ಕೊಪ್ಪಳ: ದೇಶಕ್ಕೆ ಬಿಜೆಪಿ ಘೋಷಿತ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾದಾಗ ಮಾತ್ರ ಇತರ ರಾಜ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಹೇಳಿದರು.

ನಗರದ ಪ್ರಮೋದ ಮಂದಿರದಲ್ಲಿ ಕ್ಷೇತ್ರದ ಮಹಿಳಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಶುಕ್ರವಾರ ಅವರು ಮಾತನಾಡಿದರು.
ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ನೇತೃತ್ವದಲ್ಲಿ ಎನ್ ಡಿ ಎ ಅದಿಕಾರಕ್ಕೆ ತರಲು ದೇಶದ ಜನ ನಿರೀಕ್ಷೆ ಮೀರಿ ಸ್ಪಂದಿಸುತ್ತಿದ್ದಾರೆ ಇದನ್ನು ಕಂಡು ಕಾಂಗ್ರೆಸ್ ನಾಯಕರಿಗೆ ಸೋಲಿನ ಭಯ ಆವರಿಸಿದೆ.ರಾಜ್ಯ ಕಾಂಗ್ರೆಸ್ ಸರ್ಕಾರದ ಏಕಾಧಿಪತ್ಯ ಆಡಳಿತದಿಂದಾಗಿ ಜನರು ಬೇಸತ್ತಿದ್ದು, ಚುನಾವಣೆಯ ನಂತರ ರಾಜ್ಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದ ಅವರು, ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಕಾರ್ಯಕರ್ತರೇ ಪಕ್ಷದ ನಿಜವಾದ ನಾಯಕರು ಎಂದರು.

ಮಹಿಳಾ ಮುಖಂಡರಾದ ಶಿವಲೀಲಾ ದಳವಾಯಿ ಮಾತನಾಡಿ, ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ. ದೌರ್ಜನ್ಯ ತಡೆಯುವಲ್ಲಿ ಸಂಪೂರ್ಣ ವಿಫಲವಾದ ರಾಜ್ಯ ಸರ್ಕಾರ, ಕೇಂದ್ರದ ಯುಪಿಎ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆಯಲು ಬಿಜೆಪಿ ಮಹಿಳಾ ಕಾರ್ಯಕರ್ತರು ಕಂಕಣ ಬದ್ಧರಾಗಿ ಶ್ರಮಿಸಬೇಕು. ಬಿಜೆಪಿ ಸರ್ಕಾರ ದೇಶದಲ್ಲಿ ಇಂದಿನ ಅಗತ್ಯವಾಗಿದೆ. ಶೇ.50ರಷ್ಟು ಮಹಿಳೆಯರು ದೇಶದಲ್ಲಿ ಬದಲಾವಣೆ ತರಲು ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ ನಾಯಕ್ ಸ್ವಾಗತಿಸಿದರು. ಲೋಕಸಭಾ ಕ್ಷೇತ್ರದ ಉಸ್ತುವಾರಿ ಗಿರೇಗೌಡ್ರ ಪಾಟೀಲ್, ಜಿಲ್ಲಾ ಪ್ರಧಾನಕಾರ್ಯದರ್ಶಿ ನರಸಿಂಗ್ ರಾವ್ ಕುಲಕರ್ಣಿ, ರಾಜು ಬಾಕಳೆ, ಚಂದ್ರಶೇಖರ ಕವಲೂರ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಾಮಲಾ ಕೋನಾಪುರ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಮಧುರಾ ಕರುಣಂ, ನಗರ ಘಟಕದ ಅಧ್ಯಕ್ಷೆ ಹೇಮಕ್ಕ ಮಂಗಳೂರ, ವಿಜಯಲಕ್ಷ್ಮಿ ಜಾಲಗಾರ, ಶೋಭಾ ನಗರಿ, ವರಲಕ್ಷ್ಮಿ ಚಿಂತಾಪಲ್ಲಿ, ಅಕ್ಕಮ್ಮ, ನಗರಸಭಾ ಸದಸ್ಯರಾದ ಸುವರ್ಣಾ ಬಸವರಾಜ ನೀರಲಗಿ, ಜನ್ನಾ ಬಾಯಿ ಜಕ್ಕಲಿ, ಲಲಿತಾ ನಾಯಕ್, ಪ್ರಾಣೇಶ ಮಾದನೂರ, ಹಾಲೇಶ ಕಂದಾರಿ, ಪ್ರಾಣೇಶ್ ಮಹೇಂದ್ರಕರ್, ಪರಮಾನಂದ ಯಾಳಗಿ ಉಪಸ್ಥಿತರಿದ್ದರು. ಶುಕ್ರವಾರ ಕರಡಿ ಸಂಗಣ್ಣ ಅವರು ನಗರದ ಹಲವೆಡೆ ಸಾಂಕೇತಿಕ ಪಾದಯಾತ್ರೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.