ಮಂಗಳವಾರ, ಜೂನ್ 22, 2021
22 °C

‘ಅಭಿವೃದ್ಧಿಗೆ ಮುನಿಯಪ್ಪ ಕೊಡುಗೆ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಸತತ  ಆರು ಬಾರಿ ಗೆದ್ದು ಎರಡು ಬಾರಿ ಕೇಂದ್ರದಲ್ಲಿ ಸಚಿವರಾಗಿರುವ ಕೆ.ಎಚ್.­ಮುನಿ­ಯಪ್ಪ  ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹೇಳಿದರು.ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇಗುಲದಲ್ಲಿ ಶನಿವಾರ ಕಾರ್ಯಕರ್ತರನ್ನು ಉದ್ದೇ­ಶಿಸಿ  ಮಾತನಾಡಿ, ಚುನಾವಣೆ­ಯಲ್ಲಿ ಗೆದ್ದ ನಂತರ ಐದು ವರ್ಷ ಕ್ಷೇತ್ರದತ್ತ ಮುಖ ಮಾಡದವರಿಗೆ ಚುನಾವಣೆ ಸಮೀಪವಿದ್ದಾಗ ಮಾತ್ರ ಮತ­ದಾರರು ನೆನಪಾ­ಗುತ್ತಾರೆ ಎಂದು ವ್ಯಂಗ್ಯವಾಡಿದರು.ರಾಜ್ಯ, ಕೇಂದ್ರದ ಬಜೆಟ್ ಮಂಡನೆ ಮುಗಿದಿದೆ. ಇದೀಗ ನೀರಾ­ವರಿ ಯೋಜನೆ ಬಗ್ಗೆ ಪ್ರಸ್ತಾಪಿಸಿದರೆ ಏನು ಪ್ರಯೋಜನ? ಬಜೆಟ್ ಮಂಡನೆಗೂ ಮುನ್ನ ನೀರಾವರಿ ಯೋಜನೆ  ಪ್ರಸ್ತಾಪಿಸಿ ಅದನ್ನು ಬಜೆಟ್‌ನಲ್ಲಿ ಬರು­ವಂತೆ ನೋಡಿ­ಕೊಳ್ಳಬೇಕಿತ್ತಲ್ಲವೆ ಎಂದು ಟೀಕಿಸಿದರು.ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರ­ಗೌಡ, ಪ್ರಧಾನ ಕಾರ್ಯ­ದರ್ಶಿ ಶ್ರೀಧರ್, ಮುಖಂಡರಾದ ಹನುಮಪ್ಪ, ಜೆ.ವಿ.­ಸದಾಶಿವ, ಶ್ರೀರಾಮ­ರೆಡ್ಡಿ, ಲೊಕೇಶ್, ಮುನಿವೆಂಕಟಪ್ಪ, ದಾಮೋ­ದರ್ ಮತ್ತಿತರರು ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.