ಹೂವಿನಹಡಗಲಿ: ಹೋರಾಟ ಮಾಡದೇ ಯಾವುದೇ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಎ.ಐ.ಟಿ.ಯು.ಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಎ.ಐ.ಟಿ.ಯು.ಸಿ. ಶುಕ್ರವಾರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದ ಲಾಲ್ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಬೇಡಿಕೆ ಗಳಿಗಾಗಿ ಕೆಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗಿದೆ ಎಂದರು. ಅಂಗನವಾಡಿ ಕಾರ್ಯಕರ್ತೆಯರು ನಗರ ಹಾಗೂ ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸು ವುದರ ಜೊತೆಗೆ ಸಾರ್ವಜನಿಕರೊಡನೆ ಬೆರೆತು ಕಾರ್ಯನಿರ್ವಹಿಸುವ ಸಂಪ ನ್ಮೂಲ ವ್ಯಕ್ತಿಗಳಾಗಿದ್ದಾರೆ ಎಂದು ಬಸವರಾಜ್ ಹೇಳಿದರು. ಕರವೇ ಅಧ್ಯಕ್ಷ ಎಂ.ಜಗದೀಶ ಮಾತನಾಡಿದರು. ಸಾಹಿತಿ ತೋ.ಮ. ಶಂಕ್ರಯ್ಯ ಮಾತನಾಡಿದರು.

ಎ.ಐಟಿ.ಯು.ಸಿ ಮುಖಂಡ ಸುರೇಶ, ಫೆಡರೇಷನ್ ಅಧ್ಯಕ್ಷೆ ಎನ್. ಮಂಜುಳಾ, ಕಾರ್ಯದರ್ಶಿ ಕಮಲಾಕ್ಷಿ, ಬನ್ನಿಮಟ್ಟಿ ಹೇಮಾವತಿ, ಹಿರೇಹಡಗಲಿ ಕೊಟ್ರಮ್ಮ, ಜಾನಮ್ಮ, ವಿನೋದಾ, ಎಂ.ರೇಣುಕಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.