ಭಾನುವಾರ, ಜೂನ್ 13, 2021
23 °C

‘ಕಳಪೆಯಾದರೆ ಮರು ಕಾಮಗಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು, ಕಳಪೆಯಾದರೆ ಸಂಬಂಧಪಟ್ಟ ಗುತ್ತಿಗೆ­ದಾರರಿಂದಲೇ ಮರು ಕಾಮಗಾರಿ ಮಾಡಿಸಲಾಗುವುದು ಎಂದು ಶಾಸಕ ಎಚ್.ವೈ ಮೇಟಿ ಎಚ್ಚರಿಕೆ ನೀಡಿದರು.ತಾಲ್ಲೂಕಿನ ಲವಳೇಶ್ವರದಿಂದ ಚಿಕ್ಕಗುಳುಬಾಳ–ಜಡರಾಮಕುಂಟಿ ಆರ್.ಸಿ –ಮುತ್ತತ್ತಿ ವರೆಗೆ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆಯಲ್ಲಿ ₨ 5.89 ಕೋಟಿ ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ಬಸವಂತಪ್ಪ ಮೇಟಿ, ಮುಖಂಡರಾದ ಬಸಯ್ಯಮಠ, ಮಹಾದೇವಪ್ಪ, ಸಿಂದೊರಪ್ಪ ವಾಲಿಕಾರ, ತಮ್ಮಣ್ಣ, ಹನಮಂತ ಜಾನ್ನನವರ, ಸಂಗಣ್ಣ ಕವಡಿ, ಬಸವರಾಜ ಬೆಳಗಲ್, ಶೇಖರ ಹೋಸಮನಿ, ಬಸವರಾಜ ಹಡಪದ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಟಿ. ಮೇಟಿ, ಸಹಾಯಕ ಎಂಜಿನಿಯರ್ ರವಿ ಎಂ. ಕುಂಬಾರ ಉಪಸ್ಥಿತರಿದ್ದರು.ಮತ್ತೆ ಮಳೆ

ಚಡಚಣ: ಇಲ್ಲಿಗೆ ಸಮೀಪದ ಹತ್ತಳ್ಳಿ, ಹೊಳೆ ಸಂಖ, ಉಮರಾಣಿ, ನಿವರಗಿ ರೇವತ­ಗಾಂವ, ಶಿರಾಡೋಣ, ಉಮ­ರಜ ಸೇರಿದಂತೆ ಭೀಮಾ ನದಿ ತೀರದ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಸಿಲುಕಿ ಸಾವಿರಾರು ಮರ ಬಿದ್ದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.