ಗುರುವಾರ , ಜೂನ್ 17, 2021
29 °C

ಹೊಸ ಉದ್ದೀಪನ ಮದ್ದು ಪರೀಕ್ಷೆ: ಹೆಚ್ಚು ನಿಖರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌(ಪಿಟಿಐ): ಕ್ರೀಡಾ-­ಪಟು­ಗಳಿಗೆ ನಡೆಸುವಉದ್ದೀಪನ ಮದ್ದು­ಸೇವನೆ ಪರೀಕ್ಷೆ (ಡೋಪಿಂಗ್‌ ಟೆಸ್ಟ್‌) ಯಲ್ಲಿ ನೂತನ ಆವಿಷ್ಕಾರ ಆಗಿದ್ದು, ಈಗಿರುವ ಪರೀಕ್ಷೆಗಿಂತ ಹೊಸ ಪರೀಕ್ಷೆ ಸಾವಿರ ಪಟ್ಟು ಹೆಚ್ಚು ನಿಖರವಾಗಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.‘ಎಷ್ಟು ಪ್ರಮಾಣದಲ್ಲಿ ಮಾದಕ ಪದಾರ್ಥ ಸೇವಿಸಲಾಗಿದೆ ಅಥವಾ ಎಷ್ಟು ಕಾಲದ ಹಿಂದೆ ಮದ್ದು ಸೇವಿಸ­ಲಾ­ಗಿದೆ ಎಂಬುದನ್ನು ಪರೀಕ್ಷಕರು ನಿಖರ­ವಾಗಿ ಕಂಡುಹಿಡಿಯಲು ಸಾಧ್ಯ­ವಿಲ್ಲ. ಆದರೆ, ಹೊಸ ಪರೀಕ್ಷೆ ಮಾತ್ರ ಈಗಿರುವ ವಿಧಾ­ನ­ಕ್ಕಿಂತ ಹೆಚ್ಚು ಸೂಕ್ಷ್ಮ­ವಾಗಿದೆ’ ಎಂದು ಸಂಶೋಧನಾ ತಂಡದ ನೇತೃತ್ವ ವಹಿ­ಸಿದ್ದ ಅರ್ಲಿಂಗ್ಟನ್‌ನ ಟೆಕ್ಸಾಸ್‌ ವಿಶ್ವ­ವಿದ್ಯಾ­­ಲಯದ ಡೇನಿಯಲ್‌ ಆರ್ಮ್‌ಸ್ಟ್ರಾಂಗ್ ತಿಳಿಸಿದ್ದಾರೆ.ಉದ್ದೀಪನ ಮದ್ದು ಸೇವನೆ ಪರೀಕ್ಷೆ­ಯಲ್ಲಿ ಸಾಮಾನ್ಯವಾಗಿ ಮಾಸ್‌ ಸ್ಪೆಕ್ಟ್ರೋ­­ಮೆಟ್ರಿ (ಎಂಎಸ್‌) ವಿಧಾನವನ್ನು ಅನುಸರಿಸಲಾಗುತ್ತದೆ. ಈ ವಿಧಾನ­ವನ್ನು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ, ಯುಎಸ್‌ ಆ್ಯಂಟಿ ಡೋಪಿಂಗ್ ಏಜೆನ್ಸಿ­ಗಳು ಮಾನ್ಯ ಮಾಡಿದ್ದು, ಕ್ರೀಡಾ­ಪಟು­ಗಳು ಉದ್ದೀಪನ ಮದ್ದು ಸೇವಿಸಿ­ದ್ದಾ­ರೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. ಎಂಎಸ್‌ ವಿಧಾನ ದೇಹದಲ್ಲಿ ಬೇರೆ­ಬೇರೆ ಅಂಶಗಳು ಒಟ್ಟಾಗಿರುವು­ದನ್ನು