ಹೋಮಿಯೋಪಥಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಶಾಖೆಯು, ಆಯುಷ್ ಇಲಾಖೆ, ರಾಜ್ಯ ಸರ್ಕಾರ ಹಾಗೂ ಹೋಮಿಯೋಪಥಿ ಮಂಡಳಿ ವತಿಯಿಂದ ಮಂಗಳವಾರ (ಏ.10) ಹೋಮಿಯೋಪಥಿ ಡೇ ರ್ಯಾಲಿ ಹಮ್ಮಿಕೊಂಡಿವೆ.

ಹೋಮಿಯೋಪಥಿ ಪದ್ಧತಿಯನ್ನು ಕಾರ್ಯರೂಪಕ್ಕೆ ರೂಪಿಸಿದ ಪಿತಾಮಹ ಡಾ.ಸಾಮ್ಯುಯಲ್ ಹಾನಿಮನ್ರ 257ನೇ ಜನ್ಮದಿನದ ಪ್ರಯುಕ್ತ ಈ ರ್ಯಾಲಿ ಆಯೋಜಿಸಲಾಗಿದೆ.

ಹೋಮಿಯೋಪಥಿ ಬಗ್ಗೆ ಜನರಲ್ಲಿ ತಿಳವಳಿಕೆ, ಅದರ ಉಪಯೋಗ ಪಡೆಯುವ ವಿಧಾನ ಹಾಗೂ ಜನಪ್ರಿಯತೆಗೊಳಿಸುವ ಉದ್ದೇಶವನ್ನು ಈ ರ್ಯಾಲಿ ಹೊಂದಿದೆ. ರ್ಯಾಲಿ ಬೆಳಿಗ್ಗೆ 8.30ಕ್ಕೆ ಜೆ.ಸಿ.ರಸ್ತೆಯಲ್ಲಿರುವ ಪುರಭವನದಿಂದ ಆರಂಭವಾಗಿ ಕಬ್ಬನ್ಪಾರ್ಕ್ ಬಳಿ ಅಂತ್ಯವಾಗಲಿದೆ.

ಹದಿನೆಂಟನೇ ಶತಮಾನದಲ್ಲಿ ಜರ್ಮನಿಯ ವೈದ್ಯ ಡಾ.ಸಾಮ್ಯುಯಲ್ ಹಾನಿಮನ್ ಎಂಬಾತ ಮೊದಲ ಬಾರಿ ಹೋಮಿಯೋಪತಿ ವೈದ್ಯ ಪದ್ಧತಿಯನ್ನು ಪರಿಚಯಿಸಿದರು. ಇವರು 10 ಏಪ್ರಿಲ್ 1755ರಲ್ಲಿ ಜನಿಸಿದರು. ಅವರ ನೆನಪಿಗಾಗಿ ಜನಸಾಮಾನ್ಯರಲ್ಲಿ ಈ ಪದ್ಧತಿಯ ಮಹತ್ವ ತಿಳಿಸಲು ಈ ರ್ಯಾಲಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಡಾ.ವೀರಬ್ರಹ್ಮಚಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಮಿಯೋಪಥಿ ಡೇ ರ್ಯಾಲಿ: ಡಾ.ಚಂದ್ರಶೇಖರ ಕಂಬಾರ ಅವರು ರ್ಯಾಲಿಗೆ ಚಾಲನೆ ನೀಡಲಿದ್ದಾರೆ.

ಅತಿಥಿಗಳು: ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಆಯುಷ್ ನಿರ್ದೇಶಕ ಜೆ.ಎನ್.ಶ್ರೀಕಂಠಯ್ಯ, ಆಯುಷ್ ಇಲಾಖೆ ಉಪನಿರ್ದೇಶಕಿ ಡಾ. ಶಾಂತಕುಮಾರಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೆನೆಟ್ ಸದಸ್ಯ ಡಾ.ಎಂ.ಆರ್. ಶ್ರೀವತ್ಸನ್ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.