ಬುಧವಾರ, ಜನವರಿ 22, 2020
16 °C

‘ಗ್ರಾಮೀಣ ಭಾಗದ ಸಂಸ್ಕೃತಿ ಉಳಿಸಿ ಬೆಳೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸಂಸ್ಕೃತಿಯ ಬೇರುಗಳನ್ನು ಹೊಂದಿರುವ ಸಹಜ ಕಲೆಯಿದ್ದು, ಅದನ್ನು ಇಂದಿನ ಮಕ್ಕಳಿಗೆ ಅಭ್ಯಾಸ ಮಾಡಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಶಾಸಕ ಡಿ.ಸುಧಾಕರ್ ಕರೆ ನೀಡಿದರು.ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.ಆಧುನಿಕ ಸಂಸ್ಕೃತಿಗೆ ಯುವಪೀಳಿಗೆ ಮಾರು ಹೋಗುತ್ತಿರುವ ಸಮಯದಲ್ಲಿ ಬದುಕಿನ ಅವಿಭಾಜ್ಯ ಭಾಗವಾಗಿ ಬೆಳೆದುಬಂದಿರುವ ಜಾನಪದ ಕಲೆಯನ್ನು ಉಳಿಸಿಕೊಂಡು ಹೋಗಲು ಈ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳು ಅನಿವಾರ್ಯವಾಗಿವೆ. ಎಲ್ಲಾ ಮಕ್ಕಳು ತಮ್ಮಲ್ಲಿರುವ ಕೀಳರಿಮೆಯನ್ನು ದೂರವಿಟ್ಟು ಈ ಸ್ಪರ್ಧೆಗಳಲ್ಲಿ ಭಾಗವಹಿಸು ವಂತಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಹೊಣೆಗಾರಿಕೆ ಹೆಚ್ಚಿನದ್ದಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತ ಅಧ್ಯಕ್ಷೆ ಲಕ್ಷ್ಮೀದೇವಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಚಂದ್ರಪ್ಪ, ಪ್ರಕಾಶ್, ಬಿ.ವಿ.ಮಾಧವ, ರಾಮಯ್ಯ, ರಮೇಶ್, ಲಾವಣ್ಯ, ಜಯರಾಜ್, ಕಂದಿಕೆರೆ ಸುರೇಶ್ ಬಾಬು, ಗೀತಾ, ಖಾದಿ ರಮೇಶ್, ಪರಮೇಶ್ವರಪ್ಪ, ಗುರುಮೂರ್ತಿ, ಹನುಮಂತರಾಯಪ್ಪ, ರಮೇಶ್‌ ನಾಯ್ಕ, ತಿಪ್ಪೇಸ್ವಾಮಿ, ಚಂದ್ರಣ್ಣ, ಮಹೇಶ್ವರಪ್ಪ, ಸತೀಶ್, ಶ್ರೀನಿವಾಸ್ ಹಾಜರಿದ್ದರು.ಹರ್ತಿಕೋಟೆ: ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರೌಢಶಾಲಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ ಉದ್ಘಾಟಿಸಿದರು.ತಾಲ್ಲೂಕು ಪಂಚಾಯ್ತಿ ಸದಸ್ಯ ಚಂದ್ರಪ್ಪ, ಉಪ ಪ್ರಾಂಶುಪಾಲ ರಾಮಚಂದ್ರಪ್ಪ, ಉಮಾದೇವಿ, ಪ್ರೇಮದಾಸ, ಮಹಾಂತೇಶ್, ಪ್ರತಾಪಸಿಂಹ, ದಯಾನಂದ್, ಮಾಯಣ್ಣ, ಕೆಂಚಲಿಂಗಪ್ಪ, ಹನುಮಂತರಾಯ, ತಿಪ್ಪೇಸ್ವಾಮಿ, ಎಚ್.ಸಿದ್ದಯ್ಯ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)