ಶುಕ್ರವಾರ, ಜೂನ್ 18, 2021
28 °C

‘ಗಾಂಧೀಜಿ ಚಿಂತನೆ ಸಾರ್ವಕಾಲಿಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗಾಂಧೀಜಿ ಅವರನ್ನು ಕೇವಲ ಪಠ್ಯದಲ್ಲಿ ಓದಿದರೆ ಪ್ರಯೋಜ­ನ­ವಿಲ್ಲ. ಅವರ ಕುರಿತು ಹೆಚ್ಚು ಅಧ್ಯಯನ ನಡೆಸಿ ಅವರ ತತ್ವ, ಚಿಂತನೆಗಳನ್ನು ಜೀವನ­­ದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು  ಗಾಂಧಿವಾದಿ ಗೌತಮ್ ಬಜಾಜ್‌ ಹೇಳಿದರು.ಶೇಷಾದ್ರಿಪುರ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ‘ಗಾಂಧಿ–ವಿನೋಬ’ ಗಾಂಧಿವಾದಿ ಮತ್ತು ವಿದ್ಯಾರ್ಥಿ­ಗಳೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತ­ನಾಡಿದರು.

‘ಸದ್ಯದ ರಾಜಕೀಯ, ಆರ್ಥಿಕ ಪರಿಸ್ಥಿತಿ­ಯನ್ನು ಗಮನಿಸಿದರೆ ಗಾಂಧೀಜಿ ಮತ್ತು ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತವೆನಿ­ಸು­­ತ್ತವೆ’ ಎಂದರು.ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾ­ಲ­ಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌, ‘ಗಾಂಧೀಜಿ ಅವರನ್ನು  ಅರ್ಥಮಾಡಿಕೊಳ್ಳಲು ವಿನೋಬ ಭಾವೆ ಕೀಲಿಕೈ ಇದ್ದ ಹಾಗೆ’ ಎಂದರು.‘ಬಾಪು ಅವರಿಗೆ ದೇಶದ ಸಮಸ್ಯೆ ಚಿತ್ರಣ ಕಂಡರೆ, ವಿನೋಬ ತನ್ನೊಳಗೆ ಪರಿವರ್ತನೆ ಆಗಬೇಕು ಎಂದು ಬಯಸು­ತ್ತಿದ್ದರು. ಗಾಂಧೀಜಿ ಮತ್ತು ವಿನೋಬ ಅವರು ಪ್ರಯೋಗಗಳ ಮೂಲಕ ತತ್ವ­ಗಳನ್ನು ರೂಪಿಸಿ ಜೀವನದಲ್ಲಿ ಅಳವಡಿಸಿಕೊಂಡವರು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.