ಭಾನುವಾರ, ಜೂನ್ 13, 2021
29 °C

‘ಗ್ರಾಮಸ್ಥರಲ್ಲಿ ಪರಿಸರ ಸ್ವಚ್ಛತೆ ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಜಾಗತೀಕರಣ ವೃದ್ಧಿಸುತ್ತಾ ಗ್ರಾಮೀಣ ಜೀವನ ಕಡಿಮೆಯಾಗಿ ಪರಿಸರ ನಗಣ್ಯವಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಜೆ.ಎಸ್.ವೀಣಾ ತಿಳಿಸಿದರು.ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಿಬಿರದ ಗೌರವ ಸಲಹೆಗಾರ ಅಮಿರ್‌ ಪಾಷ, ಎನ್ಎಸ್ಎಸ್ ಕಾರ್ಯ ಕ್ರಮಾಧಿಕಾರಿ ಡಾ.ಡಿ.ಸಿ. ರಾಮ ಕೃಷ್ಣಪ್ಪ ಮಾತನಾಡಿದರು.ಸಹ ಶಿಬಿರಾಧಿಕಾರಿ ರವಿಚಂದ್ರ, ಕುಂದಾಣ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ಪಿ.ಡಿ.ಓ ಜಯರಾಮೇ ಗೌಡ, ಮುಖ್ಯ ಶಿಕ್ಷಕ ಶಿವಪ್ರಸಾದ್, ಪ್ರಾಧ್ಯಾಪಕಿ ನೀರಜಾದೇವಿ, ರಜಿನಿ, ಚಂದ್ರಕಲಾ, ಲಲಿತಮ್ಮ, ದೊರೆ ಸ್ವಾಮಿ, ನಾಗಭೂಷಣ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.