ಗುರುವಾರ , ಆಗಸ್ಟ್ 6, 2020
27 °C

ಹ್ಯಾಂಡ್‌ಸೆಟ್ ಮಾರಾಟ, ರಫ್ತು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯಾಂಡ್‌ಸೆಟ್ ಮಾರಾಟ, ರಫ್ತು ಹೆಚ್ಚಳ

ಪ್ರಪಂಚದಲ್ಲಿಯೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೂರವಾಣಿ  ಮಾರುಕಟ್ಟೆ ಭಾರತ. ಪ್ರಸಕ್ತ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ  ದೇಶದಲ್ಲಿ ಒಟ್ಟು 5.02 ಕೋಟಿ ಮೊಬೈಲ್  ಹ್ಯಾಂಡ್‌ಸೆಟ್ ಮಾರಾಟವಾಗಿವೆ ಎಂದು ಸೈಬರ್ ಮೀಡಿಯ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.2011ರ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಹ್ಯಾಂಡ್‌ಸೆಟ್ ಮಾರಾಟ ಶೇ 9.1ರಷ್ಟು ಪ್ರಗತಿ ಕಂಡಿದೆ.  ಈ ಬಾರಿಯೂ ಶೇ 23ರಷ್ಟು ಮಾರುಕಟ್ಟೆ ಪಾಲಿನೊಂದಿಗೆ `ನೋಕಿಯಾ~ ಮುಂಚೂಣಿಯಲ್ಲಿದೆ. ಶೇ 14 ಮತ್ತು ಶೇ 5.8ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸ್ಯಾಮ್ಸಂಗ್ ಮತ್ತು ಮೈಕ್ರೊಮ್ಯಾಕ್ಸ್ ನಂತರದ ಸ್ಥಾನಗಳಲ್ಲಿವೆ.ಜನವರಿ-ಮಾರ್ಚ್ ನಡುವಿನ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ಗಳೇ 27 ಲಕ್ಷದಷ್ಟು ಮಾರಾಟವಾಗಿವೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ 40.04ರಷ್ಟು ಸಿಂಹಪಾಲನ್ನು ಸ್ಯಾಮ್ಸಂಗ್ ಪಡೆದುಕೊಂಡಿದೆ. ಶೇ 25.5ರಷ್ಟು ಪಾಲು ಹೊಂದಿರುವ ನೋಕಿಯಾ ಮತ್ತು ಶೇ 12.3ರಷ್ಟು ಪಾಲಿನೊಂದಿಗೆ `ರಿಸರ್ಚ್ ಇನ್ ಮೂಷನ್~(ಆರ್‌ಐಎಂ) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 2012ರ ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ ರೂ 7,500ರಿಂದ ರೂ 27000 ನಡುವಿನ ದರ ಶ್ರೇಣಿಯ 7 ಹೊಸ ಹ್ಯಾಂಡ್‌ಸೆಟ್‌ಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಸ್ಮಾರ್ಟ್‌ಫೋನ್‌ಗಳ ಮಾರಾಟ ಈ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದೆ. ಜತೆಗೆ `ಡ್ಯುಯಲ್ ಸಿಮ್~ ಮೊಬೈಲ್‌ಗಳ ಬೇಡಿಕೆಯೂ ಹೆಚ್ಚಳವಾಗಿದೆ. `ಡ್ಯುಯಲ್ ಸಿಮ್~ ಹ್ಯಾಂಡ್‌ಸೆಟ್‌ಗಳು ಶೇ 67.7ರಷ್ಟು  ರಫ್ತಾಗಿರುವುದು ವಿಶೇಷ.2012ರ ಮೊದಲ ತ್ರೈಮಾಸಿಕದಲ್ಲಿ ಮೂರನೆಯ ತಲೆಮಾರಿನ ತರಂಗಾಂತರ ಸೌಲಭ್ಯ (3ಜಿ) ಹೊಂದಿರುವ 47 ಲಕ್ಷ ಹ್ಯಾಂಡ್‌ಸೆಟ್ ರಫ್ತು ಮಾಡಲಾಗಿದೆ ಎಂದು ಈ ಅಧ್ಯಯನ ಹೇಳಿದೆ.ಪ್ರಪಂಚದಲ್ಲಿಯೇ ಅತಿ ಹೆಚ್ಚು ಮೊಬೈಲ್ ಚಂದಾದಾರರನ್ನು ಹೊಂದಿರುವ ಎರಡನೇ ದೇಶ ಭಾರತ. ಸದ್ಯ ದೇಶದಲ್ಲಿ 91.90 ಕೋಟಿ ಮೊಬೈಲ್‌ಫೋನ್ ಚಂದಾದಾರರಿದ್ದಾರೆ. 75ಕ್ಕೂ ಹೆಚ್ಚು ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿಗಳಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.