ಬೇರ್ಪ­ಡಿಸುತ್ತದೆ. ರಕ್ತ, ಮೂತ್ರ ಇಲ್ಲವೇ ದೇಹದಲ್ಲಿರುವ ದ್ರವ್ಯಗಳಲ್ಲಿ ಉಳಿ­ದಿರುವ ಮಾದಕ ಪದಾರ್ಥವನ್ನು ಇದು ಪತ್ತೆ ಹಚ್ಚುತ್ತದೆ. ಆದರೆ, ಈ ವಿಧಾನ­ದಲ್ಲಿ ದೇಹದಲ್ಲಿ ನಡೆಯುವ ಚಯಾ­ಪಚನ ಕ್ರಿಯೆಯ ಸಂದರ್ಭದಲ್ಲಿ ಸಣ್ಣ ಋಣಾತ್ಮಕ ವಿದ್ಯುದಾವೇಶ ಉತ್ಪ­ತ್ತಿ­ಯಾಗುತ್ತದೆ. ಇದರಿಂದ ಕೆಲ ಸಣ್ಣ ಅಂಶ­­­­ಗಳಲ್ಲಿ ಉಳಿ­ದಿರ­ಬಹುದಾದ ಮಾದಕ ಪದಾರ್ಥವನ್ನು ಪತ್ತೆ ಮಾಡಲು ಸಾಧ್ಯ­ವಿಲ್ಲ. ಇದನ್ನು ಎಂಎಸ್‌ ವಿಧಾನ­­ದಿಂದ ಒಂದೇ ಬಾರಿಗೆ ಸುಲಭ­ವಾಗಿ ಪತ್ತೆ ಹಚ್ಚು­ವುದೂ ಕೂಡಾ ಕಷ್ಟ. ಆದರೆ, ನೂತನ ವಿಧಾನ­ದಲ್ಲಿ ಇಂಥ ಸಣ್ಣ ಅಂಶಗಳಲ್ಲೂ ಇರುವ ಮಾದಕ ಪದಾರ್ಥದ ಪ್ರಮಾಣ­ವನ್ನು ಸುಲಭ­ವಾಗಿ ಪತ್ತೆ ಹಚ್ಚ­ಬಹುದು.ಆರ್ಮ್‌ಸ್ಟ್ರಾಂಗ್‌ನ ಪ್ರಯೋಗಾಲ­ಯ­­ದಲ್ಲಿ ನಡೆಸಲಾದ ಜೋಡಿ ಅಯಾನ್‌ ಎಲೆಕ್ಟ್ರೋಸ್ಪ್ರೇ ಐಯಾನೈ­ಸೇಷನ್‌ (ಪೀಜಿ) ವಿಧಾನದಲ್ಲಿ ದೇಹ­ದಲ್ಲಿ ಉಳಿದಿರಬಹುದಾದ ಸಣ್ಣ ಪ್ರಮಾ­ಣದ ಮಾದಕ ಪದಾರ್ಥಗಳನ್ನೂ ಪತ್ತೆ ಹಚ್ಚ­ಬಹುದು. ಈ ವಿಧಾನವನ್ನು ಉದ್ದೀ­ಪನ ಮದ್ದುಸೇವನೆ ಪರೀಕ್ಷೆ­ಯಷ್ಟೇ ಅಲ್ಲ, ಮದ್ಯಸೇವನೆ ಪರೀಕ್ಷೆಗೂ ಬಳಸ­ಬಹುದು ಎಂದು ಸಂಶೋಧಕರು ಹೇಳಿದ್ದಾರೆ.ನೂತನ ಪರೀಕ್ಷಾ ವಿಧಾನಕ್ಕೆ ಹೊಸ ಉಪಕರಣಗಳ ಅಗತ್ಯವಿಲ್ಲ. ಈಗಿರುವ ಎಂಎಸ್‌ ವಿಧಾನವನ್ನೇ ತುಸು ಮಾರ್ಪ­ಡಿ­ಸಿದರೆ ಸಾಕು. ಒಂದು ರಾಸಾಯನಿಕ ಅಂಶ­ವನ್ನು ಸೇರಿಸಿದಲ್ಲಿ ಎಂಎಸ್‌ ವಿಧಾ­ನ­ದಲ್ಲೇ ಪೀಜಿ ವಿಧಾನವನ್ನೂ ಮಾಡಬ­ಹುದು. ಈ ಪದಾರ್ಥ ಮಾರು­ಕಟ್ಟೆ­ಯಲ್ಲಿ ಕಡಿಮೆ ದರ­ದಲ್ಲಿ ಸಿಗುತ್ತದೆ

ಎನ್ನುವುದು ಸಂಶೋಧಕರು ಹೇಳಿ­ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.