾಡಿ, ಮಹದೇವಪುರ, ಬ್ರಹ್ಮಪುರ ಇತರ ಗ್ರಾಮಗಳ ಜನರು ಅಷ್ಟೇ ಅಲ್ಲದೆ ಮೈಸೂರು, ಶ್ರೀರಂಗಪಟ್ಟಣಗಳಿಂದ ಭಕ್ತರು ಆಗಮಿಸಿದ್ದರು.ಮಹದೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ನ.16ರಂದು ಮುಕ್ತಾಯ ಪೂಜೆ, ನ.26ರಂದು ಕಾರ್ತಿಕ ದೀಪೋತ್ಸವ ಜರುಗಲಿದೆ. ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ರಥೋತ್ಸವ ಆಚರಣಾ ಸಮಿತಿಯ ಸಂಚಾಲಕ ವೆಂಕಟೇಶ್, ಭಾರತ ಸೇವಾದಲದ ತಾಲ್ಲೂಕು ಅಧ್ಯಕ್ಷ ಶಿವಸ್ವಾಮಿ   ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.