ಸೋಮವಾರ, ಜೂನ್ 21, 2021
22 °C

‘ಗುಲಾಬ್‌ ಗ್ಯಾಂಗ್‌’ ತೆರೆಗೆ ಕೋರ್ಟ್‌ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಶುಕ್ರವಾರ ಬಿಡುಗಡೆಗೆ ಸಜ್ಜಾಗಿದ್ದ ಬಹುನಿರೀಕ್ಷಿತ ಬಾಲಿವುಡ್‌ ಸಿನಿಮಾ ‘ಗುಲಾಬ್ ಗ್ಯಾಂಗ್‌’ ರಾಷ್ಟ್ರವ್ಯಾಪಿ ಬಿಡುಗಡೆಗೆ ದೆಹಲಿ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀಡಿದೆ.ಸಿನಿಮಾ ಬಿಡುಗಡೆ ವಿರುದ್ಧ ಸಾಮಾ­ಜಿಕ ಕಾರ್ಯಕರ್ತ ಸಂಪತ್‌ ಪಾಲ್‌ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ ಕಾರಣ ನ್ಯಾಯಾಧೀಶ ಸಂಜೀವ್‌ ಸಚ್‌ದೇವ್‌, ಮುಂದಿನ ವಿಚಾರಣೆ ವ­ರೆಗೂ (ಮೇ 8) ಸಿನಿಮಾ ಬಿಡುಗಡೆ­ಗೊ­ಳಿ­ಸದಂತೆ ನಿರ್ಮಾಪಕರಿಗೆ ಆದೇಶಿಸಿದರು. ಸಿನಿಮಾದಲ್ಲಿ ಬಾಲಿವುಡ್‌ ನಟಿಯ­ರಾದ ಮಾಧುರಿ ದೀಕ್ಷಿತ್‌, ಜೂಹಿ ಚಾವ್ಲಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.