ಬುಧವಾರ, ಜನವರಿ 22, 2020
21 °C

‘ಏಕತಾ ಓಟ’ಕ್ಕೆ ಮೋದಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಡೋದರ(ಪಿಟಿಐ): ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ‘ಏಕತೆಯ ಮೂರ್ತಿ’­ ಯೋಜನೆಯ ಬೆಂಬಲಕ್ಕಾಗಿ ಆಯೋಜಿಸಿದ್ದ ‘ಏಕತಾ ಓಟ’ ಅಭಿಯಾನ­­ಕ್ಕೆ ಭಾನು­ವಾರ  ಬೆಳಿಗ್ಗೆ ಇಲ್ಲಿ ಚಾಲನೆ ನೀಡಿದರು.ಸರ್ದಾರ್‌ ವಲಭಭಾಯ್‌ ಪಟೇಲ್‌ ಅವರ 63ನೇ ಪುಣ್ಯತಿಥಿಯ ಸಂದರ್ಭ­ದಲ್ಲಿ ‘ಏಕತಾ ಓಟ’ ಆಯೋಜಿಸಲಾಗಿತ್ತು. ಈ ‘ಏಕತಾ ಓಟ’ ಭಾನುವಾರ ದೇಶ­­ದಾದ್ಯಂತ 1,100 ನಗರ, ಪಟ್ಟಣಗಳಲ್ಲಿ ಏಕ­ಕಾಲಕ್ಕೆ ನಡೆದಿದೆ.ಸರ್ದಾರ್‌  ವಲ್ಲಭಬಾಯ್‌ ಪಟೇಲ್‌­ರ ಬೃಹತ್‌ ಮೂರ್ತಿ ನಿರ್ಮಾಣಕ್ಕೆ ಹಳ್ಳಿ, ಹಳ್ಳಿಗಳಿಂದ ಕಬ್ಬಿಣ ಸಂಗ್ರಹಿಸುವ ಕೆಲಸ ನಡೆಯುತ್ತಿದೆ.ದೊಡ್ಡ ಪ್ರತಿಮೆ: ‘ಗುಜರಾತ್‌ ಸರ್ಕಾರವು ನರ್ಮದಾ ನದಿಯ ಸಾಧುಬೆಟ್‌ ಎಂಬಲ್ಲಿ ‘ಏಕತೆಯ ಮೂರ್ತಿ’ ಎಂಬ ಹೆಸರಿನಲ್ಲಿ ಸರ್ದಾರ್‌ ಪಟೇಲ್‌ ಅವರ ಬೃಹತ್‌ ಪ್ರತಿಮೆಯನ್ನು ಕಟ್ಟುತ್ತಿದ್ದು, ಇದು ಜಗತ್ತಿನ ಅತಿದೊಡ್ಡ ಪ್ರತಿಮೆಯಾಗ­ಲಿದೆ’ ಎಂದು ಅವರು ಹೇಳಿದರು.‘ಜನರನ್ನು, ಹಳ್ಳಿಗಳನ್ನು ಮತ್ತು ದೇಶವನ್ನು ಒಗ್ಗೂಡಿಸುವ ಉದ್ದೇಶ­ದಿಂದ ಈ ಅಭಿಯಾನವನ್ನು ರೂಪಿಸ­ಲಾ­ಗಿದೆ. ಇದು ಭಾರತೀಯರೆಲ್ಲರ ಕನಸು ಮತ್ತು ಅಭಿಲಾಷೆಯನ್ನು ಸಾಕಾರ­ಗೊಳಿ­ಸು­ವ ಪ್ರಯತ್ನ. ದಯವಿಟ್ಟು ಇದನ್ನು ರಾಜ­ಕೀಯ ದೃಷ್ಟಿಕೋನದಿಂದ ನೋಡು­ವು­ದು ಬೇಡ’ ಎಂದು ಅವರು ಹೇಳಿದರು.

ಅಹಮದಾಬಾದ್‌ನಲ್ಲಿ ‘ಏಕತಾ ಓಟ’­ಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡ ಎಲ್‌ ಕೆ ಅಡ್ವಾಣಿ, ‘ಈ ಅಭಿಯಾನವು ಪಟೇಲ್‌ ಅವರಿಗೆ ಸಲ್ಲಿಸಿದ ಯೋಗ್ಯ ಗೌರವವಾಗಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)