ಹುಬ್ಬಳ್ಳಿ: ನಾಡಿನ ಕುಶಲ ಕಲೆಗಳನ್ನು ಉಳಿಸಿ–ಬೆಳೆಸುವ ಆಶಯ ಹೊತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ‘ಕಾಯಕ ನಗರ’ ಎಂಬ ಪರಿಕಲ್ಪನೆಯನ್ನು ರೂಪಿಸಿದೆ. ಕರಕುಶಲ ಕರ್ಮಿಗಳಿಗೆ ನೆಲೆ ಒದಗಿಸುವ ಮೂಲಕ ಕಲೆಯನ್ನು ಮುಂದಿನ ಜನಾಂಗಕ್ಕೂ ಕೊಂಡೊಯ್ಯುವ ಆಶಯ ಈ ಯೋಜನೆಯದ್ದು.

ಧಾರವಾಡ ಸಮೀಪದ ನರೇಂದ್ರ ಗ್ರಾಮದಲ್ಲಿ ಸುಮಾರು 35 ಎಕರೆ ಪ್ರದೇಶವನ್ನು ಇದಕ್ಕಾಗಿ ನೀಡುವಂತೆ ಜಾನಪದ ವಿಶ್ವವಿದ್ಯಾಲಯವು ಜಿಲ್ಲಾಡಳಿತವನ್ನು ಕೋರಿದೆ. ಜಿಲ್ಲಾಧಿಕಾರಿಗಳು ಈ ಯೋಜನೆಯ ಪ್ರಸ್ತಾವವನ್ನು ಕೈಗಾರಿಕಾ ಇಲಾಖೆಗೆ ಸಲ್ಲಿಸಿದ್ದಾರೆ.

ಅಳಿವಿನ ಅಂಚಿನಲ್ಲಿರುವ ಕರಕುಶಲಕರ್ಮಿಗಳನ್ನು ಗುರುತಿಸುವುದು. ಅವರೆಲ್ಲರನ್ನೂ ಒಂದು ಕಡೆ ಕಲೆ ಹಾಕಿ ನೆಲೆ ಒದಗಿಸುವುದು ಈ ಯೋಜನೆಯ ಮೊದಲ ಹಂತ. ಬಡಗಿಗಳು, ಕಮ್ಮಾರರು, ಕುಂಬಾರರು, ಮೇದಾರರು ಮೊದಲಾದವರೆನ್ನೆಲ್ಲ ಸೇರಿಸಿ ಅವರಿಗೆ ಸೂಕ್ತ ಜಾಗ ನೀಡುವುದು. ನಂತರದಲ್ಲಿ ಅವರ ಅಗತ್ಯಗಳಿಗೆ ತಕ್ಕಂತೆ ಸಾಮಗ್ರಿಗಳನ್ನು ಒದಗಿಸುವುದು. ಮೇಜು, ಬುಟ್ಟಿ, ಮಡಿಕೆ, ಸಾಂಪ್ರದಾಯಿಕ ಕೃಷಿ ಸಲಕರಣೆಗಳ ಉತ್ಪಾದನೆಗೆ ಪ್ರೇರೇಪಿಸುವುದು. ಹೀಗೆ ಉತ್ಪಾದನೆಗೊಂಡ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು. ನಂತರದಲ್ಲಿ ಅಲ್ಲೊಂದು ವಸ್ತು ಪ್ರದರ್ಶನ ಕೇಂದ್ರ, ಗ್ರಾಮೀಣ ತಿನಿಸುಗಳ ಮಾರಾಟ ಮೊದಲಾದ ಉದ್ದೇಶಗಳನ್ನು ಹೊಂದಲಾಗಿದೆ.

‘ವಿಶ್ವವಿದ್ಯಾಲಯದ ಪ್ರಮುಖ ಯೋಜನೆಗಳಲ್ಲಿ ಕಾಯಕ ನಗರದ ಪರಿಕಲ್ಪನೆಯೂ ಒಂದು. ಈ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಜನಪ್ರತಿನಿಧಿಗಳೊಂದಿಗೆ ಸಭೆಯನ್ನೂ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆಯು ಕಾರ್ಯರೂಪಕ್ಕೆ ಬಂದಲ್ಲಿ ನಮ್ಮಲ್ಲಿನ ಗುಡಿ ಕೈಗಾರಿಕೆ, ಕರಕುಶಲ ಕಲೆಗಳ ಉಳಿವು ಮತ್ತು ಬೆಳವಣಿಗೆಗೆ ಸಹಕಾರಿಯಾಗಲಿದೆ ಎನ್ನುವ ಆಶಯ ನಮ್ಮದು’ ಎನ್ನುತ್ತಾರೆ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ.

