ಬೈಲಹೊಂಗಲ: ‘ಇತಿಹಾಸ ಗೊತ್ತಿದ್ದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯವಿದೆ. ಇತಿಹಾಸದ ಅರಿವು ಇಲ್ಲದಿದ್ದರೆ ಯಾವುದೇ ಭವಿಷ್ಯ ನಿರ್ಮಾಣ ಮಾಡುವುದು ಮಾತ್ರವಲ್ಲದೆ ರೂಪಿಸಿಕೊಳ್ಳುವುದು ಕೂಡ ಅಸಾಧ್ಯ’ ಎಂದು ಧಾರವಾಡ ಇತಿಹಾಸ ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎಂ.ಷಡಕ್ಷರಯ್ಯ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕ ಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶ್ರೀ ಬಸವೇಶ್ವರ ಎಜುಕೇಶನ್ ಸೊಸೈಟಿ, ಮೈಸೂರಿನ ಪ್ರಾಚ್ಯ ವಸ್ತು ಸಂಗ್ರಹಾ ಲಯ, ಪರಂಪರೆ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಡೆದ 25ನೇ ಕರ್ನಾಟಕ ಇತಿಹಾಸ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿದರು.

‘ನಮ್ಮ ಭಾಷೆ, ಸಂಸ್ಕೃತಿ ಮತ್ತು ರಾಜಕೀಯ ವಿದ್ಯಮಾನಗಳಲ್ಲಿ ಹೇರಳ ಪ್ರಮಾಣದಲ್ಲಿ ಪರಿವರ್ತನೆ ಆಗುತ್ತಿರು ವುದನ್ನು ಇಂದು ಅವಲೋಕಿಸ ಬೇಕಾಗಿದೆ. ಬಡತನ, ದಾರಿದ್ರ್ಯ, ಅಸಮಾನತೆ, ಶೋಷಣೆ, ಕಂದಾಚಾರಗಳನ್ನು ನಿಯಂತ್ರಿಸಲು ಜನರು ಜಾಗೃತ ರಾಗುತ್ತಿರುವುದು ಸಂತಸದ ಸಂಗತಿ ಎಂದರು.

ಈ ರೀತಿಯ ಅಭಿವೃದ್ಧಿ ಪಥದಲ್ಲಿ ಸಾಗುವಾಗ ಉತ್ತಮ ತತ್ವಗಳನ್ನು, ಪರಂಪರೆಯನ್ನು ಯುವಕರಿಗೆ ತಿಳಿಸಿ ಕೊಡುವುದು ಸೂಕ್ತವಾಗಿದೆ. ಮುಂದಿನ ಪೀಳಿಗೆಯೂ ಇತಿಹಾಸ ಸಂಶೋಧನೆಗೆ ಅಣಿಯಾಗುವ ರೀತಿಯಲ್ಲಿ ಇತಿಹಾಸ ಮತ್ತು ಸಂಶೋಧನಾ ಪಠ್ಯಗಳು, ದಾಖಲಾತಿ ಸಿದ್ಧಪಡಿಸಬೇಕಿದೆ. ಬ್ರಿಟಿಷರ ವಿರುದ್ದ ಹೋರಾಡಿದವರಲ್ಲಿ ಕೇವಲ ಗಾಂಧೀಜಿಯಷ್ಟೇ ಅಲ್ಲ. ಅಂಥ ಹಲವು ಮಹಾತ್ಮರುಗಳಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪನವರು ಮೊದಲಿಗರಾಗಿದ್ದಾರೆ ಎಂದರು.

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪು ಗಾಲಿಟ್ಟಿದೆಯೇನೋ ನಿಜ. ಆದರೆ, ಇತಿಹಾಸ ಸಂಶೋಧನೆ, ಸಂಶೋಧನಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚು ತೊಡಗಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ’ ಎಂದರು.

ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ.ಎಸ್. ರಾಜಶೇಖರ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಸ್ಥಳೀಯರಿಗೆ ಇತಿಹಾಸ ಬಗ್ಗೆ ಅನೇಕ ವಿಷಯಗಳ ಕುರಿತು ತಿಳಿವಳಿಕೆ ಮೂಡಿಸಿ ಮನದಟ್ಟು ಮಾಡಿ ಕೊಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಇತಿಹಾಶ ಅಧಿವೇಶನ ನಡೆಸಿದ್ದು ಶ್ಲಾಘನೀಯ’ ಎಂದರು.

ಮುಖ್ಯಅತಿಥಿ, ಧಾರವಾಡ ವಿವಿ ಇತಿಹಾಸ ಮತ್ತು ಪ್ರಾಚ್ಯವಸ್ತು ಪ್ರಾಧ್ಯಾಪಕ, ಸಂಯೋಜಕ ಪ್ರೊ.ಎಸ್.ಕೆ. ಕಲ್ಲೋಳಿಕರ, ನಿಕಟಪೂರ್ವ ಅಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ. ರಾಮರಥನ್ ಮಾತನಾಡಿದರು.

ಕರ್ನಾಟಕ ಇತಿಹಾಸ ಕಾಂಗ್ರೆಸ್ ಅಧ್ಯಕ್ಷ ಪ್ರೊ,ಆರ್.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಮುನಿ ರಾಜಪ್ಪ ವರದಿ ಮಂಡಿಸಿ ದರು. ಖಜಾಂಚಿ ಪ್ರೊ.ನಾಗರತ್ನಾ, ಸರ್ವಾ ಧ್ಯಕ್ಷರ ಪತ್ನಿ ಡಾ.ಸೌಭಾಗ್ಯ, ಪ್ರೊ.ಡಾ. ನಾಗೇಶ, ಪ್ರೊ.ಪತ್ತಾರ, ಪ್ರೊ.ಲಕ್ಷ್ಮಣ ಯಲಗಾವಿ, ಪ್ರೊ.ಮಹಾ ಬಳೇಶ್ವರಪ್ಪ, ಪ್ರೊ.ಶೇಖಮಸ್ತಾನ, ಪ್ರೊ.ಎಸ್.ವಿ. ಪಾಡಿ ಗಾರ, ಪ್ರೊ.ಎಸ್.ಕೆ. ಮೆಲಕಾರ, ಪ್ರೊ.ರವಿ ಕೋರಿಶೆಟ್ಟರ, ಸಂಸ್ಥೆ ಅಧ್ಯಕ್ಷ ಬಿ.ಬಿ. ಗಣಾಚಾರಿ, ಪ್ರಾಚಾರ್ಯ ಡಾ.ಸಿ.ಬಿ. ಗಣಾಚಾರಿ ಇದ್ದರು.

ಉಪನ್ಯಾಸಕ ಎಂ.ಎಚ್.ಪಟ್ಟೇದ ಪರಿಚಯಿಸಿದರು. ಉಪನ್ಯಾಸಕ ಎನ್.ಆರ್. ಕುರಿ, ಎಸ್.ಎಸ್.ಮಾಟೊಳ್ಳಿ ನಿರೂಪಿಸಿದರು. ಪ್ರಾಚಾರ್ಯ ಡಾ.ಸಿ.ಬಿ. ಗಣಾಚಾರಿ ಸ್ವಾಗತಿಸಿದರು. ವಿ.ಎಸ್.ಅಂಗಡಿ ವಂದಿಸಿದರು. ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳ ಇತಿಹಾಸ ಸಂಶೋಧಕರು, ಪ್ರಾಧ್ಯಾಪ ಕರು, ಚಿಂತಕರು ಪಾಲ್ಗೊಂಡಿದ್ದರು. ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಿಂದ ಸಮಾರಂಭದ ವೇದಿಕೆಯ ವರೆಗೆ ಅಧ್ಯಕ್ಷರನ್ನು ಪತ್ನಿ ಸಮೇತ ಮೆರವಣಿಗೆಯಲ್ಲಿ ಕರೆ ತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.