ಮಂಗಳವಾರ, ಜನವರಿ 28, 2020
21 °C

‘ಕಲೆ, ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಪ್ರೋತ್ಸಾಹದಾಯಕ ಯೋಜನೆ ಗಳನ್ನು ಹಮ್ಮಿಕೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಶಾಂತಮ್ಮ ತಿಳಿಸಿದರು. ತಾಲ್ಲೂಕಿನ ಹೊಸಕಬ್ಬಾಳಿನ ಅಂಬೇ ಡ್ಕರ್ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸೌರಭ, ಯುವ ಸೌರಭ ಹಾಗೂ ಚಿಗುರು ಯೋಜನೆಯಡಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾ ಡಿದರು.ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ದಾಗ ಅದು ಬೆಳಕಿಗೆ ಬರುತ್ತದೆ. ಕಲೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಇಲಾ ಖೆಯು ಇಂತಹ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ನಡೆಸುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು. ಮುಖ್ಯಶಿಕ್ಷಕ ರಾಮು ಮಾತನಾಡಿ, ‘ಅನಕ್ಷರಸ್ಥ ಗ್ರಾಮೀಣ ಜನತೆ ತಮ್ಮ ಬಿಡುವಿನ ವೇಳೆಯಲ್ಲಿ ತಾವೇ ರಚಿಸಿ ಕೊಂಡು ಹಾಡುತ್ತಿದ್ದ ಜನಪದ ಗೀತೆಗಳು ಇಂದಿಗೂ ತಮ್ಮ ಮಹತ್ವ ಉಳಿಸಿ ಕೊಂಡಿವೆ.

ಅರ್ಥಪೂರ್ಣವಾದ ಜನ ಪದ ಗೀತೆಗಳು ಜೀವನ ಪಾಠವನ್ನು ಕಲಿ ಸಿವೆ’ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಮಾರೇಗೌಡ ಮಾತನಾಡಿ, ‘ಕಾಲ ಬದಲಾದಂತೆ ಸಾಹಿತ್ಯವೂ ಬದಲಾಗು ತ್ತಿದೆ. ಇತ್ತೀಚಿನ ದಿನಗಳಲ್ಲಿ ಅರ್ಥ ವಿಲ್ಲದ, ಅಶ್ಲೀಲದಿಂದ ಕೂಡಿದ ಸಿನಿಮಾ ಹಾಡುಗಳು ರಚನೆಯಾಗುತ್ತಿವೆ. ಇದ ರಿಂದಾಗಿ ನಮ್ಮ ಸಂಸ್ಕೃತಿಯನ್ನು ಬಿಂಬಿ ಸುವ ಜನಪದ ಹಾಡುಗಳು ಕಣ್ಮರೆ ಯಾಗುತ್ತಿವೆ’ ಎಂದು ವಿಷಾದಿಸಿದರು.ಮುಖ್ಯಶಿಕ್ಷಕ ಸಿ.ಪುಟ್ಟಸ್ವಾಮಿ ಮಾತ ನಾಡಿ, ‘ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಾಸ ಕೇವಲ ಪಠ್ಯವಸ್ತುಗಳ ಬೋಧನೆ ಯೊಂದರಿಂದಲೇ ಸಾಧ್ಯವಿಲ್ಲ. ಅವರಿಗೆ ನಾಡಿನ ಶ್ರೇಷ್ಠ ಸಂಸ್ಕೃತಿಯ ವಿಚಾರಗ ಳನ್ನು ಪರಿಚಯಿಸಬೇಕು. ಅವರಲ್ಲಿರು ವ ಪ್ರತಿಭೆಯನ್ನು ಗುರುತಿಸಲು ಇಂತಹ ವೇದಿಕೆಗಳು ಅವಶ್ಯಕ’ ಎಂದರು. ರಾಣಿ ಅಪ್ಪಾಜಿಗೌಡ ಕಾರ್ಯಕ್ರಮದ ಉದ್ಘಾ ಟನೆ ನೆರವೇರಿ ಸಿದರು. ರಾಮ ದಾಸು ಸ್ವಾಗತಿಸಿ, ಶಿವಲಿಂಗಯ್ಯ ನಿರೂಪಿ ಸಿದರು. ಎಂದಯಾ ವಂದಿಸಿದರು.

ಪ್ರತಿಕ್ರಿಯಿಸಿ (+)