‘ಈ ಹಿಂದೆ ನರೇಂದ್ರ ಗ್ರಾಮದಲ್ಲಿ ಇದೇ ಮಾದರಿಯ ಯೋಜನೆಯೊಂದನ್ನು ಸರ್ಕಾರವು ರೂಪಿಸಿತ್ತು. ಅದರ ಅನ್ವಯ ಸುಮಾರು 70 ಮನೆಗಳನ್ನು ಸರ್ಕಾರವು ನಿರ್ಮಿಸಿಕೊಟ್ಟಿತ್ತು. ಆದರೆ ಅಲ್ಲಿ ಹೆಚ್ಚಿನ ಕೆಲಸ ಆಗಿಲ್ಲ. ಈಗ ಅದೇ ಜಾಗದಲ್ಲಿ ಕಾಯಕ ನಗರ ಯೋಜನೆಯನ್ನು ಸಾಕಾರಗೊಳಿಸಲು ವಿಶ್ವವಿದ್ಯಾಲಯವು ಉದ್ದೇಶಿಸಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಮನ್ನಣೆ ನೀಡಿದ್ದಾರೆ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಅಧಿಕಾರಿ ಕೆ. ಪ್ರೇಮಕುಮಾರ.

‘ಒಮ್ಮೆ ಯೋಜನೆಯು ಅನುಷ್ಠಾನಗೊಂಡ ಬಳಿಕ ಅದಕ್ಕೆ ಪೂರಕವಾದ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ಇದೆ. ಅಲ್ಲೊಂದು ಗ್ರಾಮೀಣ ಪರಿಸರ ನಿರ್ಮಾಣವಾಗಬೇಕು. ಹಳ್ಳಿಯೊಂದರಲ್ಲಿ ಸಿಗುತ್ತಿದ್ದ ಎಲ್ಲ ಉತ್ಪನ್ನಗಳು ಅಲ್ಲಿ ಸಿಗಬೇಕು. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಗ್ರಾಮದ ಚಿತ್ರಣವನ್ನು ಕಟ್ಟಿಕೊಡಬೇಕು. ಪಿಜ್ಜಾ ಕಾರ್ನರ್ಗೆ ಪೂರಕವಾಗಿ ಇಲ್ಲಿ ದೇಸಿ ಆಹಾರ ಕೇಂದ್ರಗಳು ನಿರ್ಮಾಣಗೊಂಡು ನಮ್ಮ ಮಕ್ಕಳು ರೊಟ್ಟಿ, ಮುದ್ದೆಯ ಜೊತೆಗೆ ಚಕ್ಕಲಿ, ನುಪ್ಪಟ್ಟು, ರವೆಉಂಡೆಗಳ ಸವಿ ಸವಿಯುವಂತಾಗಬೇಕು. ಜಾನಪದ ಕಲೆಗಳು ನಿರಂತರವಾಗಿ ಪ್ರದರ್ಶನಗೊಳ್ಳುತ್ತಿರಬೇಕು. ದಾರಿಯಲ್ಲಿ ಹೋಗುವ ಒಬ್ಬ ಪ್ರವಾಸಿಗ ಈ ಜಾಗ ಹೊಕ್ಕರೆ ಅವನಿಗೆ ಇಡೀ ಹಳ್ಳಿಯ ಚಿತ್ರಣ ಸಿಗುವಂತಿರಬೇಕು. ಈ ಎಲ್ಲ ಆಶಯಗಳೂ ಈ ಯೋಜನೆಯ ಹಿಂದೆ ಇವೆ’ ಎನ್ನುತ್ತಾರೆ ಅವರು.

‘ಯೋಜನೆಯನ್ನು ಕಾರ್ಯರೂಪಕ್ಕೆ ತರಬಹುದು ಎಂದು ಶಿಫಾರಸು ಮಾಡಿ ಕೈಗಾರಿಕಾ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ’ ಎಂದು ಧಾರವಾಡ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.