ಸೋಮವಾರ, ಜನವರಿ 20, 2020
26 °C

‘ಕಾಗೇರಿ ಶಿಕ್ಷಕರ ಕೈ ಹಿಡಿಯಲಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿಕ್ಷಣ ಸಚಿವ ಖಾತೆ ನಿಭಾಯಿಸಿ ಹೋಗಿದ್ದರಿಂದಲೇ ಶಿಕ್ಷಕರು ಹಲವಾರು ಸಂದರ್ಭದಲ್ಲಿ ತೊಂದರೆ ಅನುಭವಿಸುವಂತಾಯಿತು’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 1987ರಿಂದ 1995ರವರೆಗಿನ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅನುದಾನಕ್ಕೊಳ ಪಡಲು ಧಾರವಾಡದಲ್ಲಿ ನಡೆದ ಐತಿಹಾಸಿಕ ಹೋರಾಟಕ್ಕೆ ಬೆಂಬಲ ನೀಡಿದ ಮಹನೀಯರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಶಿಕ್ಷಣ ರತ್ನ ಎಂಬ ಬಿರುದು ಸ್ವೀಕರಿಸಿ ಮಾತನಾಡಿದರು.‘ಹಲವಾರು ಕಡೆಗಳಲ್ಲಿ ಶಿಕ್ಷಕರು ಸಾಲ ತೆಗೆದು ಶಾಲಾ ಮಕ್ಕಳಿಗೆ ಸೈಕಲ್ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸು ತ್ತಿದ್ದರು. ಇಂಥ ಶಿಕ್ಷಕರಿಗೆ ಬೆಂಬಲ ನೀಡುವ ಉದ್ದೇಶದಿಂದ ಅವರ ಪ್ರತಿಭಟನೆಯಲ್ಲಿ ಪಾಲ್ಗೊಂಡ ನನಗೆ ಚುನಾವಣೆಗೋಸ್ಕರ ಗಿಮಿಕ್ಕು ನಡೆಸು ತ್ತಿದ್ದಾನೆ ಎಂಬ ಆರೋಪಗಳೂ ಕೇಳಿ ಬಂದವು. ಈ ಹಿಂದೆ ಶಿಕ್ಷಣ ಸಚಿವರಾ ಗಿದ್ದ ಕಾಗೇರಿ, ಶಿಕ್ಷಕರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರೇ ವಿನಃ ಶಿಕ್ಷಕರ ಕೈ ಹಿಡಿಯುವ ಕೆಲಸ ಮಾಡಲಿಲ್ಲ’ ಎಂದು ತಿಳಿಸಿದರು.ಶಾಸಕ ಎನ್.ಎಚ್.ಕೋನರಡ್ಡಿ, ‘ನಾನು ಎಂದಿಗೂ ಶಿಕ್ಷಕರ ಪರ ಹೋರಾಟ ಮಾಡಿರಲಿಲ್ಲ. ರೈತರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೆ. ಆದರೆ, ಹೊರಟ್ಟಿ ಅವರನ್ನು ಸತತ ಆರು ಬಾರಿಗೆ ವಿಧಾನ     ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ ಶಿಕ್ಷಕರು ನನ್ನನ್ನು ಅವರ ಹೋರಾಟದಲ್ಲಿ ಭಾಗಿ ಯಾಗುವಂತೆ ಮಾಡಿದರು. ಮನ ಸೂರು ರೇವಣಸಿದ್ದೇಶ್ವರ ಮಠದ ಬಸವ ರಾಜ ದೇವರು ಸಾನ್ನಿಧ್ಯ ವಹಿಸಿದ್ದರು.ಸಂಘದ ಅಧ್ಯಕ್ಷ ಗಿರೀಶ ಯಾದವಾಡ, ಉಪಾಧ್ಯಕ್ಷ ಬಿ.ಎಂ.ಸಾಲಿಮಠ ಇದ್ದರು.

ಪ್ರತಿಕ್ರಿಯಿಸಿ (+)